ರಾಜ್ಯ ಸುದ್ದಿಗಳು
ಕಾರವಾರ
ದಿನಾಂಕ:05-04-2002 ರಂದು ಫಿರ್ಯಾದಿ ಶ್ರೀ ನಾಗರಾಜ ಸುರೇಶ ಗಾಂವಕರ ಇವರು ಠಾಣೆಗೆ ಬಂದು ಚೆಂಡಿಯಾದಲ್ಲಿ ತಾವು ಅರ್ಚಕರಾಗಿರುವ ಶ್ರೀ ನವ ಚಂಡಿಕಾ ದೇವಿ ದೇವಸ್ಥಾನದ ಪಕ್ಕದ ಬಾಗಿಲನ್ನು ಒಡೆದು ದೇವಸ್ಥಾನದ ಒಳಗೆ ಪ್ರವೇಶಿಸಿ ಒಳಗಡೆಯಿದ್ದ ದೇವಿಯ ಬೆಳ್ಳಿ, ಬಂಗಾರದ ಆಭರಣಗಳು, ಮತ್ತು ನಗದು ಹಣ, ಒಟ್ಟು ಸೇರಿ, ಸುಮಾರು 3,77,000/- ಮೌಲ್ಯದ ಸ್ವತ್ತು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ನೀಡಿದ ದೂರನ್ನು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಿಕೊಂಡು ಠಾಣಾ ಗುನ್ನಾ ನಂ-22/2022 ಕಲಂ 454,457,380 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ ಹಾಗೂ ಆರೋಪಿತರ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲಾ ಮಾನ್ಯ ಪೊಲೀಸ್ ಅಧೀಕ್ಷಕರು, ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಗು ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಸೂಚನೆ ಮೇರೆಗೆ 03 ತಂಡಗಳನ್ನು ರಚನೆ ಮಾಡಲಾಯಿತು, ಕೂಡಲೇ ಕಾರ್ಯಪ್ರವೃತರಾದ ಒಂದು ತಂಡ ರಾಜ್ಯಸ್ಥಾನಕ್ಕೆ ಮತ್ತೊಂದು ತಂಡ ಗುಜರಾತಗೆ ತೆರಳಿ ಆರೋಪಿತರ ಬಗ್ಗೆ ಖಚಿತ ಮಾಹಿತಿಯನ್ನಾದರಿಸಿ ಆರೋಪಿತರಾದ 01)ಪ್ರವೀಣ ಸಿಂಗ್ ತಂದೆ ಜಗನ್ ಸಿಂಗ್ ಪ್ರಾಯ:35ವರ್ಷ ಸಾ-ಬೇವ್ ಗ್ರಾಮ, ಶಿವಗಂಜ ತಾ, ಸಿರೋಹಿ ಜಿಲ್ಲೆ, ರಾಜಸ್ಥಾನ 02) ಸುರೇಶಕುಮಾರ ತಂದೆ ಶಾಂತಿಲಾಲ ಸೋನಿ ಪ್ರಾಯ:47 ವರ್ಷ ಸಾ-ಅಹಮದಬಾದ ಗುಜರಾತ ಇವರನ್ನು ವಶಕ್ಕೆ ಪಡೆದುಕೊಂಡು ದಿನಾಂಕ:14-04-2022 ರಂದು ದಸ್ತಗಿರಿ ಮಾಡಿ ವಿಚಾರಣೆ ಮಾಡಿದ್ದು ವಿಚಾರಣೆ ವೇಳೆ ಆರೋಪಿತರು ತಾವು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಅವರಿಂದ ದೇವಸ್ಥಾನ ಕಳ್ಳತನವಾದ ಆಭರಣ, ಬೆಳ್ಳಿಯ ಗಟ್ಟಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಹುಂಡೈ ಕಾರು ಹಾಗೂ ಹೊಂಡ ಎಕ್ಟಿವ್ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡಿದ್ದು ಇದರ ಒಟ್ಟು ಮೌಲ್ಯ ಸುಮಾರು 4,32,000/- ಇರುತ್ತದೆ. ಈ ಪ್ರಕರಣದ ಮತ್ತೊಬ್ಬ ಆರೋಪಿಯಾದ 03) ಧರ್ಮೇಂದ್ರ ಕುಮಾರ ತಂದೆ ಶಂಕರಲಾಲ ರಾವ್, ರಾಜಸ್ಥಾನ ಈತನು ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರೆದಿದೆ, ದಸ್ತಗಿರಿ ಮಾಡಿದ ಆರೋಪಿತರಿಗೆ ಮಾನ್ಯ ನ್ಯಾಯಲಯಕ್ಕೆ ಹಾಜರು ಪಡಿಸಿದ್ದು, ಸದರಿಯವರು ನ್ಯಾಯಂಗ ಬಂಧನದಲ್ಲಿ ಇರುತ್ತಾರೆ. ಸದ್ರಿ ಆರೋಪಿತರ ಮೇಲೆ ಕರ್ನಾಟಕ, ರಾಜಸ್ಥಾನ, ಗುಜರಾತ ಮುಂತಾದ ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತವೆ.
ಈ ಪ್ರಕರಣ ಭೇದಿಸುವಲ್ಲಿ ಮಾನ್ಯ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಸುಮನ ಡಿ.ಪೆನ್ನೇಕರ್ ರವರು ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್.ಬದರಿನಾಥ ರವರ ಮಾರ್ಗದರ್ಶನದಲ್ಲಿ ಮತ್ತು ಕಾರವಾದ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವ್ಯಾಲೇಂಟಿನ್ ಡಿಸೋಜಾ ರವರ ಸಲಹೆಯಂತೆ ಕಾರವಾರ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸೀತಾರಾಮ.ಪಿ ಹಾಗೂ ಪಿ.ಎಸ್.ಐ (ತನಿಖೆ), ಅಂಕೋಲ ಪೊಲೀಸ್ ಠಾಣೆಯ ಪಿ.ಎಸ್.ಐ(ತನಿಖೆ), ಪ್ರೊ ಪಿ.ಎಸ್.ಐಗಳು ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ಮತ್ತು ಕಾರವಾರ, ಗ್ರಾಮೀಣ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ , ಅಂಕೋಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.ಸದರಿ ಆರೋಪಿತರನ್ನು ಪ್ರಕರಣ ದಾಖಲಾದ ಒಂದು ವಾರದ ಒಳಗೆ ಬಂಧಿಸುವಲ್ಲಿ ಯಶಸ್ವಿಯಾದ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಶಂಶಿಸಿ ಬಹುಮಾನ ಘೋಷಿಸಿರುತ್ತಾರೆ.
Be the first to comment