ಜಿಲ್ಲಾ ಸುದ್ದಿಗಳು
ಭಟ್ಕಳ
ವಿವಿಧ ಸಮುದಾಯಗಳ ಮದ್ಯೆ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗುವುದೇ ಸದ್ಭಾವನ ದಿವಸ ಇದರ ಉದ್ದೇಶವಾಗಿದೆ ಎಂದು ಭಟ್ಕಳ ಉಪವಿಭಾಗದ ಸಹಾಯಕಆಯುಕ್ತೆ ಮಮತಾದೇವಿ ಹೇಳಿದರು.ಅವರು ಶುಕ್ರವಾರ ಸಂಜೆಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ಸದ್ಭಾವನಾ ದಿವಸ್ ಅಂಗವಾಗಿ ಭಟ್ಕಳದ ಸದ್ಭಾವನ ಮಂಚ್ ಆಯೋಜಿಸಿದ್ದ ‘ಸಾರ್ವಾಜನಿಕ ಸದ್ಭಾವನಾ ಪ್ರತಿಜ್ಞಾವಿಧಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದರು.
ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಭಟ್ಕಳ ತಾಲೂಕು ಸದ್ಭಾವನಾಮಂಚ್‌ಅಧ್ಯಕ್ಷ ಸತೀಶಕುಮಾರ್, ಸ್ದಭಾವನಾ ಕಾರ್ಯಕ್ರಮಗಳು ಸರ್ಕಾರಿಕಚೇರಿಗಳಿಗೆ ಸೀಮಿತವಾಗದೆ ಸಾರ್ವಜನಿಕ ಮಟ್ಟದಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಭಟ್ಕಳದ ಸದ್ಭಾವನಾ ಮಂಚ್‌ಸAಘಟನೆಇAದು ಸಾರ್ವಾಜನಿಕರೊಂದಿಗೆ ಪ್ರತಿಜ್ಞಾವಿಧಿ ಸ್ವೀಕರಿಸುವುದರ ಮೂಲಕ ಒಂದು ಹೊಸ ಕಲ್ಪನೆ ಹುಟ್ಟುಹಾಕಿದೆ. ವಿವಿಧೆತೆಯಲ್ಲಿಏಕತೆಯನ್ನು ಹೊಂದಿದ ನಮ್ಮರಾಷ್ಟçದಲ್ಲಿಎಲ್ಲರೂ ಪ್ರೀತಿ ಪ್ರೇಮದ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕು ಎಂದುಕರೆ ನೀಡಿದರು.ಸರ್ಕಾರ ಪ್ರತಿವರ್ಷ ಆ.೨೦ರಂದು ಸರ್ಕಾರಿ ಕಚೇರಿಗಳಲ್ಲಿ ಸದ್ಭಾವನ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಸುತ್ತದೆ.ಆದರೆಇಲ್ಲಿ ಸದ್ಭಾವನ ಮಂಚ್ ವತಿಯಿಂದ ಸಾರ್ವಜನಿಕವಾಗಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆಎಂದಅವರು ಸಾರ್ವಜನಿಕರು ಸದ್ಭಾವನಾ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಚಿಂತಕ ಪ್ರೋ.ಎಸ್.ಆರ್.