ಅನಧಿಕೃತ ಧ್ವನಿವರ್ಧಕಗಳ ಮೇಲೆ ಕ್ರಮ ಕೈಗೊಳ್ಳುವಂತೆ ಶ್ರೀ ರಾಮಸೇನೆ ಜಿಲ್ಲಾ ಘಟಕದಿಂದ ಭಟ್ಕಳ್ ಸಹಾಯಕ ಆಯುಕ್ತರಿಗೆ ಮನವಿ

ವರದಿ-ಜೀವೋತ್ತಮ್ ಪೈ , ಭಟ್ಕಳ್

ಜಿಲ್ಲಾ ಸುದ್ದಿಗಳು 

ಭಟ್ಕಳ

ಜಿಲ್ಲೆಯಲ್ಲಿ ಶಬ್ದ ಮಾಲಿನ್ಯ ಹಾಗೂ ಅನಧಿಕೃತ ಧ್ವನಿವರ್ಧಕದ ಮೇಲೆ ಕ್ರಮಕ್ಕೆ ಆಗ್ರಹಿಸಿ ಭಟ್ಕಳ ಶ್ರೀರಾಮಸೇನೆ ವತಿಯಿಂದ ಸಹಾಯಕ ಆಯುಕ್ತರ ಮೂಲಕ‌ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಮಾಲಿನ್ಯ ನಿಯಂತ್ರಣ ಜಿಲ್ಲಾ ಅಧಿಕಾರಿಗಳಿಗೆ ಗುರುವಾರದಂದು ಮನವಿ ಸಲ್ಲಿಸಿದ್ದಾರೆ.ಸುಪ್ರೀಂ ಕೋರ್ಟ್ ಸೇರಿದಂತೆ ಹಲವು ಕೋರ್ಟ್ ಗಳು ಅನಧೀಕೃತ ಮೈಕ್ ಸೇರಿದಂತೆ ಶಬ್ದಮಾಲಿನ್ಯ ತಡೆಯಲು ಆಜ್ಞೆ ಮಾಡಿದರೂ ತಮ್ಮ ಇಲಾಖೆ ಈ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಅತ್ಯಂತ ಖಂಡನಾರ್ಹವಾಗಿದೆ. ಇದು ನ್ಯಾಯಾಂಗ ನಿಂದನೆ ಹಾಗೂ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಜನರ ನೆಮ್ಮದಿಗಾಗಿ ವಿದ್ಯಾರ್ಥಿಗಳ, ಕಾರ್ಮಿಕರ, ರೋಗಿಗಳ, ವೃದ್ಧರ ಹಕ್ಕು ರಕ್ಷಣೆ ಕೋರ್ಟ್ ಆಶಯವಾಗಿದ್ದು ಈ ತಕ್ಷಣ ಕ್ರಮಕ್ಕೆ ಮುಂದಾಗಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

CHETAN KENDULI

ಈ ಸಂದರ್ಭದಲ್ಲಿ ಶ್ರೀ ರಾಮ‌ ಸೇನೆ ಜಿಲ್ಲಾಧ್ಯಕ್ಷ ರಾಜು ನಾಯ್ಕ, ತಾಲೂಕಾಧ್ಯಕ್ಷ ಬಾಬು ಮೋಗೇರ, ಉಪಾಧ್ಯಕ್ಷ ಉದಯ ಮೋಗೇರ, ಕ್ರಷ್ಣ ನಾಯ್ಕ, ವೆಂಕಟೇಶ ಖಾರ್ವಿ, ಮದನ‌ ಖಾರ್ವಿ, ದೇವಪ್ಪ ಖಾರ್ವಿ ಮುಂತಾದವರು ಇದ್ದರು.

Be the first to comment

Leave a Reply

Your email address will not be published.


*