ಜಿಲ್ಲಾ ಸುದ್ದಿಗಳು
ಶಿರಸಿ
ರಾಜ್ಯಾದ್ಯಂತ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ತರಗತಿ ಬಹಿಷ್ಕರಿಸಿ ೨೫ ದಿನಗಳಿಂದ ಧರಣಿ ಜರಗುತ್ತಿದ್ದರೂ, ಸರಕಾರ ಸ್ಪಂಧಿಸದೇ ಇರುವುದು ಖಂಡನಾರ್ಹ. ವಿದ್ಯಾರ್ಥಿಗಳ ಶೈಕ್ಷಣಿಕ ಮುಂದಿನ ಭವಿಷ್ಯದ ಹಿತದಿಂದ ರಾಜ್ಯಪಾಲರು ಮಧ್ಯಪ್ರವೆಶಿಸಿ, ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸಾಮಾಜಿಕ ಹೋರಾಟಗಾರರ ರವೀಂದ್ರ ನಾಯ್ಕ ರಾಜ್ಯಪಾಲರಿಗೆ ಕೋರಿದ್ದಾರೆ.
ಕಳೆದ ಡಿಸೆಂಬರ್ ಹತ್ತರಿಂದ ಜರಗುತ್ತಿರುವ ಅತಿಥಿ ಉಪನ್ಯಾಸಕರ ನ್ಯಾಯಯುತ ಸಮಸ್ಯೆಗಳಿಗೆ ಸರಕಾರ ಸ್ಫಂದಿಸದೇ ಇರುವುದು ವಿಷಾದಕರ. ನೆಟ್ ಮತ್ತು ಸ್ಲೆಟ್ ಮುಗಿಸಿದವರಿಗೆ ಅನುಕ್ರಮವಾಗಿ ಹನ್ನೋಂದು ಸಾವಿರ ಹಾಗೂ ಪಿಹೆಚ್‌ಡಿ ಮಾಡಿದವರಿಗೆ ಹದಿಮೂರು ಸಾವಿರ ವೇತನ ನೀಡುತ್ತಿರುವುದು ಅವೈಜ್ಞಾನಿಕ. ಈ ಹಿನನೆಲೆಯಲ್ಲಿ ಅತಿಥಿ ಉಪನ್ಯಾಸಕರ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನ ವ್ಯಕ್ತಪಡಿಸುತ್ತೇನೆಂದು ಅವರು ತಿಳಿಸಿದ್ದಾರೆ.
ಕನಿಷ್ಟ ವೇತನದಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ಪಿಹೆಚ್‌ಡಿ ಪಡೆದವರಿಗೆ ಮೂವತ್ತೆöÊದು ಸಾವಿರ, ನೆಟ್ ಮತ್ತು ಸ್ಲೆಟ್ ಮುಗಿಸಿದವರಿಗೆ ಕನಿಷ್ಟ ಮೂವತ್ತು ಸಾವಿರ ಹಾಗೂ ಸೇವಾ ಭದ್ರತೆ ನಿಡುವ ದಿಶೆಯಲ್ಲಿ ಸರಕಾರಕ್ಕೆ ಸೂಕ್ತ ನಿರ್ಧೇಶನ ನೀಡಬೇಕೆಂದು ಅವರು ರಾಜ್ಯಪಾಲರಿಗೆ ಕೋರಿದ್ದಾರೆ.
ಕಾರ್ಮಿಕರಿಗಿಂತ ಕನಿಷ್ಟ: ಇಂದಿನ ದಿನಗೂಲಿ ಪರಿಣಿತ ಕಾರ್ಮಿಕರಿಗೆ ದಿನಕ್ಕೆ ೫೬೦ ಘೋಷಿಸಿದ ಸರಕಾರ, ಪರಿಣಿತ ಉಪನ್ಯಾಸಕರಿಗೆ ಪರಿಣಿತ ಕಾರ್ಮಿಕರಿಕ್ಕಿಂತ ಕನಿಷ್ಟ ವೇತನ ನಿಡುತ್ತಿರುವುದು ದುರದೃಷ್ಟಕರ ಎಂದು ರವೀಂದ್ರ ನಾಯ್ಕ ಸರಕಾರದ ನೀತಿಯನ್ನು ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ಆಕ್ಷೇಪಿಸಿದ್ದಾರೆ.
Be the first to comment