ರಾಜ್ಯ ಸುದ್ದಿಗಳು
ಬೆಂಗಳೂರು:
ಕೇಂದ್ರ ಸರಕಾರ ಘೋಷಣೆ ಮಾಡಿದ ಬಜೇಟ್ ದೇಶದಲ್ಲಿರುವ ಬಹುಸಂಖ್ಯಾತರಾಗಿರುವ ಕೃಷಿಕರು ಮತ್ತು ಕೃಷಿ ಕಾರ್ಮಿಕರನ್ನು ಆರ್ಥಿಕವಾಗಿ ಮೇಲೆತ್ತು ಬಜೇಟ್ ಇದಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.
ಈ ಕುರಿತು ಅಂಬಿಗ ನ್ಯೂಸ್ ತಂಡಕ್ಕೆ ಮಾತನಾಡಿದ ಅವರು, ದೇಶದ 16.5 ಲಕ್ಷ ಕೋಟಿ ಕೃಷಿ ಸಾಲ ಕೊಡುವ ಘೋಷಣೆಗೆ 45 ಕೋಟಿ ರೈತ ಕುಟುಂಬಗಳಿಗೆ ಲಾಬ ದೊರಕಲಿದೆ. ಇದರೊಂದಿಗೆ ರೈತ ಬೆಳೆಗಳ ಬೆಲೆಯೂ ದ್ವೀಗುಣ ಮಾಡುವ ಕನಸು ಕಂಡಿದ್ದ ಪ್ರಧಾನಿ ಮೋದಿಯವರು ನನಸಿಗೆ ತಂದಂತಾಗಿದೆ. ಇನ್ನೂ ದೇಶದ ಎಲ್ಲಾ ಎಪಿಎಂಸಿಯಲ್ಲಿ ಇ-ಮಾರುಕಟ್ಟೆ ಮಾಡುವ ವಿಧಾನವೂ ಬಜೇಟನಲ್ಲಿ ಘೋಷಣೆ ಮಾಡಲಾಗಿದೆ. ಯಾವ ಬೆಳೆಕಾಳು ಅಗ್ಗದ ಬೆಳೆಯಲ್ಲಿ ಆಮದ ಮಾಡಲಾಗುತ್ತಿದೆಯೋ ಅದರ ಮೇಲೆ ಕೃಷಿ ಸೇಸ್ ಮಾಡಿದ್ದು ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋಧಿಯವರಿಗೆ ಹಾಗೂ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
Be the first to comment