ಸುತ್ತೂರು ಶ್ರೀಗಳ ಪೂರ್ವಾಶ್ರಮದ ಮಾತೃಶ್ರೀ ಅವರ ನಿಧನಕ್ಕೆ ಡಿಸಿಎಂ ಶ್ರೀ ಗೋವಿಂದ ಕಾರಜೋಳ ತೀವ್ರ ಸಂತಾಪ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ: ಮೈಸೂರಿನ ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಪೂರ್ವಾಶ್ರಮದ ಮಾತೃಶ್ರೀ ಶ್ರೀಮತಿ ಶಿವನಾಗಮ್ಮ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ನಾಡಿನ ಉತ್ತಮೋತ್ತಮ ಪೀಠಗಳಲ್ಲಿ ಒಂದಾದ ಸುತ್ತೂರು ಮಠಕ್ಕೆ ತಮ್ಮ ಪುತ್ರರತ್ನವನ್ನು ಧಾರೆಯೆರೆದು, ತ್ರಿವಿಧ ದಾಸೋಹಕ್ಕೆ ಮೂಲ ಕಾರಣೀಭೂತರಾದ ಮಾತೃಶ್ರೀ ಅವರ ಅಗಲಿಕೆ ಅತೀವ ನೋವುಂಟು ಮಾಡಿದೆ ಎಂದು ಕಂಬನಿ ಮಿಡಿದ ಡಿಸಿಎಂ, ಶ್ರೀಗಳ ಇಂದಿನ ಮಹೋನ್ನತ ಸಾಧನೆಗಳಿಗೆ ಅವರ ಮಾತೃಶ್ರೀ ಅವರ ಸಂಸ್ಕಾರ, ಪ್ರೇರೇಪಣೆ, ತ್ಯಾಗ ಮನೋಭಾವ ಹಾಗೂ ಅನುಗ್ರಹವೂ ಮೂಲಕಾರಣವಾಗಿದೆ.

ಭಗವಂತನು ಮಾತೃಶ್ರೀ ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಹಾಗೂ ಅವರ ಸ ಕುಟುಂಬ ಪರಿವಾರದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಶ್ರೀ ಗೋವಿಂದ ಕಾರಜೋಳ ಅವರು ತಮ್ಮ ಶೋಕ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.

Be the first to comment

Leave a Reply

Your email address will not be published.


*