ಗಣಿ ಸುರಕ್ಷತೆ ಅಸೋಸಿಯೇಷನ್ ವಲಯ ೩ ವತಿಯಿಂದ ಸ್ಪೋಟಕಗಳು ಮತ್ತು ಸುರಕ್ಷಿತ ಬಳಕೆಯ ಜಾಗೃತಿ ಸಪ್ತಾಹ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ದೇವನಹಳ್ಳಿ ತಾಲೂಕಿನ ನಂದಿಬೆಟ್ಟದ ರಸ್ತೆಯಲ್ಲಿನ ಸಿಂಧೂರ ಕನ್ವೆಂಷನ್ ಹಾಲ್‌ನಲ್ಲಿ ೨೦೨೧-೨೨ರ ಒಂದು ವಾರದ ವಲಯ ೩ರಲ್ಲಿ ಗಣಿಗಳ ಸುರಕ್ಷತೆ ಮತ್ತು ಸ್ಪೋಟಕಗಳ ಬಳಕೆ ಸುರಕ್ಷತೆ ಬಗ್ಗೆ ಮಾಲೀಕರು ಅನುಸರಿಸಬೇಕಾದ ನಿಯಮಗಳ ಜಾಗೃತಿ ಸಮಾರಂಭವನ್ನು ಗಣಿಗಳು ಸುರಕ್ಷತೆ ಅಸೋಸಿಯೇಷನ್ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಕಟ್ಟಡ ಕಲ್ಲಿನ ಹಾನಿಕಾರಕ ಮತ್ತು ಕ್ರಷರ್ ಮಾಲೀಕರ ಅಸೋಸಿಯೇಷನ್ ವಲಯ ೩ರಲ್ಲಿ ೧೫ ಜಿಲ್ಲೆಗಳ ಜಾಗೃತಿ ಸಪ್ತಾಹ ಕಾರ್ಯಕ್ರಮ ನಡೆಯಿತು.

CHETAN KENDULI

ಕ್ವಾರಿಗಳಲ್ಲಿ ಕಾರ್‍ಯನಿರ್ವಹಿಸುವ ಮತ್ತು ಗುತ್ತಿಗೆಯಾದರಲ್ಲಿ ಕೆಲಸ ಮಾಡುತ್ತಿರುವವರು ಯಾವ್ಯಾವ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಮತ್ತು ಸುರಕ್ಷತೆಯಿಂದ ಸುತ್ತಮುತ್ತಲಿನ ಪರಿಸರ ಮತ್ತು ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು. ಸೇಫ್ಟಿ ವೀಕ್ ಕಾರ್‍ಯಕ್ರಮದಲ್ಲಿ ಪ್ರತಿಯೊಬ್ಬ ಗಣಿ ಮಾಲೀಕರು ಮತ್ತು ಸಿಬ್ಬಂದಿಗಳಿಗೂ, ಕಾರ್ಮಿಕರಿಗೂ ಸುರಕ್ಷತೆಯನ್ನು ಅನುಸರಿಸುವುದು ಮುಖ್ಯವಾಗಿರುತ್ತದೆ ಎಂಬುವುದನ್ನು ಅರಿವು ಮೂಡಿಸುವ ಉದ್ದೇಶವಾಗಿದೆ. 

ಬೆಂಗಳೂರು ಸೌತ್ ಝೋನ್‌ನ ಗಣಿ ಸುರಕ್ಷತಾ ನಿರ್ದೇಶಕ ಮಲಾಯ್‌ಟಿಕದರ್ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗಣಿ ಕಾರ್ಮಿಕರು ರಕ್ಷಣೆಗಾಗಿ ಬಳಸುವ ಸುರಕ್ಷತಾ ಸಲಕರಣೆಗಳು, ಹೆಲ್ಮೆಟ್ ಗಳಿಂದ ಹಿಡಿದು ಸುರಕ್ಷತಾ ಕನ್ನಡಕಗಳು ಮತ್ತು ಕೈಗವಸುಗಳು ಸೇರಿದಂತೆ ಎಲ್ಲಾ ಕೆಲಸಗಾರರು ಎಲ್ಲಾ ಸಮಯದಲ್ಲೂ ಅಗತ್ಯವಾದ ಸುರಕ್ಷತಾ ಸಲಕರಣೆಗಳನ್ನು ಧರಿಸುವುದು ಅತ್ಯಗತ್ಯ. ಉದಾಹರಣೆಗೆ, ಕಾರ್ಮಿಕರನ್ನು ಹೆಲ್ಮೆಟ್ ಗಳಿಂದ ರಕ್ಷಿಸಿದ ಬಹಳಷ್ಟು ನಿದರ್ಶನಗಳಿದ್ದು, ಕಾರ್ಮಿಕರು ಗಣಿ ಕೆಲಸ ನಿರ್ವಹಿಸುವಾಗ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸುವಂತಾಗಬೇಕು. ಒಂದು ವೇಳೆ ಏನಾದರೂ ಅನಾಹುತವಾದರೆ, ಇಡೀ ಅಸೋಸಿಯೇಷನ್‌ಗೆ ಕೆಟ್ಟ ಹೆಸರು ಬರುತ್ತದೆ. ಅಸೋಸಿಯೇಷನ್‌ನಲ್ಲಿ ಇದುವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಾರ್‍ಯನಿರ್ವಹಿಸುತ್ತಿರುವುದು ಶ್ಲಾಘನೀಯವಾದದ್ದು, ಎಲ್ಲರೂ ಗಣಿ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಲು ಮಾಲೀಕರು ಜಾಗೃತಗೊಳಿಸಬೇಕು ಎಂದು ಹೇಳಿದರು. 

