ಜಿಲ್ಲಾ ಸುದ್ದಿಗಳು
ಮಸ್ಕಿ:
ಇಂದು ಮದ್ಯಾಹ್ನ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಡಾ.ರಮೇಶ ಮಾಳಗಿಯವರಿಗೆ ರಾಜ್ಯಮಟ್ಟದ ಅತಿಥಿ ಉಪನ್ಯಾಸಕರ ಅನಿರ್ದಿಷ್ಠಾವಧಿ ಧರಣಿಗೆ ನಮ್ಮ ಬೆಂಬಲವೂ ಇದೆ ಎಂದು ಮಸ್ಕಿಯ ಅತಿಥಿ ಉಪನ್ಯಾಸಕರು ಮನವಿಪತ್ರವನ್ನು ನೀಡುವ ಮೂಲಕ ಬೆಂಬಲಿಸಿದರು.
ನಾಳೆ ಅಂದರೆ 10/12/2021 ರಿಂದ ಅತಿಥಿ ಉಪನ್ಯಾಸಕರ ಸೇವಾ ವಿಲೀನಾತಿಗಾಗಿ ಆಗ್ರಹಿಸಿ ಧಾರವಾಡದಲ್ಲಿ ನಡೆಯುವ ರಾಜ್ಯ ಸರಕಾರಿಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಫನ್ಯಾಸಕರ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಕ್ಕೆ ಮಸ್ಕಿ ಪದವಿಕಾಲೇಜಿನ ಅತಿಥಿ ಉಪನ್ಯಾಸಕರ ಸಂಘವೂ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತದೆಂದು ಸಂಘದ ರಾಮಣ್ಣ ನಾಯಕ ಹೇಳಿದರು.
ಇಂದು ಮದ್ಯಾಹ್ನ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಡಾ.ರಮೇಶ ಮಾಳಗಿಯವರಿಗೆ ಮನವಿಪತ್ರವನ್ನು ನೀಡಿ ಅವರು ಮಾತಮಾಡಿದರು.
ನಂತರ ಮಾತನಾಡಿದ ಅತಿಥಿ ಉಪನ್ಯಾಸಕ ಸುರೇಶ ಬಳಗಾನೂರು ಇದು14,000.ಅತಿಥಿ ಉಪನ್ಯಾಸಕರ ಬಹುದಿನದ ಬೇಡಿಕೆಯಾಗಿದೆ ಈ ಬಾರಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಷನದಲ್ಲಿ ಅತಿಥಿ ಉಪನ್ಯಾಸಕರ ಸೆವಾವಿಲೀನಾತಿಮಾಡಲು ನಿರ್ಧರಿಸಬೇಕು.
ಇದು ಮಾಡು ಇಲ್ಲವೆ ಮಡಿ ಹೋರಾಟ.ಸರಕಾರ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂಧಿಸಿ ಬದುಕಿಗೆ ಆಧಾರ ನೀಡಲು ಆಗ್ರಹಿಸಿದರು.
ನಂತರ ಮಾತನಾಡಿದ ಪ್ರಭುದೇವ ಸಾಲಿಮಠ ಈ ಬಾರಿ ನಮ್ಮ ಬೇಡಿಕೆ ಈಡೇರುವ ನಿರೀಕ್ಷೆಯಿದೆ. ಸರಕಾರ ಉಪನ್ಯಾಸಕರ ಬಾಳಲ್ಲಿ ಆಟವಾಡಬಾರದು ಕೂಡಲೆ ಉದ್ಯೋಗ ಭದ್ರತೆ ಅಥವಾ ಸೇವಾವಿಲೀನಾತಿ ಮಾಡಿ ಅತಿಥಿ ಉಪನ್ಯಾಸಕರ ಬಾಳಿನ ಬೆಳಕಾಗಬೇಕು ಎಂದರು.
ಈ ಸಂದರ್ಭದಲ್ಲಿ ಚನ್ನಬಸವ ವಸ್ತ್ರದ್,ಅಯ್ಯಪ್ಪ ಪಾಮನಕಲ್ಲೂರು,ಸುರೇಶ ಬಳಗಾನೂರು, ಚಾಂದಪಾಷಾ ಸೇರಿದಂತೆ ಇತರ ಅತಿಥಿ ಉಪನ್ಯಾಸಕರಿದ್ದರು.
Be the first to comment