ರಾಜ್ಯ ಸುದ್ದಿಗಳು
ಶಿರಸಿ
ಟಿ.ಎಸ್.ಎಸ್. ಆಸ್ಪತ್ರೆಯು ಆಧುನಿಕತೆಯ ಉಪಕರಣಗಳನ್ನು ಅಳವಡಿಸಿದ್ದು, ಜಿಲ್ಲೆಯಲ್ಲೇ ಅನೇಕವು ಪ್ರಥಮ ಬಾರಿಗೆ ಪಾದಾರ್ಪಣೆ ಮಾಡಿವೆ. ಇಂದು ಆಸ್ಪತ್ರೆಯಲ್ಲಿ ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿಗಳು (ಲ್ಯಾಮಿನಾರ್ ಏರ್ ಫ್ಲೋ), ಐಸಿಯು (ವೆಂಟಿಲೇಟರ್, ಮಾನಿಟರ್, ವಿದ್ಯುತ್ ಚಾಲಿತ ಬೆಡ್), ಸುಸಜ್ಜಿತ ತುರ್ತುಚಿಕಿತ್ಸಾ ವಿಭಾಗ, ವಾರ್ಡಗಳು ಲಭ್ಯವಿದೆ. ರೋಗಲಕ್ಷಣ ಪತ್ತೆಗಾಗಿ ಸುಸಜ್ಜಿತ ಕಂಪ್ಯೂಟರೀಕೃತ ಲ್ಯಾಬೋರೇಟರಿ, ರೇಡಿಯಾಲಜಿ ವಿಭಾಗ ವಿಧಾನಗಳಿಗೆ ಅಗತ್ಯ ಉಪಕರಣಗಳು, ಕ್ಯಾಮರಾ ಸಿಸ್ಟಮ್‌ಗಳು, ಅನಸ್ತೇಸಿಯಾ ಉಪಕರಣಗಳು, ಅನ್ನನಾಳ ಪರೀಕ್ಷೆಗಾಗಿ ಎಂಡೋಸ್ಕೊಪಿ sssಸಿಸ್ಟಮ್ ಕೂಡ ಲಭ್ಯವಿದೆ. ಕಿಡ್ನಿ ವೈಪಲ್ಯಕ್ಕೆ ಒಳಗಾದ ರೋಗಿಗಳಿಗಾಗಿ ಡಯಾಲಿಸಿಸ್ ವ್ಯವಸ್ಥೆಯನ್ನೂ ಕೂಡ ಕಲ್ಪಿಸಲಾಗಿದೆ.‘ಎಲ್ಲರಿಗೂ ಗುಣಮಟ್ಟದ ಆರೋಗ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ, ‘ತೋಟಗಾರರ ಸೇವಾ ಸಮಿತಿಯ ಶ್ರೀಪಾದ ಹೆಗಡೆ, ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ’ಯು ಬಹುವಿಧ ಸೌಲಭ್ಯಗಳನ್ನು ಹೊಂದಿರುವ ಜಿಲ್ಲೆಯ ಏಕಮೇವ ಆಸ್ಪತ್ರೆಯಾಗಿದೆ. ಪ್ರಸ್ತುತ ಜನರಲ್ ಮೆಡಿಸಿನ್, ಆರ್ಥೊಪೆಡಿಕ್ಸ್, ಜನರಲ್ ಸರ್ಜರಿ, ಒ.ಬಿ.ಜಿ., ಪೀಡಿಯಾಟ್ರಿಕ್ ಮತ್ತು ನಿಯೋನೆಟಾಲಜಿ, ಇ.ಎನ್.ಟಿ., ಒಫ್ತಮೋಲಜಿ, ಎನಸ್ಥೇಶಿಯೋಲಜಿ, ರೇಡೊಯೋಲಜಿ, ಪೆಥೋಲಜಿ, ಡೆಂಟಲ್ ಕೇರ್, ಫಿಸಿಯೋಥೆರಪಿ, ಐದು ಆಪರೇಷನ್ ಥಿಯೇಟರ್‌ಗಳು, ಐ.ಸಿ.ಯು. ಮತ್ತು ಎನ್.ಐ.ಸಿ.ಯು. ಸೊನೊಗ್ರಫಿ, ಇ.ಸಿ.ಜಿ, ಸಿ.ಟಿ, ಲೆಪ್ರೊಸ್ಕೋಪಿಕ್ ಸರ್ಜರಿ, ವೀಡಿಯೋ ಎಂಡೋಸ್ಕೋಪ್, ನೆಫ್ರೊಲಜಿ ಮುಂತಾದ ಸೇವೆಗಳು ಇಲ್ಲಿ ಲಭ್ಯವಿವೆ. ೧೫೦ ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯಲ್ಲಿ ೧೩ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ೧೭ ಜನ ಪೂರ್ಣಾವಧಿ ವೈದ್ಯರು ಹಾಗೂ ಆರು ಜನ ಸಂದರ್ಶಕ ತಜ್ಞವೈದ್ಯರು ಇಲ್ಲಿ ಲಭ್ಯರಿರುತ್ತಾರೆ. ಪ್ಯಾರಾ ಮೆಡಿಕಲ್ ಕಾಲೇಜು ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಒಂದು ಪ್ಯಾರಾ ಮೆಡಿಕಲ್ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ ಪರೀಕ್ಷೆಗಳಲ್ಲಿ ರಾಜ್ಯಮಟ್ಟದಲ್ಲಿ ಸ್ಥಾನ ಗಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಸಹಕಾರಿ ಸದಸ್ಯರಿಗೆ ರಿಯಾಯತಿವಿವಿಧ ಸಹಕಾರಿ ಸಂಘಗಳ ಸದಸ್ಯರುಗಳಿಗೆ ಸಂಸ್ಥೆಯು ಚಿಕಿತ್ಸಾದರಗಳಲ್ಲಿ ರಿಯಾಯತಿ ಕಲ್ಪಿಸಿದೆಯಲ್ಲದೇ, ಚಿಕಿತ್ಸಾ ಹಣವನ್ನು ತುಂಬಲು ಉದ್ರಿ ವ್ಯವಸ್ಥೆ ಕೂಡಾ ಕಲ್ಪಿಸಿದೆ. ತುರ್ತು ಪರಿಸ್ಥಿತಿಯಲ್ಲಿ ಹಣಕ್ಕಾಗಿ ಪರದಾಡದೇ ರೈತರು ಹಾಗೂ ಸಹಕಾರಿ ಸದಸ್ಯರುಗಳು ಗುಣಮಟ್ಟದ ಚಿಕಿತ್ಸೆಯನ್ನು ಯಾವುದೇ ವಿಳಂಬವಿಲ್ಲದೇ ಪಡೆಯಲು ಇದು ಸಹಕಾರಿಯಾಗಿದೆ. ಭಾರತೀಯ ಪ್ರಭಂಧನಾ ಸಂಸ್ಥೆ (IIಒ-ಃ) ಬೆಂಗಳೂರು, ಸಹಕಾರಿ ಮಾದರಿಯಲ್ಲಿ ಆರೋಗ್ಯ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿರುವ ಕುರಿತಾಗಿ ಅಧ್ಯಯನ ನಡೆಸಲು ಟಿ.ಎಸ್.ಎಸ್.ಆಸ್ಪತ್ರೆಯನ್ನು ಆಯ್ಕೆಮಾಡಿರುವುದು ನಿಜಕ್ಕೂ ಗಮನಾರ್ಹವಾಗಿದೆ.ಹೃದಯ ಆರೈಕೆ ಕೇಂದ್ರ ಇತ್ತೀಚಿನ ವರ್ಷಗಳಲ್ಲಿ ಶಿರಸಿಯೂ ಸೇರಿದಂತೆ ಎಲ್ಲೆಡೆ ಹೃದಯ ಸಂಬಂಧೀ ಕಾಯಿಲೆಗಳು ಹೆಚ್ಚುತ್ತಿವೆ. ವಯಸ್ಸಿನ ಭೇದವಿಲ್ಲದೆ ಹೃದ್ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇದಿನೇ ಅಧಿಕವಾಗುತ್ತಿದೆ. ಶಿರಸಿ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಹೃದಯ ರೋಗಕ್ಕೆ ತುತ್ತಾದವರನ್ನು ಚಿಕಿತ್ಸೆಗಾಗಿ ೧೦೦ ಕಿ.ಮೀ. ದೂರದ ಹುಬ್ಬಳ್ಳಿ ಅಥವಾ ೨೫೦ ಕಿ.