ಕವಡಿಮಟ್ಟಿ ಪಂಚಾಯತಿ ಅಧ್ಯಕ್ಷರಾಗಿ ಗುರುವಿನ ಉಪಾಧ್ಯಕ್ಷರಾಗಿ ನೀಲಮ್ಮ ಅವಿರೋಧ ಆಯ್ಕೆ…!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

 

ಮುದ್ದೇಬಿಹಾಳ:

ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸರೂರ ಗ್ರಾಮದ ಸಿದ್ರಾಮಯ್ಯ ಗುರುವಿನ ಹಾಗೂ ಉಪಾಧ್ಯಕ್ಷರಾಗಿ ಶೀರೋಳ ಗ್ರಾಮದ ನೀಲಮ್ಮ ಚಲವಾದಿ ಅವಿರೋಧವಾಗಿ ಆಯ್ಕೆಯಾದರು.



ಬೆಳಿಗ್ಗೆ 10 ಗಂಟೆಯಿಂದ ಚುನಾವಣೆ ಪ್ರಕ್ರೀಯೆಯನ್ನು ಪ್ರಾರಂಬಿಸಿದ್ದು ಅಧ್ಯಕ್ಷ ಸ್ಥಾನಕ್ಕೆ ಸಿದ್ರಾಮಯ್ಯ ಗುರುವಿನ(ಪಲ್ಲು) ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ನೀಲಮ್ಮ ಚಲವಾದಿ ಅವರ ನಾಪತ್ರ ಸಲ್ಲಿಕೆಯಾಗಿದ್ದು ಬರ‍್ಯಾವ ಅಭ್ಯರ್ಥಿಯಿಂದಲೂ ನಾಮಪತ್ರ ಸಲ್ಲಿಕೆಯಾಗದ ಕಾರಣ ಮಧ್ಯಾಹ್ನ 1 ಗಂಟೆಗೆ ಎರಡೂ ಸ್ಥಾನಗಳಿಗೆ ಚುನಾವಣೆ ಅಧಿಕಾರಿಯಾಗಿದ್ದ ಯು.ಬಿ.ಧರಿಕಾರಿ, ಸಿಬ್ಬಂದಿಗಳಾದ ಎಸ್.ಬಿ.ಬಿಜ್ಜೂರ, ಡಿ.ಬಿ.ದನದಮನಿ ಅವರು ಅವಿರೋಧ ಘೋಷಣೆಯನ್ನು ಮಾಡಿದರು.

ಬಿಜೆಪಿ ಕಾಂಗ್ರೆಸ್ ಸಮಪಾಲು:
ಕವಡಿಮಟ್ಟಿ ಗ್ರಾಮ ಪಂಚಾಯತಿ ಗದ್ದುಗೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ ಮುಖಂಡರು ಬಾರಿ ಪೈಪೋಟಿ ನಡೆಸಿದ್ದರು. ನಂತರ ಸೂರರ ಗ್ರಾಮದ ಬಿಜೆಪಿ ಕಾರ್ಯಕರ್ತ ಸಿದ್ರಾಮಯ್ಯನವರಿಗೆ ಅಧ್ಯಕ್ಷ ಸ್ಥಾನ ಹಾಗೂ ಶೀರೋಳ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತೆ ನೀಲಮ್ಮ ಚಲವಾದಿ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲು ಸರ್ವ ಸದಸ್ಯರೂ ಒಗ್ಗೂಡಿ ನಿರ್ಮಾಣ ತೆಗೆದುಕೊಂಡಿದ್ದು ಪಂಚಾಯತಿ ಅಧಿಕಾರವನ್ನು ಸಭಲವಾಗಿ ಹಂಚಿಯಾಯಿತು.





ವಿಜಯೋತ್ಸವ:
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಪಂಚಾಯತಿ ಆವರಣದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ವಿಜಯೋತ್ಸವದಲ್ಲಿ ಡಿಡಿಸಿ ಬ್ಯಾಂಕ ನಿರ್ದೇಶಕ ಸೋಮನಗೌಡ ಬಿರಾದಾರ, ರಾಮಣ್ಣ ರಾಜನಾಳ, ಮಾಜಿ ಉಪಾಧ್ಯಕ್ಷ ಸಿದ್ದಣ್ಣ ಪೂಜಾರಿ, ಮಾಜಿ ಸದಸ್ಯ ಶ್ರೀಶೈಲ ಹೂಗಾರ, ಕಾಡಯ್ಯ ಗುರುವಿನ, ಮಹಾದೇವಯ್ಯ ಗುರುವಿನ, ಮಾನಸಿಂಗ್ ಜಾಧವ, ಚನ್ನಪ್ಪಗೌಡ ಪಾಟೀಲ, ಸಿದ್ದು ಜೈನಾಪೂರ, ವಿಶ್ವನಾಥ ಮಾನೆ, ಕಾಶಿನಾಥ ಮಾನೆ, ಸಿದ್ರಾಮ ಜಬಂತ್ರಿ ಇದ್ದರು.
ಚುನಾವಣೆ ಪ್ರಕ್ರೀಯೆಯಲ್ಲಿ ಕವಡಿಮಟ್ಟಿ ಪಂಚಾಯತಿಯ ಸದಸ್ಯರಾದ ಹಣಮಂತ ಹಂಡರಗಲ್ಲ,ಸಿದ್ದಮ್ಮ ಬಳಬಟ್ಟಿ, ಮಲ್ಲಿಕಾರ್ಜುನ ಹಿರೇಮಠ, ಶಕುಂತಲಾ ಹಂಡರಗಲ್ಲ,ಶಿವಪುತ್ರ ಬಿರಾದಾರ, ಲಕ್ಮಿಂಬಾಯಿ ಕುರಿ, ಶ್ರೀದೇವಿ ಬಿರಾದಾರ, ದ್ಯಾವಪ್ಪ ಹುಣಶ್ಯಾಲ, ಮೀನಾಕ್ಷಿ ನಾಯಕ, ಮಂಕಯ್ಯ ಪೂಜಾರಿ, ಶರಣಮ್ಮ ಮಲಗಲದಿನ್ನಿ, ಜಯಶ್ರೀ ವಾಲಿಕಾರ, ಪುಷ್ಪಾ ಮಾನೆ, ಪಿಡಿಓ ಪಿ.ಎಸ್.ಕಸನಕ್ಕಿ ಇದ್ದರು. ಸಿಪಿಐ ಆನಂದ ವಾಘ್ಮೋಡೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ, ಸಂಗನಗೌಡ ಬಿರಾದಾರ ಚುನಾವಣೆ ಪ್ರಕ್ರೀಯೆಗೆ ಭ್ರದೆತೆ ಒದಗಿಸಿದರು.

Be the first to comment

Leave a Reply

Your email address will not be published.


*