ರಾಜ್ಯ ಸುದ್ದಿಗಳು
ಶಿರಸಿ
ತಾಲೂಕಿನ ಬೆಟ್ಟಕೊಪ್ಪದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್, ಕರ್ನಾಟಕ ಅಡಿಯಲ್ಲಿ ನಡೆದ ನಮ್ಮನೆ ಹಬ್ಬದ ದಶಮಾನೋತ್ಸವಕ್ಕೆ ಚಾಲನೆ ನೀಡಿದ ಚಿತ್ರ ನಟಿ ತಾರಾ ಅನುರಾಧಾ , ಕಲೆ ಸಾಹಿತ್ಯ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಅಧ್ಬತ ಕಾರ್ಯಕ್ರಮ ನಮ್ಮನೆ ಹಬ್ಬವಾಗಿದೆ ಎಂದು ಹೇಳಿದರು.ಶಿರಸಿಯ ನೆಲ ಜಲ ಸಂಸ್ಕೃತಿ, ಸಾಹಿತ್ಯ ಕ್ಷೇತ್ರಗಳ ತವರೂರು. ಕರುನಾಡಿಗೆ ಕಲಾವಿದರನ್ನುನೀಡಿದ ಶ್ರೇಷ್ಠ ಭೂಮಿ ಶಿರಸಿ. ತೆರೆಮರೆ ಕಾಯಂತೆ ಇರುವ ಕಲಾವಿದರನ್ನು,ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತೀರುವುದು ಸಂತಸ ತಂದಿದೆ ಎಂದರು.ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ಸೆಲ್ಕೋ ಇಂಡಿಯಾ ಬೆಂಗಳೂರು ಸಿ ಇ ಓ ಮೋಹನ ಹೆಗಡೆ ಯವರಿಗೆ ಹಾಗೂ ನಮ್ಮನೆ ಯುವ ಪುರಸ್ಕಾರ ವನ್ನು ಕಲಾವಿದ ವಿಭವ ಮಂಗಳೂರು ರವರಿಗೆ ನೀಡಿ ಗೌರವಿಸಲಾಯಿತು.
ಪ್ರತಿಯೊಬ್ಬರೂ ಈ ಹಬ್ಬ ನಮ್ಮನೆ ಹಬ್ಬವಾಗಿ ಆಚರಿಸುತ್ತಿದ್ದಾರೆ.ಪ್ರಶಸ್ತಿಯಿಂದೆ ನಾವು ಹೋಗಬಾರದು ಅದೇ ನಮ್ಮನ್ನು ಹುಡುಕಿಕೊಂಡು ಬರಬೇಕು. ಇಂತಹ ಶ್ರೇಷ್ಠ ಕಾರ್ಯಕ್ರಮ ದಲ್ಲಿ ನನ್ನನು ಸನ್ಮಾನಿಸಿರುವುದು ತುಂಬಾ ಸಂತಸ ತಂದಿದೆ ಎಂದು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಮುಂದಿನ ವರ್ಷದ ನಮ್ಮನೆ ಹಬ್ಬದಲ್ಲಿ ಐದು ಜನ ಬಡ ಪ್ರತಿಭಾವಂತರಿಗೆ ಬೆಳಕಿಲ್ಲ ಎಂದರೆ ಸೆಲ್ಕೊ ಸಂಸ್ಥೆ ಉಚಿತವಾಗಿ ನೀಡುತ್ತದೆ. ವಿಶ್ವಶಾಂತಿ ಟ್ರಸ್ಟ ಅಂಥವರ ಆಯ್ಕೆ ಮಾಡಿಕೊಡಲಿ ಎಂದು ಸೆಲ್ಕೋದಮೋಹನ ಹೆಗಡೆ ಮಾತನಾಡಿದರು.ಬಡಜನರಿಗೆ ಬೆಳಕನ್ನು ನೀಡುವ ಹಬ್ಬ ನಮ್ಮನೆ ಹಬ್ಬವಾಗಲಿದೆ . ನಮ್ಮ ಮುಂದಿನ ಜೀವನದ ಸಂಗತಿ ಚಿತ್ರರಂಗ . ವಿಶ್ವಕ್ಕೆ ಶಾಂತಿಯನ್ನು ಒದಗಿಸಿಕೊಟ್ಟ ಪುಣ್ಯ ಭೂಮಿ ನಮ್ಮ ಭಾರತ,ಕಲಾವಿದರಿಗೆ, ಸಾಹಿತಿಗಳಿಗೆ ಎಲ್ಲರಿಗೂ ಇದು ನಮ್ಮನೆ ಮುಖ್ಯ ಎಂದು ಅತಿಥಿಗಳಾಗಿ ಆಗಮಿಸಿದ್ದ ವಿ ಉಮಾಕಾಂತ ಭಟ್ ಮಾತನಾಡಿದರು.ಇಂಥದೊಂದು ಸಾಂಸ್ಕೃತಿಕ ಸಂಭ್ರಮ ಎಲ್ಲಡೆ ನಡೆಯಲಿ ಎಂದು ಈ ಸಂದರ್ಭದಲ್ಲಿ ಚಲನಚಿತ್ರ ನಟ ರಾಮಕೃಷ್ಣ ಹೆಗಡೆ ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷೆ ಭುವನೇಶ್ವರಿ ಹೆಗಡೆ ಮಾತನಾಡಿ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ , ಕಲೆಯ ಮೂಲಕ ವಿಶ್ವಶಾಂತಿ ಸಾರುವ ಪ್ರಯತ್ನ ಗಮನೀಯ ಎಂದರು. ಹಿರಿಯ ಪತ್ರಕರ್ತ ರವೀಂದ್ರ ಭಟ್, ಇಂಥ ಪುಟ್ಟ ಊರಿನಲ್ಲಿ ಕುಳಿತು ವಿಶ್ವಶಾಂತಿ ಸಂದೇಶ ಸಾರುವ ಪ್ರಯತ್ನ ನಡೆಯುತ್ತಿದೆ. ನಮ್ಮನೆ ಹಬ್ಬ ಮಾಡಲು ದೊಡ್ಡ ಮನೆಯೇ ಇರಬೇಕಿಲ್ಲ, ನಮ್ಮನೆ ಹಬ್ಬ ಮಾಡಲು ದೊಡ್ಡ ಮನೆಯೇ ಇರಬೇಕಿಲ್ಲ ಎಂದರು.ಈ ಸಂದರ್ಭದಲ್ಲಿ ಅರೆಹೊಳೆ ಸದಾಶಿವರಾವ್ ನಿರ್ವಹಿಸಿದರು. ಉಪಾಧ್ಯಕ್ಷ ರಮೇಶ ಕಾನಗೋಡ ವಂದಿಸಿದರು.ಭಾರತಿ ಹೆಗಡೆ, ಸ್ತುತಿ ಹೆಗಡೆ, ಪಲ್ಲವಿ ಹೆಗಡೆ ಪ್ರಾರ್ಥಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಪ್ರಶಸ್ತಿ ಪತ್ರಿಕೆ ವಾಚಿಸಿದರು.
Be the first to comment