ಎಂಎಸ್‌ಎಕೆ ಕಾರ್‍ಯದರ್ಶಿ ಧನಂಜಯ ಜಿ ರೆಡ್ಡಿ ಮಾತನಾಡಿ, ಈ ದಿನ ಮೈನ್ಸ್ ಸೇಫ್ಟಿ ಅಸೋಸಿಯೇಷನ್ ಕರ್ನಾಟಕ ವತಿಯಿಂದ ಒಂದುವಾರದ ಮೈನ್ಸ್ ಸೇಫ್ಟೀ ವೀಕ್ ಅನ್ನು ಮಾಡಲಾಗುತ್ತದೆ. ಎಲ್ಲಾ ಸೇಫ್ಟಿ ಪ್ರೋಸಿಜರ್, ವರ್ಕ್ ಕಲ್ಚರ್, ಪ್ರಾಪಗಂಡ ಸೇರಿದಂತೆ ಇತರೆ ಹಲವು ಕಾರ್‍ಯಗಳನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಸಿಕೊಡುವ ಕಾರ್‍ಯಕ್ರಮವಾಗಿದೆ. ಪ್ರತಿ ವರ್ಷ ಸೇಫ್ಟೀ ವೀಕ್ ಕಾರ್‍ಯಕ್ರಮ ಮಾಡಲಾಗುತ್ತಿದೆ. ೧೯೬೮ರಸಲ್ಲಿ ಈ ಅಸೋಸಿಯೇಷನ್ ಪ್ರಾರಂಭವಾದಗಿನಿಂದ ಇಂದಿಗೆ ೫೪ ವರ್ಷ ಕಳೆಯುತ್ತಿದೆ. ಕಳೆದ ೨ ವರ್ಷದಿಂದ ಕೊರೊನಾ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದಿದ್ದರಿಂದ ಕರ್ನಾಟಕದ ೪ ವಲಯಗಳಲ್ಲಿಯೂ ಕಾರ್‍ಯಕ್ರಮ ಮಾಡಲಾಗಲಿಲ್ಲ. ವಲಯ ೧ಕ್ಕೆ ಬಳ್ಳಾರಿ, ಹೊಸಪೇಟೆ, ವಲಯ ೨ರಲ್ಲಿ ಬಾಗಲಕೋಟೆ, ವಲಯ ೩ ದಕ್ಷಿಣ ಕರ್ನಾಟಕ, ವಲಯ ೪ರಲ್ಲಿ ಗುರ್ಲ್ಬಗ ಇತರೆ ಕಡೆಗಳಲ್ಲಿ ಸುರಕ್ಷತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಜ್ಞರಿಂದ ಅರಿವು ಮೂಡಿಸುವ ಕಾರ್‍ಯವಾಗುತ್ತಿದೆ ಎಂದರು.ಝೋನ್೩ ಅಧ್ಯಕ್ಷ ಎಂ.ಎ.ಮೊಹಮ್ಮದ್ ಅಮಾನುಲ್ಹಾ ಮಾತನಾಡಿ, ರಾಜ್ಯದ ಕಟ್ಟಡ ಕಲ್ಲಿನ ಹಾನಿಕಾರ ಮತ್ತು ಕ್ರಷರ್ ಮಾಲೀಕರ ಅಸೋಸಿಯೇಷನ್ ವಲಯ ೩ರ ವಲಯಕ್ಕೆ ಬರುವ ೧೫ ಜಿಲ್ಲೆಗಳ ಗಣಿ ಮಾಲೀಕರು, ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳನ್ನು ಒಟ್ಟುಗೂಡಿಸಿ ಸುರಕ್ಷತಾ ಕ್ರಮಗಳನ್ನು ಹೇಗೆ ಅನುಸರಿಸಬೇಕೆಂಬುವುದರ ಬಗ್ಗೆ ತಿಳಿಸಿಕೊಡುವ ಒಂದು ವಾರದ ಸೇಫ್ಟಿ ವೀಕ್ ಕಾರ್‍ಯಕ್ರಮ ಇದಾಗಿದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಕೋವಿಡ್ ಸಮಯದಲ್ಲಿ ಗಣಿ ಸುರಕ್ಷತೆ ಮತ್ತು ಉತ್ತಮ ಕೆಲಸ ಮಾಡಿರುವ ರಾಜ್ಯದ ೪ ವಲಯದ ಗಣಿ ಮಾಲೀಕರ ಹಾಗೂ ವ್ಯವಸ್ಥಾಪಕರ ಸಿಬ್ಬಂದಿಗಳಿಗೆ ಮೈನ್ಸ್ ಸೇಫ್ಟಿ ಅಸೋಸಿಯೇಷನ್ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ಈ ವೇಳೆಯಲ್ಲಿ ಗಣಿ ಸುರಕ್ಷತಾ ಬೆಂಗಳೂರು ವಲಯದ ನಿರ್ದೇಶಕ ಮುರಳಿಧರ್ ಬಿದರಿ, ಅಸೋಸಿಯೇಷನ್‌ನ ಮುಖ್ಯಸ್ಥ ಡಾ.ಮೆದ ವೆಂಕಟಯ್ಯ, ಕನ್ವಿನರ್ ವೇಣುಗೋಪಾಲಸ್ವಾಮಿ ಕದೆಮ್, ನಿರ್ದೇಶಕ ರಮೇಶ್‌ಕುಮಾರ್ ಎಂ.ಎಲ್., ಸೇರಿದಂತೆ ವಲಯ ೩ರ ಎಲ್ಲಾ ಗಣಿ ಮಾಲೀಕರು, ಸಿಬ್ಬಂದಿಗಳು ಹಾಗೂ ಕಂಪನಿಗಳವರು ಇದ್ದರು.

Be the first to comment

Leave a Reply

Your email address will not be published.


*