ಜಿಲ್ಲಾ ಸುದ್ದಿಗಳು
ಯಲ್ಲಾಪುರ
ಕಾಂಗ್ರೆಸ ಪಕ್ಷ ಅವಕಾಶ ನೀಡಿದರೆ ಯಲ್ಲಾಪುರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಕಾಂಗ್ರೆಸ ಯುವ ನಾಯಕ ಪ್ರಶಾಂತ ದೇಶಪಾಂಡೆ ಹೇಳಿದರು .ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದರು. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷದ ಸಂಘಟನೆ ನಿರಂತರವಾಗಿರಬೇಕು , ಪಕ್ಷವನ್ನು ಬಲಪಡಿಸುವ ಕರ್ತವ್ಯ ನಮ್ಮದಾಗಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಗಟ್ಟಿಯಾಗಿ ನೆಲೆಯೂರುವಂತೆ ಮಾಡಲು ಪಕ್ಷದಲ್ಲಿ ಅವಕಾಶವಿದೆ. ಜಿಲ್ಲೆಯಲ್ಲಿ ಕಾಂಗ್ರೆಸ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಇನ್ನೂ ಪ್ರಗತಿಯಲ್ಲಿವೆ. ಬಿಜೆಪಿ ಹೊಸದಾಗಿ ಏನೂ ಮಾಡಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡ ಜನರ ಬದುಕು ಸಂಕಷ್ಟದಲ್ಲಿದ್ದು, ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ತಾಲೂಕು ಕಾಂಗ್ರೆಸ ಅಧ್ಯಕ್ಷರಾದ ಡಿ.ಎನ್.ಗಾಂವಕರ, ಪರಿಶಿಷ್ಟ ವಿಭಾಗದ ಜಿಲ್ಲಾಧ್ಯಕ್ಷ ಬಸವರಾಜ, ಜಿಲ್ಲಾ ವಕ್ತಾರ ದೀಪಕ ದೊಡ್ಡರು, ಪ್ರಮುಖರಾದ ಟಿ.ಸಿ. ಗಾಂವಾರ, ಎನ್.ಕೆ. ಭಟ್ಟ ಮೆಣಸುಪಾಲ, ಎಂ.ಎಸ್. ನಾಯ್ಕ, ಪೂಜಾ ನೇತ್ರೆಕರ, ಸರಸ್ವತಿ ಗುನಗಾ, ಅಣ್ಣಪ್ಪ ನಾಯ್ಕ, ದಿಲೀಪ ರೊಖಡೆ, ಲಾರೆನ್ಸ್ ಸಿದ್ದಿ, ಶಿವಾನಂದ ನಾಯ್ಕ ಇತರರಿದ್ದರು . ತಾಲೂಕು ಕಾಂಗ್ರೆಸ ಕಾರ್ಯದರ್ಶಿ ಅನಿಲ ಮರಾಠೆ, ಪ್ರಶಾಂತ ಸಭಾಹಿತ ನಿರ್ವಹಿಸಿದರು.
Be the first to comment