ಕಾರವಾರ ನಗರಸಭೆ ಆಯುಕ್ತರ ಲಂಚ ಸ್ವೀಕಾರ ಆರೋಪ ,ಸಾಮಾನ್ಯ ಸಭೆಯಲ್ಲಿ ಸ್ಪಷ್ಟನೆ ಕೇಳಿದ ಸದಸ್ಯರು

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಕಾರವಾರ

ಕಾರವಾರ ನಗರಸಭೆ ಆಯುಕ್ತರು ಕಟ್ಟಡವೊಂದರ ಕೆಲಸಕ್ಕೆ ಸಂಬoಧಿಸಿ ದಂತೆ ಲಂಚ ಕೇಳಿದ್ದಾರೆ ಎನ್ನುವ ವಿಷಯಕ್ಕೆ ಸಂಬoಧಿಸಿದoತೆ ನಗರಸಭೆ ಸಾಮಾನ್ಯಸಭೆಯಲ್ಲಿ ಚರ್ಚೆ ನಡೆಯಿತು.ಸಭೆ ಆರಂಭವಾಗುತ್ತಿದ್ದoತೆಯೇ ಕಾಂಗ್ರೆಸ್ ಸದಸ್ಯ ಸಂದೀಪ ತಳೇಕರ ಅವರು ಪೌರಾಯುಕ್ತ ಆರ್. ಪಿ. ನಾಯ್ಕ ಅವರ ವಿರುದ್ಧ ಲಂಚ ಪಡೆದ ಆರೋಪದ ಬಗ್ಗೆ ಪ್ರಸ್ತಾಪಿಸಿದರು. ಆಯುಕ್ತರು ಈಗಾಗಲೇ ಐದು ಲಕ್ಷ ಪಡೆದಿದ್ದಾರೆ. ಇನ್ನೂ ಎರಡು ಲಕ್ಷ ನೀಡಿ ಎಂದು ಕಟ್ಟಡ ಮಾಲೀಕರಿಗೆ ಗಂಟು ಬಿದ್ದಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸದಸ್ಯ ತಳೇಕರ್ ಪಟ್ಟು ಹಿಡಿದರು.ಅಧಿಕಾರಿಗಳ ಮೇಲೆ ಇಂತಹ ಆರೋಪಗಳು ಬಂದ ಮೇಲೆ ಅದು ಇಡಿ ನಗರಸಭೆಯ ಮೇಲೆ ಆರೋಪ ಬಂದoತೆ. ಹಾಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ತಾಕೀತು ಮಾಡಿದರು.

CHETAN KENDULI

ಈ ಸಂದರ್ಭದಲ್ಲಿ ಅಧ್ಯಕ್ಷ ನಿತೀನ ಪಿಕಳೆ ಮಾತನಾಡಿ, ಲಂಚ ಸ್ವೀಕರಿಸುವುದು ಅಷ್ಟೇ ಅಲ್ಲ ಲಂಚ ಕೊಡುವುದು ಅಷ್ಟೇ ಅಪರಾಧ ಹಾಗಾಗಿ ಲಂಚ ಕೊಟ್ಟವರ ಮೇಲೆ ಪ್ರಕರಣ ದಾಖಲಿಸಬೇಕು ಎಂದರು. ಆಗ ಕೆಲ ಸದಸ್ಯರು ಕೇಸ್ ಹಾಕಿ ಎಂದರು.ವಿಷಯ ಇನ್ನಷ್ಟು ಗಂಭೀರವಾಗುತಿದ್ದoತೆಯೇ ಮಾತನಾಡಿದ ಆಯುಕ್ತ ನಾಯ್ಕ ಅವರು ಸದಸ್ಯರೆಲ್ಲರೂ ಸಾಕ್ಷಿದಾರರಾಗುವುದಾದರೆ ದೂರು ನೀಡುವುದಾಗಿ ತಿಳಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಸಹಮತ ವ್ಯಕ್ತಪಡಿಸಿದರೆ, ಬಿಜೆಪಿ ಸದಸ್ಯರು ಅಸಮ್ಮತಿ ಸೂಚಿಸಿದರು. ಯಾರೋ ಮಾಡಿದ ಆರೋಪಗಳಿಗೆ ನಾವು ಸಾಕ್ಷಿದಾರರಾಗುವುದಿಲ್ಲ ಎಂದರು.

ಈ ವಿಷಯಕ್ಕೆ ಸಂಬoಧಿಸಿದoತೆ ಕೆಲ ಹೊತ್ತು ಬಿಸಿಬಿಸಿ ಚರ್ಚೆ ನಡೆಯಿತು. ಸದಸ್ಯರೆಲ್ಲರೂ ಒಪ್ಪುವು ದಾದರೆ ದೂರು ನೀಡುವುದಾಗಿ ಹೇಳಿ ಆಯುಕ್ತರು ಸುಮ್ಮನಾದರು. ಈ ಸಂದರ್ಭದಲ್ಲಿ ಮಾತನಾಡಿದ ಪಿಕಳೆ ಅವರು, ಈ ವಿಷಯದ ಚರ್ಚೆ ಅನಗತ್ಯ. ಚರ್ಚೆ ಮಾಡುವುದಿದ್ದರೂ ಕಚೇರಿಯಲ್ಲಿ ಮಾಡೋಣ ಎಂದರು.

Be the first to comment

Leave a Reply

Your email address will not be published.


*