ನೊಂದವರ ಬೆಳಕು, ಹೃದಯವಂತ, ಯುವಕರ ಕಣ್ಮಣಿ ಎಲ್ಲರ ಅಚ್ಚು ಮೆಚ್ಚಿನ ನಾಯಕ ಮಹಾಲಿಂಗೇಶ ನಾಡಗೌಡರ ಕೆಲೂರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆ

ವರದಿ: ಶರಣಪ್ಪ ಬಾಗಲಕೋಟೆ

ಬಾಗಲಕೋಟೆ : ಇಲಕಲ್ಲ ತಾಲೂಕಿನ ಕೆಲೂರ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿದ್ದು ಇಂದು ನಡೆದ ಚುನಾವಣೆಯಲ್ಲಿ 4 ನೇ ವಾರ್ಡಿನ ಸದಸ್ಯ ಮಹಾಲಿಂಗೇಶ ನಾಡಗೌಡರ ಅವಿರೋಧವಾಗಿ ಆಯ್ಕೆಯಾದರು.

ನೂತನವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಹಾಲಿಂಗೇಶರವರು ಕೆಲೂರ ಗ್ರಾಮದಲ್ಲಿ ಅನೇಕ ಅಪೂರ್ಣಗೊಂಡ ಕನಸುಗಳನ್ನು ಈಡೇರಿಸುವ ತವಕದಲ್ಲಿದ್ದು , ಜಿಲ್ಲೆಗೆ ನಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಸಂಕಲ್ಪವನ್ನು ಹೊಂದಿದ್ದೇನೆ ಎಂದರು.

ಸದಸ್ಯರ ವಿಶ್ವಾಸದೊಂದಿಗೆ ಉತ್ತಮ ಆಡಳಿತ ನಿರ್ವಹಿಸುವೆ ವಿಶ್ವಾಸ, ಭರವಸೆಗೆ ಚ್ಯುತಿ ಬರದಹಾಗೆ ಪಾರದರ್ಶಕವಾಗಿ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ನೂತನ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಅಂಬಿಗ ನ್ಯೂಸ್ ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತಿ ಸದಸ್ಯರಿಗೂ, ಗ್ರಾಮದ ಹಿರಿಯರಿಗೂ, ಸ್ನೇಹಿತರಿಗೂ ಎಲ್ಲ ಮತದಾರ ಬಾಂಧವರಿಗೂ ಅಭಿನಂದನೆಗಳನ್ನು ತಿಳಿಸಿದರು.

Be the first to comment

Leave a Reply

Your email address will not be published.


*