ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ಪಟ್ಟಣಕ್ಕೆ ಪಿಎಸ್ಐ ಯಾಗಿ ಆಗಮಿಸಿದ್ದ ಮಲ್ಲಪ್ಪ ಮಡ್ಡಿ ಅವರು ಹಿಂದೆಂದೂ ಪಟ್ಟಣದಲ್ಲಿ ಕಾಣದಂತಹ ಸಾರ್ವಜನಿಕರ ಸುರಕ್ಷದವನ್ನು ನೀಡಿದ್ದಾರೆ ಎಂದು ಸಿಪಿಐ ಆನಂದ ವಾಗ್ಮೋಡೆ ಹೇಳಿದರು.
ಮುದ್ದೇಬಿಹಾಳ ತಾಲೂಕಿಗೆ ಕಳೆದ 2 ವರ್ಷಗಳ ಹಿಂದೆ ಪಿಎಸ್ಐ ಆಗಿ ಬಂದ ಮಲ್ಲಪ್ಪ ಮಡ್ಡಿ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲ್ಲಿನ ಜನತೆಯ ಸುರಕ್ಷಾತೇಗಾಗಿ ಸ್ಥಳೀಯ ವ್ಯಾಪಾರಸ್ಥರನ್ನು ಒಗ್ಗೂಡಿಸಿ ಅವರಿಂದ ಧಾನವಾಗಿ ಸುಮಾರು 16 ಲಕ್ಷ ಹಣ ಸಂಗ್ರಹಿಸಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು ಹಾಗೂ ನಾಲತವಾಡ ಗ್ರಾಮದಲ್ಲೂ 6.5 ಲಕ್ಷ ದೇಣಿಗೆ ಸಂಗ್ರಹಿಸಿ ಅಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಿದ್ದು ವಿಶೇಷವಾಗಿದೆ. ಈ ಕಾರ್ಯಕ್ಕೆ ಮಡ್ಡಿ ಅವರಿಗೆ ಸಾಕಷ್ಟು ಅಭಿನಂದನೆಗಳು ಸಲ್ಲುತ್ತವೆ ಎಂದು ಅವರು ಹೇಳಿದರು.
ಸಮಾಜ ಸೇವಕ ಬವರಾಜ ನಂದೀಕೆಶ್ವರಮಠ ಮಾತನಾಡಿ, ಪಟ್ಟಣಕಕ್ಕೆ ಪಿಎಸ್ಐ ಆಗಿ ಆಗಮಿಸಿದ ಮಡ್ಡಿ ಅವರು ತಾಲೂಕಿಗೆ ಒಬ್ಬ ಸಾಂಗ್ಲಿಯಾನಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂತಹ ಅಧಿಕಾರಿಗಳು ಸಿಪಿಐ ಆಗಿ ಮರಳಿ ಇದೆ ತಾಲೂಕಿಗೆ ಆಗಮಿಸಬೇಕು ಏನುವುದು ಜನರ ಬೇಡಿಕೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ತಾಲೂಕಿನ ವಿವಿಧ ಸಂಘಟನೇಯ ಪ್ರಮುಖರು ಸೇರಿದಂತೆ 50ಕ್ಕೂ ಹೆಚ್ಚಿನ ಜನರು ಇದ್ದರು.
Be the first to comment