ತುಂಗಾನಗರ ಪೋಲಿಸರ ಭರ್ಜರಿ ಭೇಟೆ ಶ್ರೀಗಂಧ ಚೋರನ ಬಂಧನ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಶಿವಮೊಗ್ಗ

CHETAN KENDULI

ದಕ್ಷ ಎಸ್ ಪಿ ಲಕ್ಷ್ಮೀಪ್ರಸಾದ್, ಐ ಪಿ ಎಸ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೇಖರ್ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯ ಅಧಾರದ ಮೇಲೆ ಪ್ರೊಬೆಶನರಿ ಡಿವೈಎಸ್ ಪಿ ಗಜಾನನ ಸುತಾರ ಅವರ ನೇತ್ರುತ್ವದಲ್ಲಿ ತುಂಗಾನಗರ ಪೋಲಿಸ್ ಠಾಣೆಯ ಸಿಪಿಐ ದೀಪಕ್ ಹಾಗೂ ಸಿಬ್ಬಂದಿಗಳ ತಂಡ ಮತ್ತು ಶ್ರೀ ಶಂಕರ್ ಡಿಸಿಎಫ್ ಶಂಕರ್ ವಲಯ ಆಲ್ಕೊಳ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಯವರೊಂದಿಗೆ ತಡ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಟಿಪ್ಪುನಗರ ಏಳನೇ ಕ್ರಾಸ್ ಗೋಡೋನ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 910 ಕೆ.ಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದು ಆರೋಪಿ ಅಪ್ಸರ್ ನನ್ನು ಸ್ಥಳಗಳಲ್ಲಿಯೆ ಬಂಧಿಸಲಾಗಿದೆ ಈ ಸಂಬಂಧ ಶ್ರೀ ಗಜಾನನ ಸುತಾರ, ಪ್ರೊಬೆಶನರಿ ಡಿವೈಎಸ್ಪಿ ರವರ ದೂರಿನ ಮೇರೆಗೆ ಪ್ರಕರಣವನ್ನು ಟಿಪ್ಪುನಗರ ಸರಹದ್ದಿನ ಅರಣ್ಯ ಇಲಾಖೆಯಲ್ಲಿ ದಾಖಲಿಸಲಾಗಿರುತ್ತದೆ. 

ಶ್ರೀ ಗಜಾನನ ಸುತಾರ, ಪ್ರೊಬೆಶನರಿ ಡಿವೈಎಸ್ಪಿ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.ಇತ್ತೀಚೆಗೆ ಪೋಲಿಸ್ ಇಲಾಖೆ ಎಚ್ಚೆತ್ತುಗೊಂಡಿದೆ ಕ್ರಿಮಿನಲ್ ಗಳ ಬೆನ್ನಿಗೆ ಬಿದ್ದು ಸಾಕಷ್ಟು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಪತ್ರಿಕಾ ಬಳಗದಿಂದಲು ಅಭಿನಂದನೆಗಳು ಹಾಗೆಯೇ ತುಂಗಾ ನಗರ ಠಾಣೆಯ ಸರಹದ್ದಿನಲ್ಲಿ ಗಾಂಜಾ ದಂದೆ ಮಿರಿ ಮೀರಿ ಹೋಗಿದೆ ಎಗ್ಗಿಲ್ಲದೆ ನೆಡೆಯುತ್ತಿರುವ ಗಾಂಜಾ ದಂದೆಗೆ ಯುವಕರು ಬಲಿಯಾಗುತ್ತಿದ್ದಾರೆ ಎಲ್ಲೆಂದರಲ್ಲಿ ಗಾಂಜಾ ನಶೆಯಲ್ಲಿ ಕ್ರೈಮ್ ನೆಡೆದು ಹೊಗುತ್ತಿದೆ ಅದರಲ್ಲೂ ಮಿಳಘಟ್ಟ,ಅಣ್ಣಾನಗರ,ತುಂಗಾನಗರ,ಗೋಪಾಳ,ಪೆಸೀಟ್ ಕಾಲೇಜು ಸಮೀಪದಲ್ಲಿ ಗಾಂಜಾ ದಂದೆ ಎಗ್ಗಿಲ್ಲದೆ ನೆಡೆಯುತ್ತಿದೆ ಪೋಲಿಸ್ ಇಲಾಖೆ ಇದನ್ನು ಸೂಕ್ಷ್ಮವಾಗಿ ಗಮನಿಸಿ ಈ ಅಕ್ರಮ ದಂದೆಯಲ್ಲಿ ತೊಡಗಿರುವವರನ್ನು ಬಂಧಿಸಿ ಜೈಲಿಗಟ್ಟಬೇಕಿದೆ.

Be the first to comment

Leave a Reply

Your email address will not be published.


*