ರಾಜ್ಯ ಸುದ್ದಿಗಳು
ಕಾರವಾರ
ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು , ಜರ್ನಲಿಸ್ಟ್ ಸಂಘಟನೆಯ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಭಟ್ಕಳದ ಪತ್ರಕರ್ತ , ಸಾಮಾಜಿಕ ಹೋರಾಟಗಾರ ಕುಮಾರ್ ನಾಯ್ಕ ಮುಂಡಳ್ಳಿ ಅವರನ್ನು ರಾಜ್ಯ ಉಪಾಧ್ಯಕ್ಷ ಡಾ.ಎಸ್.ಎಸ್ ಪಾಟೀಲ್ ಹುಬ್ಬಳ್ಳಿ ಅವರ ಸೂಚನೆಯ ಮೇರೆಗೆ ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ರಾಜ್ಯ ಅಧ್ಯಕ್ಷರಾದ ದಯಾನಂದ ಎಂ ಅವರು ಕುಮಾರ ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕನ್ನಡಮ್ಮ ದಿನಪತ್ರಿಕೆ ಮುಂಡಗೋಡ್ ತಾಲೂಕ ವರದಿಗಾರ ಶ್ರೀ ನಾಗರಾಜ್ ಅರ್ಜುನ್ ದೈವಜ್ಞ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಭಟ್ಕಳದ ಅಂಬಿಗ ನ್ಯೂಸ್ ವರದಿಗಾರ ಜೇವೋತ್ತಮ್ ಪೈ , ಜಿಲ್ಲಾ ಕಾರ್ಯದರ್ಶಿಯಾಗಿ ಸಾಗರ ಸಾಮ್ರಾಟ ಶಿರಸಿಯ ತಾಲೂಕ ವರದಿಗಾರ ಅಕ್ಷಯ್ ಶೇಟ್ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಪದಾಧಿಕಾರಿಗಳಿಗೆ ಉತ್ತರ ಕನ್ನಡ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳಿಗೆ ರಾಜ್ಯ ಉಪಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಅವರು ಅಭಿನಂದನೆಗಳು ಸಲ್ಲಿಸಿದ್ದಾರೆ.
ನೂತನ ಪದಾಧಿಕಾರಿಗಳಿಗೆ ಪತ್ರಕರ್ತರಿಗೆ ಯಾವುದೇ ಸಮಸ್ಯೆ ಆದಾಗ ಸಹಾಯ ಸಹಕಾರ ನೀಡುವುದರ ಜೊತೆಗೆ ಬಡ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುವಂತೆ ಮತ್ತು ಸದಾ ಭ್ರಷ್ಟರ ವಿರುದ್ಧ ಹೋರಾಟ ಮಾಡಿ ಬಡವರಿಗೆ , ಜನಸಾಮಾನ್ಯರರಿಗೆ ನ್ಯಾಯ ಒದಗಿಸುವಂತೆ ತಿಳಿಸಿದ್ದಾರೆ.
Be the first to comment