ನಾಯಕ ಮಾತನಾಡಿ, ಜಗತ್ತಿನಲ್ಲಿಜಾತಿ, ಕೋಮು, ಲಿಂಗತಾರತಮ್ಯಗಳಿAದ ಪರಸ್ಪರರ ವಿಚಾರ ಮತ್ತು ಭಾವನೆಗಳಲ್ಲಿ ಕಲಬೆರಕೆಉಂಟಾಗುತ್ತಿದೆ. ನಮ್ಮಲ್ಲಿನ ವೈರುದ್ಯತೆಗಳನ್ನು ಬದಿಗಿಟ್ಟು ಮನುಷ್ಯರೆಲ್ಲರುಒಂದು ಎಂಬ ಭಾವನೆಯಿಂದ ಬದುಕಬೇಕುಎಂದುಕರೆ ನೀಡಿದರು.ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ, ಸದ್ಭಾವನೆಎಂದರೆ ದ್ವೇಷಗಳನ್ನು ದೂರ ಮಾಡಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕು. ನಮ್ಮಲ್ಲಿನ ವ್ಯತ್ಯಾಸಗಳು ದೊಡ್ಡದಾಗಿ ಸಂಘರ್ಷಕ್ಕೆಕಾರಣವಾಗುತ್ತಿದೆ.ನಮ್ಮಲ್ಲಿಐಕ್ಯತೆಯನ್ನು ಮುರಿಯುವ ಕೆಲಸ ಮಾಡುತ್ತಿರುವವರಿಗೆ ಸದ್ಭಾವನೆಯ ಮೂಲಕ ಉತ್ತರ ನೀಡಬೇಕಾಗಿದೆಎಂದರು.ಸದ್ಭಾವನ ಮಂಚ್ ಹಿರಿಯ ಸದಸ್ಯ ಎಂ.ಆರ್.ನಾಯ್ಕ ಮಾತನಾಡಿ, ಮನುಷ್ಯ ಶ್ರೇಷ್ಠ ವರ್ಗದವನಾಗಿದ್ದುಎಲ್ಲರನ್ನು ಪ್ರೀತಿಯಿಂದಕಾಣಬೇಕು, ಜಾತಿಮತ, ಪಂಥವನ್ನು ಲೆಕ್ಕಿಸದೆ ಮಾನವೀಯತೆಯೇ ಶ್ರೇಷ್ಟಎಂದು ತಿಳಿಯಬೇಕು ಎಂದಅವರುಎಲ್ಲರನ್ನು ಬದುಕಲು ಬಿಡಬೇಕು, ನಾನು ಬದುಕಬೇಕುಇನ್ನೊಬ್ಬರನ್ನು ಬದುಕಲು ಬಿಡಬೇಕುಎಂದರು. ಭಾರತವನ್ನುಯರ‍್ಯಾರೋ ಆಳಿದರು.ಆದರೂ ಭಾರತಇಂದುತನ್ನಶ್ರೇಷ್ಠತೆಯನ್ನುಕಾಪಾಡಿಕೊAಡು ಬಂದಿದೆಎAದರು.ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿಆರ್.ಎನ್.ಎಸ್. ಪೊಲಿಟೆಕ್ನಿಕ್‌ಕಾಲೇಜಿನಉಪಪ್ರಾಂಶುಪಾಲ ಮರಿಸ್ವಾಮಿ,ಕರ್ನಾಟಕಜರ್ನಲಿಷ್ಟ್ಯುನಿಯನ್‌ಜಿಲ್ಲಾಧ್ಯಕ್ಷ ಮನಮೋಹನ್ ನಾಯ್ಕ, ಜಮಾಅತೆಇಸ್ಲಾಮಿ ಹಿಂದ್ ಭಟ್ಕಳ ಶಾಖೆಯಅಧ್ಯಕ್ಷಇಂಜಿನೀಯರ್ ನಝೀರ್‌ಆಹ್ಮದ್‌ಖಾಝಿ, ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ಕಾದಿರ್ ಮೀರಾ ಪಟೇಲ್, ಮೌಲಾನ ಸೈಯ್ಯದ್‌ಝುಬೇರ್, ಸೈಯ್ಯದ್ ಶಕೀಲ್‌ಎಸ್.ಎಂ, ಯೂನೂಸ್‌ರುಕ್ನುದ್ದೀನ್, ಭಾರತ್ ಸ್ಕೌಟ್ಸ್ ಕಾರ್ಯಾದರ್ಶಿ ವೆಂಕಟೇಶ್‌ಗುಬ್ಬಿ ಮುಂತಾದವರು ಭಾಗವಹಿಸಿದ್ದರು.
Be the first to comment