ಜಿಲ್ಲಾ ಸುದ್ದಿಗಳು
ಹೊನ್ನಾವರ
ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸುಮಾರು ಎಳುವರೆ ಕೋಟಿ ರೂಪಾಯಿಗಳ ಅನುದಾನದ ಕ್ರಿಯಾಯೋಜನೆ ರೂಪಿಸಲಾಗಿದ್ದು ಎರಡು ಮೂರು ತಿಂಗಳೊಳಗೆ ಕೆಲಸ ಪ್ರಾಂರoಭವಾಗಲಿದೆ ಎಂದು ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕರವರು ತಿಳಿಸಿದ್ದಾರೆ.ಕೆಲವು ದಿನಗಳ ಹಿಂದೆ ಮಂಕಿಯ ಕೆಲವು ಕಾಂಗ್ರೇಸ್ ಮುಖಂಡರು ಹದಗೆಟ್ಟಿರುವ ಮಂಕಿ ಬಣಸಾಲೆ ರಸ್ತೆ ದುರಸ್ತಿಗೆ ಸಂಬoಧ ಪಟ್ಟಂತೆ ತಹಸೀಲ್ದಾರರಿಗೆ ಮನವಿ ನೀಡಿದ ಹಿನ್ನೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ಪ್ರಾರಂಭ ಮೊದಲ ಹಂತದಲ್ಲಿ ಮಂಕಿ ಬಣಸಾಲೆ ರಸ್ತೆಗೆ ಪ್ರಥಮ ಹಂತದಲ್ಲಿ ನಾಲ್ಕುವರೆ ಕೋಟಿ ಕೋಟಿ ರೂಪಾಯಿ ಅನುದಾನವನ್ನು ಗ್ರಾಮೀಣ ಅಭಿವೃದ್ದಿ ಇಲಾಖೆಯಡಿ ಮಂಜೂರು ಮಾಡಲಾಗಿತ್ತು. ಆದರೆ ಮಂಕಿ ಪಟ್ಟಣ ಪಂಚಾಯತವಾಗಿ ಮೇಲ್ದರ್ಜೆಗೆ ಎರಿದ ಹಿನ್ನಲೆಯಲ್ಲಿ ಅನುದಾನ ರದ್ದುಗೊಂಡಿತ್ತು. ಆನಂತರ ಮಂಕಿ ಬಣಸಾಲೆ ಸಂಪರ್ಕಿಸುವ ಎಲ್ಲಾ ರಸ್ತೆಗೆ ಎಳುವರೆ ಕೋಟಿ ರೂಪಾಯಿ ಅನುದಾನದ ಕ್ರಿಯಾ ಯೋಜನೆ ಮಾಡಲಾಗಿದೆ. ಈ ಕುರಿತು ಯಾರು ಯಾರಿಗೂ ಮನವಿ ನೀಡಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲಾ ಎಂದು ಕಾಂಗ್ರೇಸ ಮುಖಂಡರಿಗೆ ತಿರುಗೇಟು ನೀಡಿದ್ದಾರೆ. ಮಂಕಿ ಮಾವಿಕಟ್ಟಾ ರಾಷ್ಟಿçÃಯ ಹೆದ್ದಾರಿಯಿಂದ ಬಣಸಾಲೆ ಮೂಲಕ ಆಸ್ಪತ್ರೆಗೆ ಹೋಗುವ ಮುಖ್ಯ ರಸ್ತೆಯು ಸಂಪೂರ್ಣ ಹದೆಗೆಟ್ಟು ಹೋಗಿದ್ದು ಸಾರ್ವಜನಿಕರ ಓಡಾಟಕ್ಕೆ ತುಂಬಾ ಅನಾನೂಕೂಲತೆ ಉಂಟಾಗಿದೆ. ಹೊಸ ರಸ್ತೆ ನಿರ್ಮಾಣವಾಗುವ ಪೂರ್ವದಲ್ಲಿ ತುರ್ತು ದುರಸ್ತಿಯಾದರು ಮಾಡಬೇಕೆಂದು ಮಂಕಿ ಬಣಸಾಲೆ ಭಾಗದ ಜನರ ಆಗ್ರಹವಾಗಿದೆ.
Be the first to comment