ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ತಾಲೂಕಿನಲ್ಲಿ ತುರುಸಿನ ವಾತಾವರಣ ಸೃಷ್ಠಿ ಮಾಡಿದ್ದ 20 ಗ್ರಾಮ ಪಂಚಾಯತಿಗಳ ಸದಸ್ಯರುಗಳ ಚುನಾವಣೆಯು ಈಗ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಕುತುಹಲು ಗಗನಕ್ಕೆ ಏರಿದಂತಾಗಿದೆ. ಈಗಾಗಲೇ ಪಂಚಾಯತಿ ಸದಸ್ಯರ ಚುನಾವಣೆ ಫಲಿತಾಂಶ ಹೊರಬಿದ್ದು ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಹೊರಬಿಳುತ್ತಿದ್ದಂತೆಯೇ ಬಹುತೇಕ ಪಂಚಾಯತಿ ಸದಸ್ಯರುಗಳು ಹೊರ ರಾಜ್ಯಗಳಾದ ಗೋವಾದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುವಂತೆ ಎರಡೂ ರಾಷ್ಟೀಯ ಪಕ್ಷದ ಮುಖಂಡರು ನೋಡಿಕೊಂಡಿದ್ದಾರೆ. ಆದರೆ ಯಾವ ಪಕ್ಷಕ್ಕೆ ಹೆಚ್ಚಿನ ಅಧಿಕಾರ ಸಿಗುವುದೊ ಎನ್ನುವುದು ಕಾದು ನೋಡಬೇಕಿದೆ.
ನಾಳೆ ಕವಡಿಮಟ್ಟಿ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ:
ಈಗಾಗಲೇ ಮುದ್ದೇಬಿಹಾಳ ತಾಲೂಕಿನ 20 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಫೆ.3 ರಿಂದ ಫೆ.9ರ ವರೆಗೆ ದಿನಾಂಕ ನಿದಗಿ ಮಾಡಿರುವ ಜಿಲ್ಲಾ ಚುನಾವಣಾ ಆಯೋಗವು ಫೆ.3 ರಂದು ಮೊದಲ ದಿನದಲ್ಲಿ ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯನ್ನು ನಿಗದಿ ಮಾಡಿದೆ.
ಮೊದಲ ಚುನಾವಣೆಯಲ್ಲಿಯೇ ಬಿಜೆಪಿ ಜಯಬೇರಿ…?
ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಫ.3 ರಂದು ಚುನಾವಣೆ ನಡೆಯಲಿದ್ದು ಈಗಾಗಲೇ ಪಂಚಾಯತಿ ಒಟ್ಟು 15 ಸದಸ್ಯರಲ್ಲಿ 11 ಸದಸ್ಯರುಗಳು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಲಾುಗುತ್ತಿದ್ದು ಅಧ್ಯಕ್ಷ ಗದ್ದುಗೆಯು ಪಂಚಾಯತಿಯ ಕ್ಷೇತ್ರದಲ್ಲಿ ಹೆಚ್ಚಿನ ಮತದಾನವಿರುವ ಸರೂರ ಗ್ರಾಮಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನವು ಶಿರೋಳ ಗ್ರಾಮಕ್ಕೆ ಲಭಿಸಲಿವೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಅಧ್ಯಕ್ಷರಾಗಿ ಸಿದ್ರಾಮಯ್ಯ ಗುರುವಿನ, ಉಪಾಧ್ಯಕ್ಷರಾಗಿ ನೀಲಮ್ಮ ಚಲವಾದಿ…?
ಹಿಂದುಳಿದ ವರ್ಗ ಅ ಕ್ಕೆ ಮೀಸಲಾಗಿರುವ ಕವಡಿಮಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನವನ್ನು ಸರೂರ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ 275 ಮತಗಳನ್ನು ಪಡೆದು ಸದಸ್ಯರಾಗಿ ಆಯ್ಕೆಗೊಂಡಿರುವ ಸಿದ್ರಾಮಯ್ಯ ರೇವಣಯ್ಯ ಗುರುವಿನ ಅವರು ಅಲಂಕರಿಸಲಿದ್ದು ಎಸ್ಸಿ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಶಿರೋಳ ಗ್ರಾಮದ ಎಸ್ಸಿ ಮಹಿಳಾ ಮೀಸಲಾತಿ ಕ್ಷೇತ್ರದಿಂದ 382 ಮತಗಳನ್ನು ಪಡೆದು ಸದಸ್ಯರಾಗಿ ಆಯ್ಕೆಯಾಗಿರುವ ನೀಲಮ್ಮ ಜುಮ್ಮಣ್ಣ ಚಲವಾದಿ ಅವರು ಅಲಂಕರಿಸಲಿದ್ದಾರೆ ಎಂದು ಮೂಲ ಸಮೀಕ್ಷೇಯಿಂದ ತಿಳಿದು ಬಂದಿದೆ.
Be the first to comment