ಮೀ. ದೂರದ ಮಂಗಳೂರಿಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಇದೆ. ಅಷ್ಟು ದೂರ ಒಯ್ಯುವಾಗ ಮಾರ್ಗಮಧ್ಯದಲ್ಲಿಯೇ ರೋಗಿಯು ಪ್ರಾಣಕ್ಕೆರವಾದ ಉದಾಹರಣೆಗಳು ಸಾಕಷ್ಟಿವೆ. ಇದನ್ನು ಗಮನಿಸಿದ ತೋಟಗಾರರ ಸೇವಾ ಸಮಿತಿಯು ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಧುನಿಕ ಹೃದಯ ಸಂಬಂಧೀ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಆಸ್ಪತ್ರೆಯಲ್ಲಿ ಈಗಾಗಲೇ ಹೃದಯ ಸಂಬಂಧೀ ಕಾಯಿಲೆಗಳನ್ನು ಪತ್ತೆಹಚ್ಚುವ ವಿವಿಧ ಉಪಕರಣಗಳು ಇವೆಯಾದರೂ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಅತ್ಯಾಧುನಿಕ ಉಪಕರಣಗಳು ಲಭ್ಯವಿಲ್ಲವೆಂಬುದು ಸಮಿತಿಯ ಗಮನಕ್ಕೆ ಬಂದಿದ್ದು, ಅವುಗಳನ್ನು ಖರೀದಿಸಿ ಪ್ರತ್ಯೇಕ ಪ್ರಯೋಗಾಲಯವನ್ನೇ ಆರಂಭಿಸುವ ಮನೀಷಿಯೊಂದಿಗೆ ಮುಂದಡಿಯಿಟ್ಟ ಸಮಿತಿಯು ಈಗ ಅದರಲ್ಲಿಯೂ ಯಶಸ್ವಿಯಾಗಿದೆ.
ಇತ್ತೀಚೆಗೆ ಆಸ್ಪತ್ರೆಯ ಪ್ರಧಾನ ಕಟ್ಟಡದ ಹಿಂಭಾಗದಲ್ಲಿ ಪ್ರತ್ಯೇಕವಾದ ಪ್ರಯೋಗಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ. ಅದರಲ್ಲಿ ಸುಸಜ್ಜಿತ ಕೆಥೆಟೆರೈಸೇಷನ್ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯದಲ್ಲಿ ಉಇ IಉS-೩೨೦ ಮಾದರಿಯ ಕ್ಯಾಥ್-ಲ್ಯಾಬ್ ಉಪಕರಣವನ್ನು ಅಳವಡಿಸಲಾಗಿದ್ದು ಇದರಿಂದಾಗಿ ಇನ್ನು ಮುಂದೆ ಎಂಜಿಯೋಗ್ರಾಮ್, ಎಂಜಿಯೋಪ್ಲಾಸ್ಟಿ ಮುಂತಾದ ಹೃದಯ ಸಂಬಂಧೀ ಶಸ್ತ್ರ ಚಿಕಿತ್ಸೆಗಳಿಗೆ ದೂರದ ಆಸ್ಪತ್ರೆಗಳಿಗೆ ಧಾವಿಸುವ ಅಗತ್ಯವಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. ಇದರ ನಿರ್ಮಾಣಕ್ಕೆ ತಗುಲಲಿದ್ದ ದೊಡ್ಡ ಮೊತ್ತವನ್ನು ಹೊಂದಿಸಲು ಅನೇಕ ಸ್ಥಳೀಯ ದಾನಿಗಳು, ಸಂಘ-ಸಂಸ್ಥೆಗಳು, ಅನಿವಾಸಿ ಭಾರತೀಯರು ಧಾರಾಳವಾಗಿ ಧನಸಹಾಯ ನೀಡಿದ್ದು, ಉಳಿದ ಅಗತ್ಯತೆಗೆ ಸ್ಥಳೀಯ ಕೆಡಿಸಿಸಿ ಬ್ಯಾಂಕ್ ಆಥಿ೯ಕ ನೆರವು ನೀಡಿದೆ. ದಾನಿಗಳು ತಮ್ಮ ಉದಾರತೆಯನ್ನು ತೋರದಿದ್ದಲ್ಲಿ ಇಷ್ಟು ವೇಗದಲ್ಲಿ ಈ ಕೇಂದ್ರದ ನಿಮಾ೯ಣ ಸಾಧ್ಯವಿರಲಿಲ್ಲ. ಈ ಎಲ್ಲ ದಾನಿಗಳಿಗೆ ತೋಟಗಾರರ ಸೇವಾ ಸಮಿತಿ ಆಭಾರಿಯಾಗಿದೆ.
