ವಾಲ್ಮೀಕಿಯು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಮತ್ತು ಪ್ರೇರಣೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ವಾಲ್ಮೀಕಿಯು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಮತ್ತು ಪ್ರೇರಣೆಯಾಗಿದ್ದಾರೆ ಎಂದು ಜಾಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪ್ತಿ ವಿಜಯ್‌ಕುಮಾರ್ ತಿಳಿಸಿದರು. ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ಆವರಣದಲ್ಲಿ ವಾಲ್ಮೀಕಿ ಜಯಂತಿಯ ಅಂಗವಾಗಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸಂಸ್ಕೃತದಲ್ಲಿ ರಾಮಾಯಣ ಬರೆದ ಮೊದಲ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿಯಾಗಿದ್ದಾರೆ. ಪ್ರತಿ ವರ್ಷ ಅ.೨೦ರಂದು ಇವರ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಆದರೆ ಕೋವಿಡ್ ಹರಡುವ ಭೀತಿಯಿಂದಾಗಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ ಈ ದಿನವನ್ನು ಪ್ರಗತಿ ದಿವಸ್ ಎಂದು ಕರೆಯುತ್ತಾರೆ. ಜೀವದಲ್ಲಿ ಯಾವಾಗಲೂ ಸಂತೋಷದಿಂದ ಇರಲು ಸಾಧ್ಯವಿಲ್ಲ. ಉತ್ಸಹದಿಂದ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬುವುದನ್ನು ತಿಳಿಸಿಕೊಟ್ಟಿದ್ದಾರೆ. ರಾಮಾಯಣದಲ್ಲಿ ಬರೆದಿರುವ ಪ್ರತಿ ಶ್ಲೋಕದ ಅರ್ಥವನ್ನು ತಿಳಿದುಕೊಳ್ಳಬೇಕು. ಲೋಕ ಕಲ್ಯಾಣಕ್ಕಾಗಿ ಇವರ ಕೊಡುಗೆ ಹೆಚ್ಚು ಇದೆ ಎಂದು ಹೇಳಿದರು. 

CHETAN KENDULI

ಗ್ರಾಪಂ ಉಪಾಧ್ಯಕ್ಷ ಎಚ್.ಬಾಲಸುಬ್ರಮಣ್ಯ ಮಾತನಾಡಿ, ವಾಲ್ಮೀಕಿ ಮಹರ್ಷಿಯ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಜೀವನದ ಸಾರಂಶವನ್ನು ಅರಿಯಬೇಕಾದರೆ ರಾಮಾಯಣವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಇಡೀ ಪ್ರಪಂಚಕ್ಕೆ ವಾಲ್ಮೀಕಿಯರು ನೀಡಿರುವ ಕೊಡುಗೆ ಅಪಾರವಾದದ್ದು ಎಂದರು.

ಈ ವೇಳೆಯಲ್ಲಿ ಗ್ರಾಪಂ ಸದಸ್ಯರಾದ ರಾಧಮ್ಮ, ಭವ್ಯ, ಸುಬ್ರಮಣ್ಯ, ವಿಜಯ, ಆನಂದ.ಸಿ.ಎಂ, ಮಂಜುಳ, ಶೋಭಾ, ಕೆಂಪರಾಜ್, ಅಪ್ಪಯ್ಯ, ಸುಚಿತ್ರ, ಮುನಿಯಪ್ಪ, ಮುನಿರತ್ನಮ್ಮ, ಜಯಮ್ಮ, ಅಶ್ವಿನಿ, ಶಿವಲಿಂಗಮ್ಮ, ಮಹೇಶ್‌ಕುಮಾರ್, ಆನಂದ್‌ಕುಮಾರ್, ಗೋಪಿನಾಥ್, ಲಕ್ಷ್ಮಮ್ಮ, ಸೌಮ್ಯ, ಪದ್ಮಾವತಿ, ಮುಖಂಡ ರಾಘವೇಂದ್ರ(ಯೋಗೇಶ್‌ಗೌಡ), ಗ್ರಾಪಂ ಪಿಡಿಒ ಉಷಾ, ಕಾರ್ಯದರ್ಶಿ ನರಸಿಂಹಮೂರ್ತಿ, ಸಿಬ್ಬಂದಿಗಳಾದ ಮೂರ್ತಿ, ರಾಜು, ವರುಣ್, ಇತರರು ಇದ್ದರು.

Be the first to comment

Leave a Reply

Your email address will not be published.


*