ಪಡಿತರ ಧಾನ್ಯ ವಿತರಣಾ ಪರವಾಣಿಗೆ ರದ್ದು ಮಾಡುವಲ್ಲಿ ಶಾಸಕ ನಡಹಳ್ಳಿ ಅವರ ಕೈವಾಡವಿಲ್ಲ: ಹುಲಗಬಾಳ ಗ್ರಾಮಸ್ಥರು…!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ತಾಲೂಕಿ ಅಡವಿ ಹುಲಗಬಾಳ ಗ್ರಾಮದ ಪಡಿತರ ಧಾನ್ಯ ವಿತರಕ ಬಸವರಾಜ ಚನ್ನಬಸಪ್ಪ ಗುಡಗುಂಟಿ ಅವರು ಗ್ರಾಮೀಣ ಮಟ್ಟದಲ್ಲಿ ಶಾಸಕರ ರಾಜಕೀಯವಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ತೇಜೋವಧ ಮಾಡುತ್ತಿದ್ದು ಇತನಿಗೆ ಯಾವುದೇ ಕಾರಣಕ್ಕೂ ಪಡಿತರ ವಿತರಣಾ ಪರವಾಣಿಗೆ ಮರಳಿ ನೀಡಬಾರದು ಎಂದು ಆಗ್ರಹಿಸಿ ಸೋಮವಾರ ಗ್ರಾಮಸ್ಥರು ತಹಸೀಲ್ದಾರ ಅನೀಲಕುಮಾರ ಢವಳಗಿ ಅವರಿಗೆ ಮನವಿ ಸಲ್ಲಿಸಿದರು.



ಗ್ರಾಮದ ಚನ್ನಬಸಪ್ಪ ಬಸವರಾಜ ಗುಡಗುಂಟಿ ಎಂಬುವವರಿ ಹಲವಾರು ವರ್ಷದಿಂದ ಪಡಿತರ ಧಾನ್ಯ ವಿತರಿಸುತ್ತಿದ್ದರು. ಆದರೆ ಕಳೆದ ಗ್ರಾಪಂ ಚುನಾವಣೆಯ ಫಲಿತಾಂಶದಲ್ಲಿ ಅವರು ಪರಾಭಗೊಂಡ ನಂತರ ಗ್ರಾಮಸ್ಥರಿಗೆ ಪಡಿತರ ದಾಣ್ಯ ವಿತರಿಸುವಲ್ಲಿ ತಾರತಮ್ಯ ಮಾಡಿದ ಕಾರಣ ಅವರ ವಿರುದ್ಧ ತಹಸೀಲ್ದಾರ ಹಾಗೂ ಆಹಾರ ಇಲಾಕೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅದರಂತೆ ಅಧಿಕಾರಿಗಳು ಅವರ ಪರವಾಣಿಗೆಯನ್ನು ಅಮಾನತ್ತಿನಲ್ಲಿ ಇಡಲಾಗಿತ್ತು. ಆದರೆ ಇದಕ್ಕೆ ಚನ್ನಬಸಪ್ಪ ಗುಡಗುಂಟಿ ಅವರು ರಾಜಕೀಯವನ್ನು ಮಿಶ್ರಣ ಮಾಡಿ ಸ್ಥಳೀಯ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದ್ದರಿಂದ ಗ್ರಾಮದಲ್ಲಿ ಪಡಿತರ ಧಾನ್ಯ ವಿತರಣೆಯನ್ನು ಮರಳಿ ಚನ್ನಬಸಪ್ಪ ಗುಡಗುಂಟಿ ಅವರಿಗೆ ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು.



