ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳ ಶುಭಹಾರೈಕೆ ಸಮಾರಂಭ:ಪರೀಕ್ಷೆಯ ಬಗ್ಗೆ ಭಯ ಬೇಡ:ವಿದ್ಯಾರ್ಥಿಗಳಿಗೆ ಕಿವಿಮಾತು

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ವಿದ್ಯಾರ್ಥಿಗಳು ಚೆನ್ನಾಗಿ ಧೈರ್ಯದಿಂದ ಪರೀಕ್ಷೆ ಬರೆಯಬೇಕು. ಪರೀಕ್ಷೆಯ ಬಗ್ಗೆ ಮನಸ್ಸಿನಲ್ಲಿ ಭಯ ಇರಬಾರದು ಪರೀಕ್ಷೆಯನ್ನು ಒಂದು ಆಟವನ್ನಾಗಿ ಪರಿಗಣಿಸಿ ಯುದ್ಧವನ್ನಾಗಿ ಅಲ್ಲ ಎಂದು ಶಿಕ್ಷಕ ಎಸ್.ಬಿ.ಹೆಳವರ ತಮ್ಮ ಪ್ರಾಸ್ಥಾವಿಕ ನುಡಿಗಳಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಶುಭಹಾರೈಕೆ ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭಕೋರಿ ಅವರು ಮಾತನಾಡಿದರು.

ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲು ಸಮಾಜ ವಿಜ್ಞಾನ ಪ್ರಯೋಗಾಲಯ ನಿರ್ಮಾಣಕ್ಕಾಗಿ ಧನ ಸಹಾಯ ಮಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ ಅವರಿಗೆ ಶಾಲೆಯ ಪರವಾಗಿ ಸನ್ಮಾನಿಸಲಾಯಿತು.

ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಒಂದು ಪ್ರಮುಖವಾದ ಹಾಗೂ ಮಹತ್ವದ ಘಟ್ಟ. ಇದು ಮುಂದಿನ ಕಾಲೇಜ್ ಶಿಕ್ಷಣಕ್ಕೆ ಏಣಿ ಇದ್ದಂತೆ. ಸಮಯ ಅಮೂಲ್ಯವಾದುದು. ಮೊಬೈಲ್ ನೋಡುತ್ತ ವ್ಯರ್ಥ ಸಮಯ ಕಳೆಯದೇ ಏಕಾಗೃತೆಯಿಂದ ಚೆನ್ನಾಗಿ ಓದಿದರೆ ಪರೀಕ್ಷೆ ಬರೆಯಲು ಕಷ್ಟವಾಗುವುದಿಲ್ಲ.ಎಂದು ನಿವೃತ್ತ ಶಿಕ್ಷಕ ಎಸ್.ಎಮ್.ಬೆಲ್ಲದ ಮಾತನಾಡಿದರು.

ಎಸ್.ಎಸ್.ಎಲ್.ಸಿ.ಹಂತದಲ್ಲಿಯೇ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ನಿರ್ಧಾರವಾಗುವುದು. ಹೀಗಾಗಿ ಈ ಪರೀಕ್ಷೆಗೆ ಹೆಚ್ಚಿನ ಮಹತ್ವವಿದೆ. ಎಲ್ಲ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಕಲಿತ ಶಾಲೆಗೆ, ತಂದೆ-ತಾಯಿಗಳಿಗೆ ಕೀರ್ತಿ ತರಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ಹೇಳಿದರು.

ಮುಖ್ಯೋಪಾದ್ಯಾಯರಾದ ಎಸ್.ಬಿ.ದಾಸರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯದಿಂದಲೇ ವಿದ್ಯಾರ್ಥಿಗಳು ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗಿದರೆ ಭವಿಷ್ಯದ ಜೀವನ ಉಜ್ವಲವಾಗುವುದು. ಮೌಲ್ಯ ಹಾಗೂ ಸಂಸ್ಕಾರ ಮನುಷ್ಯನಿಗೆ ಅತ್ಯವಶ್ಯ ಎಂದರು.

ಈ ಸಂದರ್ಭದಲ್ಲಿ ಅಪ್ಪಾಸಾಹೇಬ ನಾಡಗೌಡರ, ಶರಣಪ್ಪ ಅಧಿಕಾರಿ,ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ ಕೊಪ್ಪದ,ಹನಮಂತ ವಡ್ಡರ,ಶ್ರೀಮತಿ ರೇಣುಕಾ ಕಮತರ,ಪಿಕೆಪಿಎಸ್ ಸದಸ್ಯರಾದ ವಜಿರಪ್ಪ ಪೂಜಾರ,ಗಿರಿಯಪ್ಪ ದೇವಸಂಗಿ,ನಿಂಗಪ್ಪ ನಿಲೂಗಲ್ಲ,ಬಸವಂತ ಗುರಿಕಾರ,ಮಾಳವ್ವ ಆಸಂಗಿ,ನೀಲಪ್ಪ ಮಾದರ, ಗ್ರಾಮದ ಪ್ರಮುಖರಾದ ಸಂಗಣ್ಣ ನಾಡಗೌಡರ, ಶಂಕ್ರಪ್ಪ ಮಾದನಶೆಟ್ಟಿ, ಸಂಗಪ್ಪ ಹೂಗಾರ,ಬಸಪ್ಪ ಮಡಿವಾಳರ,ಕರಿಯಪ್ಪ ತೋಟಗೇರ,ಮಾಸಪ್ಪ ಕಬ್ಬರಗಿ,ಚನ್ನಬಸಪ್ಪ ಇಟಗಿ,ಆರ್.ಜಿ. ಗೊರಯ್ಯನವರ,ಗುರುಪಾದಪ್ಪ ಕಡಪಟ್ಟಿ  ಮಹಾಂತೇಶ ಕುಂಚಗನೂರ, ಶಿಕ್ಷಕರಾದ ವಾಯ್. ಎಸ್.ವಾಲಿಕಾರ,ಎಸ್. ಎಮ್.ಕೆಂದೂಳ್ಳಿ, ಕೆ.ಎಸ್. ಬೀಳಗಿ ಉಪಸ್ಥಿತರಿದ್ದರು.

ಕುಮಾರಿ ಅಕ್ಕಮ್ಮ ಬಾದಿನಾಳ,ಅನಿತಾ ಆಸಂಗಿ ಅವರು ತಮ್ಮ ಅನಿಸಿಕೆಗಳನ್ನು ಹೇಳಿದರು. ಶಿಕ್ಷಕರಾದ ಎಸ್.ಎಮ್.ಕೆಂದೂಳ್ಳಿ ಸ್ವಾಗತಿಸಿದರು, ಬಿ.ಎಚ್.ನಾಲತವಾಡ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಿದರು, ಎಸ್.ಬಿ. ಯಾವಗಲ್ಲಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Be the first to comment

Leave a Reply

Your email address will not be published.


*