ರಾಜ್ಯ ಸುದ್ದಿ
ಶಿರಸಿ: ತೈಲ ಬೆಲೆ 100ರೂ. ಗಡಿ ದಾಟಿರುವ ಬಗ್ಗೆ ನಗರದ ಪ್ರಭು ಪೆಟ್ರೋಲ್ ಬಂಕ್ ಎದುರಿನಲ್ಲಿ ಶಿರಸಿ- ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಸುಷ್ಮಾ ರಾಜಗೋಪಾಲ್ ನೇತೃತ್ವದಲ್ಲಿ ನಾಟೌಟ್ ಪ್ರತಿಭಟನೆ ನಡೆಸಲಾಯಿತು.
ಭಾನುವಾರ ನಡೆದ ಪ್ರತಿಭಟನೆಯಲ್ಲಿ ಸುಷ್ಮಾ ರಾಜಗೋಪಾಲ್ ಮಾತನಾಡುತ್ತ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿರ್ದೇಶನ ಮತ್ತು ಸೂಚನೆಯ ಮೇರೆಗೆ ಈ ಪ್ರತಿಭಟನೆ ಮಾಡುತ್ತಿದ್ದೇವೆ. ಕೋವಿಡ್-19 ರ ಸಂಕಷ್ಟದಲ್ಲಿರುವ ಜನತೆಗೆ ಪೆಟ್ರೋಲ್ ಬೆಲೆ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ. ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಿಜೆಪಿ ಸರಕಾರ ಬದುಕುವ ಅವಕಾಶವನ್ನು ಕಿತ್ತುಕೊಳ್ಳುತ್ತಿದೆ. ಕೂಡಲೇ ಇದಕ್ಕೊಂದು ಪರಿಹಾರ ಮಾರ್ಗವನ್ನು ಕಂಡುಕೊಳ್ಳುವ ಮೂಲಕ ಆಗುತ್ತಿರುವ ಕಷ್ಟವನ್ನು ತಪ್ಪಿಸಬೇಕು. ನಾವೆಲ್ಲ ಸೇರಿ ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು. ಮತ್ತು ಈ ಸಂದರ್ಭದಲ್ಲಿ ಬೈಕ್ ಸವಾರರಿಗೆ ಒಂದು ಲೀಟರ್ ಪೆಟ್ರೋಲ್ ನ್ನು ಉಚಿತವಾಗಿ ಹಾಕಿಸಿದರು. ಇನ್ನುಳಿದಂತೆ ಜಿ ಎನ್ ಹೆಗಡೆ ಮುರೇಗಾರ, ರಮೇಶ ದುಭಾಶಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸುಮಾ ಉಗ್ರಾಣಕರ್, ಸೂರ್ಯಪ್ರಕಾಶ ಹೊನ್ನಾವರ, ಮುಖಂಡರಾದ ರವೀಂದ್ರನಾಥ ನಾಯ್ಕ್,ಸತೀಶ ನಾಯ್ಕ್ ಮಧುರವಳ್ಳಿ, ನಗರಸಭಾ ಸದಸ್ಯ ಪ್ರದೀಪ ಶೆಟ್ಟಿ, ರಾಜು ಉಗ್ರಾಣಕರ್, ಶಕುಂತಲಾ ಜೈವಂತ, ಮಾಲತಿ ಮರಾಠೆ, ಲೂಸಿ ರಾಡ್ರಿಗ್ಸ್, ಸುಮಾ ನಾಯ್ಕ್, ಯುವ ಕಾಂಗ್ರೆಸ್ ಅಧ್ಯಕ್ಷ ಅಜರ್ ಮೂಸಾ, ವಿನಾಯಕ ಹೊಸಪಟ್ಟಣ, ಮಂಜುನಾಥ ಹಿರೇಮಠ, ಚಂದ್ರಕಾಂತ ರೇವಣಕರ್, ಪಂಚಾಯತ ಅಧ್ಯಕ್ಷ ರಾಘವೇಂದ್ರ ನಾಯ್ಕ್ ಬೆಳಲೆ, ಶಂಕರ ಗುಡ್ಡದಮನೆ, ರಾಘು ಶೆಟ್ಟಿ, ತಾರಾ ನಾಯ್ಕ್, ತಾರಾ ಮೇಸ್ತ, ಶಾರದಾ ಹೊಂಡದಕಲ್, ರವಿ ಚಂದಾವರ, ಪಂಚಾಯತ ಸದಸ್ಯರಾದ ವಿವೇಕ ಪೂಜಾರಿ, ನವೀನ ಶೆಟ್ಟಿ, ಮಹೇಶ ಶೆಟ್ಟಿ, ಅರವಿಂದ ಶೆಟ್ಟಿ, ಅಶ್ಪಾಕ್, ಮಿನಿನ್ ಫರ್ನಾಂಡಿಸ್, ಭಾಸ್ಕರ ಮಡಗಾಂವಕರ್ ಸೇರಿದಂತೆ ಯುವಕಾಂಗ್ರೆಸ್ ನ ಸದಸ್ಯರು ಪಾಲ್ಗೊಂಡಿದ್ದರು.
Be the first to comment