ಗ್ರಾಮೀಣ ಭಾಗದ ಪ್ರಾಮಾಣಿಕ ರಂಗ ಭೂಮಿ ಕವಿಗಳಿಗೆ ಸರ್ಕಾರ ವೇದಿಕೆ ಒದಗಿಸಿ ಪ್ರೋತ್ಸಾಹಿಸಲಿ..!!!

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

ಜಿಲ್ಲಾ ಸುದ್ದಿಗಳು 

ರಾಯಚೂರು (ಮಸ್ಕಿ):

CHETAN KENDULI

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬೈಲಗುಡ್ಡ ಗ್ರಾಮದಲ್ಲಿ ಒಬ್ಬ ರಂಗಭೂಮಿ ಕವಿ ಇರುವುದು ನಮ್ಮೆಲ್ಲರಿಗೆ ಸಂತೋಷದ ವಿಷಯ. ದುರುಗೇಶ ಎಂ. ಹೊಸಮನಿ ಬೈಲಗುಡ್ಡ ಇವರು 2005 ರಿಂದ ರಿಂದಲೇ ತಮ್ಮ ಚಿಕ್ಕ ವಯಸ್ಸಿನಿಂದಲೂ ಕಥೆ,ಕವಿತೆ, ನಾಟಕಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿರುವ ಒಬ್ಬ ಯುವ ಕವಿ. ಹಿತ ಶತ್ರುಗಳು ಏನೇ ಅಂದರು ಅದನ್ನು ತಲೆ ಕೆಡಿಸಿಕೊಳ್ಳದೆ ಎಲ್ಲರೂ ನಮ್ಮವರೇ ಎಂಬ ನಿಷ್ಕಲ್ಮಶ ಹೃದಯಿ.ಇಂತಹ ದಿನಮಾನಗಳಲ್ಲಿಯು ನಿಷ್ಕಲ್ಮಶದ ಭಾವನೆಯನ್ನು ಹೊಂದಿರುವ ಇವರು ನಿಜಕ್ಕೂ ವಿಸ್ಮಿತಾ. ರಂಗ ಭೂಮಿಯ ಹಾಗೂ ತನ್ನ ಜೀವನದಲ್ಲಿ ಹಾದು ಹೋಗುವ ಎಲ್ಲರನ್ನೂ ತಮ್ಮ ಕುಟುಂಬದ ಅಣ್ಣ – ತಮ್ಮಂದಿರು ಎಂದು ಭಾವಿಸಿ ಯಾರೇ ಏನೇ ಎಂದರು ನನ್ನ ದಾರಿ ನನಗೆ ಎಂಬ ಮನಸ್ಸಿನ ಗುರಿಯನ್ನು ಹೊಂದಿದ ಒಬ್ಬ ಗ್ರಾಮೀಣ ಭಾಗದ ಪ್ರಾಮಾಣಿಕ ಯುವ ಕವಿ ಎಂದರೇ ತಪ್ಪಾಗಲಾರದು. ಇವರು ಮೊದಲಿನಿಂದಲು ತಮ್ಮ ಜೀವನವೇ ರಂಗ ಭೂಮಿ ಎಂದು ಕೊಂಡು ಬೆಳೆದ ವ್ಯಕ್ತಿ. ಇತ್ತೀಚೆಗೆ ತಮ್ಮ ಜೀವನದ ಏಳು ಬೀಳುಗಳನ್ನು ಮರೆಯಲು ಹಾಗೂ ಕಛೇರಿಯ ಮಾನಸಿಕ ಒತ್ತಡವನ್ನು ಮರೆಮಾಚಿಸಲು ತನ್ನ ಬರವಣಿಗೆಯನ್ನು ಮುಂದುವರೆಸಿ ಸಮಾಜದ ಓರೆಕೋರೆಗಳನ್ನು ತನ್ನ ಕೃತಿಯ ಮೂಲಕ ತಿದ್ದುವ ಪ್ರಯತ್ನ ಮಾಡುತ್ತಾ ಸಾಗುತ್ತಿರುವುದು ಹೆಮ್ಮೆಯ ಸಂಗತಿ. ತಾನು ವೃತ್ತಿಯಲ್ಲಿ ಮೆದಿಕಿನಾಳ ಗ್ರಾಮ ಪಂಚಾಯಿತಿಯ ದಿನಗೂಲಿ ನೌಕರನಾಗಿ ಸೇವೆ ಸಲ್ಲಿಸುತ್ತಾ ಕೆಲಸದ ಜೊತೆ ಜೊತೆಗೆ ನಾಟಕವನ್ನು ಬರೆಯುವ ಹವ್ಯಾಸ ರೂಢಿಸಕೊಂಡಿರುವ ಇವರು ಈಗಾಗಲೇ ದೌರ್ಜನ್ಯ ಸಾಮ್ರಾಜ್ಯ ಕಂಗೆಟ್ಟ ಕಾಳಿಂಗ ಸರ್ಪ, ಪೃಥ್ವಿಯಲ್ಲಿ ಪ್ರಜ್ವಲಿಸಿದ ಭಾರ್ಗವ ಗಂಡುಗಲಿ ರೈತಹುಲಿ,ಘರ್ಜಿಸಿದ ಗಂಡು ಬ್ರಹ್ಮಾಂಡ ಹುಲಿ, ನ್ಯಾಯಕ್ಕಾಗಿ ಛಲತೊಟ್ಟ ಹುಲಿ, ಧರ್ಮವಂತರ ಮನೆತನ ಎಂಬ ನಾಟಕಗಳು ಮೂಲೆ ಮೂಲೆಗಳಲ್ಲಿ ಪ್ರಯೋಗ ಕಾಣುತ್ತಿವೆ. “ಗವಿ ಹೊಕ್ತ ಗಂಡುಗಲಿ” ಎಂಬ ನಾಟಕವು ಬರಹದಲ್ಲಿರುತ್ತದೆ. ಕರ್ನಾಟಕದ ನಮ್ಮ ಪೂರ್ವಜರು ಬೆಳೆಸಿದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ನಾವೂ ಕೂಡಾ ಉಳಿಸೋಣ ಎಂದು ಛಲ ತೊಟ್ಟು ಇದೇ ತಿಂಗಳು ದಿನಾಂಕ 09-04-2022 ರಂದು ಬೈಲಗುಡ್ಡ ಗ್ರಾಮದಲ್ಲಿ ಜರುಗಿದ ಶ್ರೀ ಗರುಡಗಿರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ “ಘರ್ಜಿಸಿದ ಗಂಡು ಬ್ರಹ್ಮಾಂಡ ಹುಲಿ” ಎಂಬ ನಾಟಕವು ಸೆಟ್ಟೇರಲು ಲಕ್ಷ ಗಟ್ಟಲೇ ಖರ್ಚಾಗುವ ಈಗೀನ ಕಾಲದಲ್ಲಿ ತನ್ನ ಊರಿನ ಕಲಾವಿದರಿಂದ ಒಂದು ರೂಪಾಯಿಯನ್ನು ಪಡೆಯದೇ ತಮ್ಮ ಸ್ವಂತ ಖರ್ಚಿನಿಂದ ನಾಟಕವನ್ನು ಪ್ರಯೋಗ ಮಾಡಿಸಿದ್ದಾರೆ. ಇವರು ತಮ್ಮ ಚಿಕ್ಕ ವಯಸ್ಸಿನಿಂದಲೂ ವಿಧ್ಯಾಭ್ಯಾಸ ಮುಗಿಸಿ “ಕಲೆಯೇ ನನ್ನ ಉಸಿರು” ಎಂದು ಭಾವಿಸಿ ಕೆಲವು ಗ್ರಾಮಗಳಲ್ಲಿ ಹಬ್ಬ ಹರಿದಿನ, ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ತಮ್ಮ ನಾಟಕವನ್ನು ಪ್ರದರ್ಶಿಸಿ ಊರಿಗೆ ಮೆರಗು ತರುವಂತಹ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ.

ಗ್ರಾಮೀಣ ಪ್ರದೇಶದಲ್ಲಿಯು ಕೂಡಾ ತಮ್ಮ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡುತ್ತಿರುವ ಇಂತಹ ಯುವ ಕವಿಗಳ ಬಗ್ಗೆಯೂ ಕೂಡಾ ಸರ್ಕಾರಗಳು ಕಣ್ತೆರೆದು ನೋಡಬೇಕಾಗಿದೆ ಹಾಗೂ ಇಂತಹ ಕಲೆಯುಳ್ಳ ಏಷ್ಟೋ ಯುವ ಕವಿಗಳನ್ನು ಗುರುತಿಸಿ ಅವರುಗಳಿಗೆ ಒಂದು ಒಳ್ಳೆಯ ವೇದಿಕೆಯನ್ನು ಒದಗಿಸಿ ಕೊಡುವ ಕೆಲಸ ಮಾಡಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಯುವ ಕವಿ, ರಂಗಭೂಮಿ ಕವಿ ದುರುಗೇಶ ಎಂ. ಹೊಸಮನಿ ಬೈಲಗುಡ್ಡ.

Be the first to comment

Leave a Reply

Your email address will not be published.


*