ರಾಜ್ಯ ಸುದ್ದಿಗಳು
ಶಿರಸಿ:
ವೀರಭದ್ರಗಲ್ಲಿಯ, ಪ್ರಸ್ತುತ ಹುಬ್ಬಳ್ಳಿಯಲ್ಲಿ ನೆಲೆಸಿರುವ ಮೋಹನ ಧಾಕಪ್ಪ ನವರಿಗೆ ಗೃಹರಕ್ಷಕ ದಳದಲ್ಲಿನ ಉತ್ತಮ ಸೇವೆಗಾಗಿ 2019ನೇ ಸಾಲಿನ ಮುಖ್ಯಮಂತ್ರಿ ಪದಕ ದೊರೆತಿದೆ.
ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಂಗಾರದ ಪದಕ ನೀಡಿ ಗೌರವಿಸಿದರು.
1981ರಲ್ಲಿ ಶಿರಸಿಯ ಹೋಮಗಾರ್ಡ್ಸ್ ನಲ್ಲಿ ಕೆಡೆಟ್ ಆಗಿ ಸೇರಿ 2009 ರವರೆಗೆ ನಿಷ್ಕಾಮ ಸೇವೆ ಸಲ್ಲಿಸಿದ, ನಂತರ ವೃತ್ತಿ ಜೀವನಕ್ಕಾಗಿ ಹುಬ್ಬಳ್ಳಿಯಲ್ಲಿ ನೆಲೆಸಿದರು ಗೃಹರಕ್ಷಕ ದಳದ ನಂಟನ್ನು ಬಿಡದೆ 2009ರಲ್ಲಿ ಹುಬ್ಬಳ್ಳಿಯ ಗೃಹರಕ್ಷಕ ಘಟಕದಲ್ಲಿ ಸೇವೆಯನ್ನು ಮುಂದುವರಿಸಿದ್ದರು. ಅಲ್ಲಿ ವಿವಿಧ ಹುದ್ದೆಗಳಲ್ಲಿ ಬಡ್ತಿ ಪಡೆದು ಪ್ರಸ್ತುತ ಸಾರ್ಜೆಂಟ್ ಪದವಿಯನ್ನು ಪಡೆದರು.
ಹುಬ್ಬಳ್ಳಿಯಲ್ಲಿ ಪೊಲೀಸ್ ಇಲಾಖೆಯಿಂದ ಸಂಚಾರ ನಿಯಂತ್ರಣದ ತರಬೇತಿ ಪಡೆದು ಸೀನಿಯರ್ ಟ್ರಾಫಿಕ್ ವಾರ್ಡನ್ ಆಗಿ ಬಡ್ತಿ ಪಡೆದು ಉತ್ತಮ ಸಂಚಾರ ನಿರ್ವಹಣೆಗಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಂದ ಪ್ರಶಂಸನಾ ಪತ್ರ ಪಡೆದಿದ್ದಾರೆ.
08-02-2016 ರಂದು ದೆಹಲಿಯಲ್ಲಿ ಬಸ್ಸಿನಲ್ಲಿ ನಡೆದ ನಿರ್ಭಯ ಮಹಿಳಾ ಅತ್ಯಾಚಾರ ಪ್ರಕರಣದ ನಂತರ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರ ರಕ್ಷಣೆ ಹಾಗೂ ನೈತಿಕ ಧೈರ್ಯ ನೀಡುವ ಉದ್ದೇಶದಿಂದ ಕೆ. ಎಸ್.ಆರ್ .ಟಿ.ಸಿ ಬಸ್ಸು ಗಳಲ್ಲಿ ಪೊಲೀಸ್ ಇಲಾಖೆ ನೇಮಿಸಿದ ಸ್ಕ್ವಾಡ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
08-02- 2016 ರಂದು ಹುಬ್ಬಳ್ಳಿಯಲ್ಲಿ ನಡೆದ ರೈಲ್ವೆ ಪೊಲೀಸ್ ಠಾಣೆ ಕಟ್ಟಡದ ಕುಸಿತದ ವೇಳೆಗೆ ರೈಲ್ವೆ ಇಲಾಖೆಯಿಂದ ನಗದು ಬಹುಮಾನ ಪಡೆದಿದ್ದಾರೆ.
ಗೃಹರಕ್ಷಕ ಇಲಾಖೆಯ ಪ್ರಗತಿಪರ ಅಗ್ನಿರಕ್ಷಣೆ ,ಪ್ರವಾಹ ರಕ್ಷಣೆ, ಲಘು ರಕ್ಷಣೆ ಮುಂತಾದ ವಿಷಯಗಳಲ್ಲಿ ತರಬೇತಿ ಪಡೆದು ಉತ್ತಮ ನಿರ್ವಹಣೆಗಾಗಿ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಸಹ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ವಾಟರಮೇನ್ ಶಿಪ್ ತರಬೇತಿ ಪಡೆದು ಉತ್ತರಭಾರತದ ಏಕೈಕ ವ್ಯಕ್ತಿಯಾಗಿದ್ದಾರೆ.
Be the first to comment