ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಸರಕಾರಿ ಜನಸಂಪನ್ಮೂಲಗಳ(ಕೆರೆಗಳ) ಮೀನು ಪಾಶುವಾರು ಹಕ್ಕನ್ನು ೨೦೨೧-೨೨ನೇ ಮೀನುಗಾರಿಕೆ ಫಸಲೀ ವರ್ಷದಿಂದ ೨೦೨೫-೨೬ನೇ ಮೀನುಗಾರಿಕೆ ಫಸಲೀ ವರ್ಷದವರೆಗೆ ಗರಿಷ್ಠ ೫ ವರ್ಷಗಳ ಅವಧಿಗೆ ಸರಕಾರದ ನಿಯಮಗಳನುಸಾರ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ದೇವನಹಳ್ಳಿ ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ.ಕೆ.ಭರತ್ ಹೇಳಿದರು.ಟೆಂಡರ್ ಅರ್ಜಿಗಳನ್ನು ಡಿ.೧೭ರಿಂದ ಪ್ರಾರಂಭಿಸಿದ್ದು, ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ ಡಿ.೩೧ರ ೪.೩೦ಗಂಟೆ ಒಳಗೆ ಅವಕಾಶ ಇರುತ್ತದೆ. ಹರಾಜು ನಡೆಸುವ ದಿನವು ಜ.೧, ೨೦೨೨ರ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ. ಟೆಂಡರ್ ಮತ್ತು ಹರಾಜಿನಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ನಿಗದಿತ ದಿನಾಂಕದೊಳಗೆ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಅರ್ಜಿಗೆ ಲಗತ್ತಿಸಿರುವ ಷರತ್ತು ಮತ್ತು ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಮೀನುಪಾಶುವಾರು ಹಕ್ಕಿನ ಟೆಂಡರ್ ಮತ್ತು ಹರಾಜಿಗೆ ಸೇರುವ ದೇವನಹಳ್ಳಿ ತಾಲೂಕಿನ ಆಲೂರುದುದ್ದನಹಳ್ಳಿಯ ಕೆರೆ, ಕುಂದಾಣ ಗ್ರಾಪಂನ ಬನ್ನಿಮಂಗಲ ಅಮಾನಿಕೆರೆ, ನಲ್ಲೂರಿನ ಬಿದಲಪುರ ಕೆರೆ, ಬೂದಿಗೆರೆ ಅಮಾನಿಕೆರೆ, ಅಣ್ಣೇಶ್ವರ ಗ್ರಾಪಂನ ಚಿಕ್ಕಸಣ್ಣೆ ಬಂಡೆ ಕೆರೆ, ವಿಜಯಪುರ ಪುರಸಭೆ ವ್ಯಾಪ್ತಿಯ ವಿಜಯಪುರ ಅಮಾನಿಕೆರೆ, ಜಾಲಿಗೆ ಗ್ರಾಪಂನ ಅರದೇಶನಹಳ್ಳಿ ಕೆರೆಗಳಾಗಿರುತ್ತದೆ ಎಂದು ಮಾಹಿತಿ ನೀಡಿದರು.
Be the first to comment