ಇದೇ ಬರುವ ನವೆಂಬರ್ ೧೪ರಂದು ನೂತನ ಹೃದಯ ಆರೈಕೆ ಕೇಂದ್ರ ಉದ್ಘಾಟನೆಯು ಸ್ವಣ೯ವಲ್ಲಿ ಶ್ರೀಗಳ ಅಮೃತ ಹಸ್ತದಿಂದ ನೆರವೇರಲಿದ್ದು ಇದು ಮುಂಬರುವ ದಿನಗಳಲ್ಲಿ ಶಿರಸಿ ಭಾಗದ ಜನರಿಗೆ ವರದಾನವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ೨೦೦೫ರಿಂದ ಇಲ್ಲಿಯವರೆಗೆ ಸುಮಾರು ೧.೬ ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿರುವ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಮುಂಬರುವ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ರೋಗಿಗಳ ಪಾಲಿನ ಭರವಸೆಯ ಆಶಾಕಿರಣವಾಗಿ ರೂಪುಗೊಳ್ಳಲೆಂಬ ಸದಾಶಯ ನಮ್ಮೆಲ್ಲರದಾಗಿದೆ. ‘ಆರೋಗ್ಯದ ಬಗೆಗಿನ ಕಾಳಜಿಯನ್ನು ಒಂದು ಲಾಭದಾಯಕ ವ್ಯವಹಾರವಾಗಿ ನೋಡದೆ ಅದನ್ನು ಸಮಾಜಕ್ಕೆ ನಾವು ಸಲ್ಲಿಸುವ ಒಂದು ಪವಿತ್ರ ಸೇವೆ’ಯೆಂದು ಪರಿಭಾವಿಸಬೇಕೆನ್ನುವ ಈ ಆಸ್ಪತ್ರೆಯ ಘೋಷವಾಕ್ಯವೇ ಈ ಜಿಲ್ಲೆಯ ಜನರ ಮೊಗದಲ್ಲಿ ನಗೆಯರಳಿಸುವ ಸಂಜೀವಿನಿಯಾಗಲಿದೆಯೆAಬ ಭರವಸೆ ನಮ್ಮದು.
ಮುಂಬರುವ ಕೆಲವೇ ದಿನಗಳಲ್ಲಿ ಸರಕಾರಿ ಸನ್ನದುಗಳನ್ನು ಪಡೆದ ತರುವಾಯ ಪೂಣ೯ ಪ್ರಮಾಣದಲ್ಲಿ ಹೃದಯ ಆರೈಕೆ ಕೇಂದ್ರ ಕಾಯಾ೯ರಂಭ ಮಾಡಲಿದ್ದು ಎಲ್ಲಾ ರೀತಿಯ ಹೃದಯ ಸಂಬಂಧಿ ಖಾಯಿಲೆಗಳಿಗೆ ಕೈಗೆಟಕುವ ದರದಲ್ಲಿ ಸಂಪೂಣ೯ ಚಿಕಿತ್ಸೆ ಒದಗಲಿದೆ. ಅಚಿಣh ಐಚಿb ಅನ್ನು ಆರಂಭಿಸುವ ಮೂಲಕ ಅಸಂಖ್ಯಾತ ಜನರ ಪ್ರಾಣವನ್ನು ಉಳಿಸುವ ಹೊಸ ಭರವಸೆಯ ಬೆಳಕಾಗಿ ಗೋಚರಿಸುತ್ತಿರುವ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯು ದಿವಂಗತ ಶ್ರೀ ಶ್ರೀಪಾದ ಹೆಗಡೆ, ಕಡವೆಯವರು ೧೯೯೪ರಲ್ಲಿಯೇ ಕಂಡ, ‘ಗ್ರಾಮೀಣ ಜನರಿಗಾಗಿ ಸುಸಜ್ಜಿತ ಆಸ್ಪತ್ರೆ’ ಎಂಬ ಕನಸನ್ನು ನನಸಾಗಿಸುವತ್ತ ಸಂಸ್ಥೆ ಇನ್ನೊಂದು ದಿಟ್ಟ ಹೆಜ್ಜೆ ಇಟ್ಟಿದೆ.
Be the first to comment