ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಕನ್ನಡ ಚಲನಚಿತ್ರ ಬಾಲನಟಿ ಭೈರವಿ ಹುಟ್ಟುಹಬ್ಬದ ಪ್ರಯುಕ್ತ ಭೈರವಿ ಅಭಿನಯಿಸಿರುವ, ಹುಲಿಕುಂಟೆ ಮಹೇಶ್ ಮತ್ತು ಮೋಹನ್ ಕುಮಾರ್ ನಿರ್ಮಾಣದ ಶವಸಂಸ್ಕಾರ ಚಲನಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ವಾದ್ಯಗೋಷ್ಠಿ ಕಲಾವಿದರಿಗೆ ದಿನಸಿ ಕಿಟ್ ವಿತರಣೆ ಹಾಗೂ ನಿರ್ಗತಿಕರಿಗೆ ಅನ್ನದಾನ ಕಾರ್ಯಕ್ರಮ ಸಹ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕ.ರ.ವೇ.(ಪ್ರವೀಣ್ ಶೆಟ್ಟಿ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಆಡಂಬರದ ಜನ್ಮದಿನಗಳನ್ನು ಆಚರಿಸಿಕೊಳ್ಳುವ ಈ ದಿನಗಳಲ್ಲಿ ಹಸಿದವರಿಗೆ ಅನ್ನ ನೀಡಿ ಜನ್ಮದಿನ ಆಚರಿಸಿಕೊಳ್ಳುವ ಮೂಲಕ ನಮ್ಮ ತಾಲ್ಲೂಕಿನ ಪ್ರತಿಭೆ ಭೈರವಿ ಇತರರಿಗೆ ಮಾದರಿಯಾಗಿದ್ದಾಳೆ. ಕೋವಿಡ್ ಸಂಕಷ್ಟದಲ್ಲಿ ಆಕೆಯ ತಂದೆ ಪತ್ರಿಕಾ ವಿತರಕ ಮತ್ತು ನಿರ್ಮಾಪಕ ಹುಲಿಕುಂಟೆ ಮಹೇಶ್ ತಾಲ್ಲೂಕಿನಾದ್ಯಂತ ಬಡವರಿಗೆ ದಿನಸಿ ಕಿಟ್ ನೀಡುವ ಮೂಲಕ ನೆರವಾಗಿದ್ದರು. ಈಗ ಅವರ ಮಗಳು ಭೈರವಿ ಸಹ ಇದೇ ಹಾದಿಯಲ್ಲಿ ಸಾಗುವ ಮೂಲಕ ತಂದೆಗೆ ತಕ್ಕ ಮಗಳು ಎನಿಸಿದ್ದಾಳೆ ಎಂದರು.
ಶವಸಂಸ್ಕಾರ ಚಿತ್ರದ ನಿರ್ಮಾಪಕ ಮೋಹನ್ ಕುಮಾರ್ ಮಾತನಾಡಿ, ಭೈರವಿಯಲ್ಲಿ ವಿಶೇಷವಾದ ಪ್ರತಿಭೆ ಇದೆ. ಶವಸಂಸ್ಕಾರ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ಧಾಳೆ. ಯಾವುದೇ ರೀತಿಯ ಆಡಂಬರವಿಲ್ಲದೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಕಾರಣ, ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿಯೇ ನಮ್ಮ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಬೇಕೆಂದು ತೀರ್ಮಾನಿಸಿ ಇಂದು ಭೈರವಿಯ ಕೈಯಲ್ಲೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಸಿದೆವು ಎಂದರು. ಕಾರ್ಯಕ್ರಮದಲ್ಲಿ ಪತಿಕಾ ವಿತರಕ ಮತ್ತು ನಿರ್ಮಾಪಕ ಹುಲಿಕುಂಟೆ ಮಹೇಶ್, ರಾಧಾಮಣಿ ಮಹೇಶ್, ಸಂಗೀತ ನಿರ್ದೇಶಕ ಸುಪ್ರೀತ್ ಗಾಂಧಾರ್, ಚಿತ್ರನಟಿ ಅರುಣಾ,ಕಿರುತೆರೆ ನಟಿ ರಾಜೇಶ್ವರಿ, ವಾದ್ಯಗೋಷ್ಠಿ ಕಲಾವಿದರ ಸಂಘದ ಅಧ್ಯಕ್ಷ ಅಶೋಕ್, ವೆಂಕಟೇಶ್, ಮಲ್ಲೇಶ್ ಮುಂತಾದವರಿದ್ದರು.
Be the first to comment