ರಾಜ್ಯ ಸುದ್ದಿಗಳು
ಕಾರವಾರ
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಫೋಟೋಗ್ರಾಫರ್ ರೋಹನ್ ಕುಡಾಳಕರ ತೆಗೆದ ದೂದ್ ಸಾಗರ್ ಜಲಪಾತದ ಚಿತ್ರ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಇನ್‌ಕ್ರೆಡಿಬಲ್ ಇಂಡಿಯಾ ಗಮನಸೆಳೆದಿದ್ದು, ಚಿತ್ರವನ್ನು ಟ್ವೀಟ್ ಮಾಡಿದೆ.ರೋಹನ್ ಅಕ್ಟೋಬರ್ 2 ರಂದು ದೂದ್‌ಸಾಗರ್ ಜಲಪಾತದ ಎದುರಿನಿಂದ ಸಾಗುತ್ತಿರುವ ರೈಲಿನ ಚಿತ್ರವನ್ನು, ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪ್ರಕಟಿಸಿದ್ದರು.
ಇದನ್ನು ಗಮನಿಸಿದ ಇನ್‌ಕ್ರೆಡಿಬಲ್ ಇಂಡಿಯಾ ತನ್ನ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಪ್ರಕಟಿಸಿ, “ನಿಮ್ಮ ರೈಲಿನಿಂದ ಈ ರೀತಿಯ ವೀಕ್ಷಣೆಗೆ ಸಾಕ್ಷಿಯಾಗುವುದನ್ನು ಕಲ್ಪಿಸಿಕೊಳ್ಳಿ. ಆಕರ್ಷಕ! ಅಲ್ಲವೇ? ಕೋಲೆಮ್‌ನಿಂದ 10 ಕಿಮೀ ಮತ್ತು ಪಣಜಿಯಿಂದ 60 ಕಿಮೀ ದೂರದಲ್ಲಿರುವ ದೂಧ್‌ಸಾಗರ್ ಜಲಪಾತವು ಪ್ರತಿ ಕಣ್ಣನ್ನು ವಿಸ್ಮಯದಿಂದ ಸೆಳೆಯುವ ಸೌಂದರ್ಯವಾಗಿದೆ.”ಎಂದು ಟ್ವೀಟ್ ಮಾಡಿದೆ.ಈ ಚಿತ್ರಕ್ಕೆ ಜನರ ಮೆಚ್ಚುಗೆಯೂ ಸಾಕಷ್ಟು ಬಂದಿದ್ದು, ಜನರ ಕಣ್ಮನ ಸೆಳೆಯುತಿದೆ.
Be the first to comment