ಯಾದಗಿರಿ :: ಬಿಜೆಪಿ ಪಕ್ಷ ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆಯಲ್ಲಿ ಕೋಲಿ ಸಮಾಜದ ಮತ ಪಡೆಯಲು ಸಮಾಜದ ಬಹುದಿನಗಳ ಬೇಡಿಕೆಯಾದ ಎಸ ಟಿ ಬರವಸೆ ನೀಡಿ ಮತ ಪಡೆದು ಕೋಲಿ ಸಮಾಜ ಎಸ ಟಿ ಸೇರ್ಪಡೆ ಮಾಡುವ ಬಗ್ಗೆ ಎಲ್ಲೂ ಮಾಡುತ್ತಿಲ್ಲ. ಸಂವಿಧಾನ ಬದ್ದವಾಗಿ ಕಬ್ಬಲಿಗ,ಕಬ್ಬೇರ, ಜಾತಿಗಳು ಸಂವಿಧಾನದವಾಗಿ ಅನುಚ್ಛೇದ 341 ಹಾಗೂ 342 ಪ್ರಕಾರ ಟೋಕರೆ ಕೋಳಿ ಪರ್ಯಾಯ ಪದವಾಗಿ ಪರಿಶಿಷ್ಟ ಪಂಗಡ ಸೇರಿಸಲು ಎಲ್ಲ ಅರ್ಹತೆ ಇದ್ದರು ಸೇರ್ಪಡೆ ಮಾಡುತ್ತೆವೆ ಎಂದು ಹೇಳುತ್ತಾ ರಾಜಕೀಯ ಮಾಡುತ್ತಿರುವ ಬಿಜೆಪಿ ಪಕ್ಷದ ನಡೆಯನ್ನು ನಾನು ಖಂಡಿಸುತ್ತೆನೆ ಎಂದು ಕರ್ನಾಟಕ ಬುಡಕಟ್ಟು ಜನಾಂಗದ ಸಂರಕ್ಷಣಾ ಸೇನೆಯ ರಾಜ್ಯ ಉಪಧ್ಯಕ್ಷರಾದ ಸಿದ್ದರಾಮ ತಳ್ಳಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಕಲಬುರಗಿ ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಬಂದಿದ್ದ ಮೋದಿಯವರು ಕೋಲಿ ಸಮಾಜ ಯಾದ ರಕುಂಗ್ ಎಂದು ಹೇಳಿ ಸಮಾಜದ ಬಗ್ಗೆ ಗೌರ ಪೂರ್ಣವಾಗಿ ಮಾತನಾಡಿ ದೇಶದ ರಾಜಕೀಯ ರಂಗದಲ್ಲೆ ಉತ್ತುಂಗದಲ್ಲಿ ಇದ್ದ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆಯವರನು ಸೋಲಿಸಲು ನಮ್ಮ ಸಮಾಜವನ್ನು ಬಳಸಿಕೊಂಡು ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರು ಮರೆತು ಬಿಟ್ಟಿದ್ದಾರೆ. ಕೋಲಿ ಸಮಾಜದ ಕೆಲ ನಾಲಯಕ ರಾಜಕೀಯ ಮುಖಂಡರು ತಮ್ಮ ರಾಜಕೀಯ ಜೀವನದ ಸಲುವಾಗಿ ಸಮಾಜದ ಜನರ ಜೀವನ ಬಲಿ ಕೋಡುತ್ತಿದ್ದಾರೆ. ಅಂತವರಿಗೆ ನಮ್ಮ ಯುವ ಕೋಲಿ ಸಮಾಜದ ಯುವಕರು ತಕ್ಕ ಪಾಠ ಕಲಿಸಲು ಸಿದ್ದವಾಗಿದು ಮುಂಬರುವ ವಿಧಾನ ಸಭೆ ಮತ್ತು ಲೋಕ ಸಭೆ ಚುನಾವಣೆಯಲ್ಲಿ ಸಮಾಜದೇ ಸ್ವಂತ ಪಕ್ಷ ಬರಲಿದು ಸಮಾಜದ ವ್ಯಕ್ತಿಗಳೆ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆ ಸ್ಪರ್ಧೆ ಮಾಡಲಿದ್ದಾರೆ. ನಮ್ಮ ಸಮಾಜ ಕರ್ನಾಟಕ ರಾಜ್ಯದಲ್ಲಿ ಎಸ ಸಿ ಯಲ್ಲೂ ಇದೆ ಎಸ ಟಿ ಯಲ್ಲೂ ಇದೆ. ಕಲಬುರಗಿ ಮತ್ತು ವಿಜಯಪುರ ಎಸ ಸಿ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಎಸ ಸಿ ಜಾತಿ ಸರ್ಟಿಫಿಕೇಟ್ ಪಡೆಯುವ ಕೋಲಿ ಸಮಾಜದ ಉಪ ಜಾತಿಯವರೆ ಸ್ಪರ್ಧೆ ಮಾಡಲಿದ್ದಾರೆ. ಅದೇ ರೀತಿ ಎಸ ಟಿ ಮತ್ತು ಎಸ ಸಿ ವಿಧಾನ ಸಭೆ ಚುನಾವಣೆಯಲ್ಲಿ ಕುರುಬ ಸಮಾಜದ ಗೊಂಡ ಕುರುಬ ಮತ್ತು ಟೋಕರೆ ಕೋಳಿ ಪರಿಶಿಷ್ಟ ಪಂಗಡ ವ್ಯಕ್ತಿಗಳು ಸ್ಪರ್ಧೆ ಮಾಡಲಿದ್ದಾರೆ. ಕೋಲಿ ಮತ್ತು ಕುರುಬ ಎರಡು ಸಮಾಜಗಳು ಎಸ ಟಿ ಸರ್ಟಿಫಿಕೇಟ್ ವಿಚಾರದಲ್ಲಿ ಒಗ್ಗೂಡಿ ಹೋರಾಟ ಮಾಡಲಿವೆ. 1950 ರಲ್ಲೆ ಎಸ ಟಿ ಮೀಸಲು ಅರ್ಹತೆ ಹೊಂದಿದ್ದರು ಕೂಡ ತೊಂದರೆ ಕೋಡುತ್ತಿರುವ ವ್ಯಕ್ತಿಗಳಿಗೆ ಮತ್ತು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಕುರುಬ ಮತ್ತು ಕಬ್ಬಲಿಗ ಸಮಾಜ ಸಿದ್ದವಾಗಿದೆ ಎಂದು ಹೇಳಿದರು.
Be the first to comment