ಪಡಿತರದಲ್ಲಿ ರಾಜಕೀಯ ಮಾಡಿದ ನ್ಯಾಯಬೆಲೆ ಅಂಗಡಿಕಾರ:
ಕಳೆದ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಚನ್ನಬಸಪ್ಪ ಬಸವರಾಜ ಗುಡಗುಂಟಿ ಅವರು ಫಲಿತಾಂಶದಲ್ಲಿ ಪರಾಭಗೊಂಡ ಹಿನ್ನೆಲೆಯಲ್ಲಿ ಪಡಿತರ ಧಾನ್ಯ ವಿರಣಾ ಸಂದರ್ಭದಲ್ಲಿ ಕೆಲ ಗ್ರಾಮದ ನೀವು ನನಗೆ ವೋಟು ಹಾಕಿಲ್ಲ. ನನ್ನ ಅಂಗಡಿಗೆ ಬಂದು ಧಾನ್ಯ ತೆಗೆದುಕೊಳ್ಳಲು ನಾಚಿಯಾಗಲ್ಲವೇ ಎಂಬ ಮಾತುಗಳನ್ನು ಹೇಳಿ ಜನರಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಹುಲಗಬಾಳ ಗ್ರಾಮಸ್ಥರು ಆರೋಪಿಸಿದ್ದಾರೆ.



ಶಾಸಕರ ಕೈವಾಡವಿಲ್ಲ:
ಹುಲಗಬಾಳ ಗ್ರಾಮದ ಪಡಿತರ ಧಾನ್ಯ ವಿತರಣೆಯಲ್ಲಿ ರಾಜಕೀಯ ಮಾಡಬೇಕಾಗಿದ್ದರೆ ಸ್ಥಳೀಯ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಕಳೆದ ಎರಡು ವರ್ಷದ ಹಿಂದೆಯೇ ಮಾಡುತ್ತಿದ್ದರು. ಆದರೆ ಎರಡು ದಿನದ ಹಿಂದೆ ಚನ್ನಬಸಪ್ಪ ಗುಡಗುಂಟಿ ಅವರು ಬೆಂಬಲಿಗರೊಂದಿಗೆ ಬಂದು ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸುವ ವೇಳೆಯಲ್ಲಿ ಶಾಸಕರ ವಿರುದ್ಧ ಘೋಷಣೆ ಕೂಗಿ ಗ್ರಾಮೀಣ ಮಟ್ಟದ ಸಮಸ್ಯೆಯಲ್ಲಿ ರಾಜಕೀಯವನ್ನು ಮೀಶ್ರಣ ಮಾಡುತ್ತಿದ್ದಾರೆ. ಇದರಲ್ಲಿ ಶಾಸಕರದು ಯಾವುದೇ ಕೈವಾಡವಿಲ್ಲ ಎಂದು ಮಾಜಿ ಗ್ರಾಪಂ ಅಧ್ಯಕ್ಷ ಪರಶುರಾಮ ಬಿರಾದಾರ ಹೇಳಿದ್ದಾರೆ.



ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಿ.ಕೆ.ಮದರಿ, ಹಣಮಂತ್ರಾಯ ಹಂಚಿನಾಳ, ಮಲ್ಲಪ್ಪ ವಡಗೇರಿ, ಹಣಮಪ್ಪ ಬಿರಾದಾರ, ಮಲ್ಲಪ್ಪ ಬಿಜ್ಜೂರ, ಎಚ.ಎಸ್.ಬಿರಾದಾರ, ಗದ್ದೆಪ್ಪ ಬಿರಾದಾರ, ಸಂತೋಷ ಪಾಟೀಲ, ಬಸವರಾಜ ಬಿರಾದಾರ, ಬೀರಪ್ಪ ಮದರಿ, ಅಬಲಪ್ಪ ಬಿರಾದಾರ, ಶೀಲಾಬಾಯಿ ಚವ್ಹಾಣ, ಸೀನಾಬಾಯಿ ಪವಾರ, ಕಸ್ತೂರಿಬಾಯಿ ಚವ್ಹಾಣ, ಕಮಲಿಬಾಯಿ ರಾಠೋಡ, ಚಂದಮ್ಮ ಚವ್ಹಾಣ, ಶಂಕ್ರಪ್ಪ ರಾಠೋಡ, ಹಣಮಂತ ಏಳೂರ, ಚಾಯಮ್ಮ ಮದರಿ ಸೇರಿದಂತೆ 150ಕ್ಕೂ ಹೆಚ್ಚು ಗ್ರಾಮಸ್ಥರಿದ್ದರು.

Be the first to comment

Leave a Reply

Your email address will not be published.


*