ಜಿಲ್ಲಾ ಸುದ್ದಿಗಳು
ಜೋಯಿಡಾ:
ತಾಲೂಕಿನ ಸಿದ್ದೇಶ್ವರ ಕೇರೆಯಲ್ಲಿ ನೂರಾರು ದೊಡ್ಡ ಗಾತ್ರದ ಮೀನುಗಳು ಸಾವನ್ನಪ್ಪಿದ್ದು, ತಾಲೂಕಾ ಆಡಳಿತ, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಈ ಮೀನುಗಳ ಅಸ್ವಾಭಾವಿಕ ಸಾವಿನ ಕಾರಣ ಪತ್ತೆ ಹಚ್ಚಬೇಕಾಗಿದೆ.
ಸುಮಾರು 5 ಎಕರೆಯಷ್ಟು ದೊಡ್ಡದಾಗಿರುವ ಈ ಸಿದ್ದೇಶ್ವರ ಕೇರೆ ಬೇಸಿಗೆಯಲ್ಲೂ ಸಹ ಬತ್ತದೇ ನೀರಿನಿಂದ ತುಂಬಿರುತ್ತದೆ. ವನ್ಯ ಜೀವಿಗಳ ಬಾಯಾರಿಕೆ ತಣಿಸುವ ಜೊತೆಗೆ ನೂರಾರು ವಿವಿಧ ಪ್ರಭೇದದ ಪಕ್ಷಿಗಳ ಆವಾಸ ತಾಣ ಈ ಕೆರೆ. ಈ ಕೆರೆಗೆ ವಿವಿಧ ವಲಸೆ ಪಕ್ಷಿಗಳು ಸಹ ಪ್ರತಿ ವರ್ಷ ಬರುತ್ತದೆ. ಈಗ ಕಳೆದ ಮೂರು ದಿನಗಳಿಂದ
ಮೂರರಿಂದ ನಾಲ್ಕು ಕೆಜಿ ಗಾತ್ರದ ನೂರಾರು ಮೀನುಗಳು ಸಾವನ್ನಪ್ಪಿ ಕೆರೆಯಲ್ಲಿ ತೇಲುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಈ ಮೀನುಗಳ ಸಾವಿನ ಕಾರಣ ಪತ್ತೆ ಮಾಡಿ ಇಲ್ಲಿನ ಪರಿಸರ ಜೊತೆಗೆ ಅಪರೂಪದ ಪಕ್ಷಿ ಸಂಕುಲಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ.
ತಹಶೀಲ್ದಾರ ಸಂಜಯ ಕಾಂಬಳೆಯವರ ಗಮನಕ್ಕೆ ಈ ವಿಷಯ ತಂದಾಗ ಈ ಬಗ್ಗೆ ಮೀನುಗಾರಿಕಾ ಅಧಿಕಾರಿಗಳೊಂದಿಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
Be the first to comment