ಎಂ.ಇ.ಎಸ್ ಕಿಡಿಗೇಡಿಗಳ ಪುಂಡಾಟಿಕೆ ವಿರೋಧಿಸಿ ಭಟ್ಕಳ್ ಆಸರಕೇರಿ ಕನ್ನಡ ಭುವನೇಶ್ವರಿ ಸಂಘದಿಂದ ಮುಖ್ಯಮಂತ್ರಿ ಗಳಿಗೆ ಮನವಿ..!

ವರದಿ: ಕುಮಾರ್ ನಾಯ್ಕ್, ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

CHETAN KENDULI

 

ಭಟ್ಕಳ:

ಎಂ.ಇ. ಎಸ್. ಕಿಡಿಗೇಡಿಗಳು ದೌರ್ಜನ್ಯ ವೆಸಗುತ್ತಿರುವದನ್ನು, ಕನ್ನಡ ಬಾವುಟವನ್ನು ಸುಟ್ಟು ಹಾಕಿರುವದನ್ನು ವಿರೋಧಿಸಿ ಭುವನೇಶ್ವರಿ ಕನ್ನಡ ಸಂಘ ಆಸರಕೇರಿ ಮಂಗಳವಾರದAದು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ಸುವರ್ಣಸೌಧದ ಅಧಿವೇಶನ ನಡೆಯುವ ವೇಳೆ ಎಂ. ಇ. ಎಸ್. ಸಂಘಟನೆಯ ಕಿಡಿಗೇಡಿಗಳು ಅಧಿವೇಶನದ ವಿರುದ್ಧವಾಗಿ ಮಹಾಮೇಳಾವ್ ಮಾಡಲು ಹೊರಟು ಗಲಭೆ ಎಬ್ಬಿಸಿ ಕನ್ನಡದ ಬಾವುಟವನ್ನು ಸುಟ್ಟು ಹಾಕಿದ್ದಲ್ಲದೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ. ಅಲ್ಲದೇ ಕನ್ನಡಿಗರಿಗೆ ಸಂಬಂಧಿಸಿದ ಅಂಗಡಿ, ಹೋಟೆಲ್, ಸಾರಿಗೆ ಬಸ್ ಗಳ ಮೇಲೆ ದಾಳಿ ನಡೆಸಿದ್ದಾರೆ.

ಎಂ. ಇ. ಎಸ್. ಪುಂಡರ ಇಂತಹ ಕುಕೃತ್ಯವನ್ನು ಶ್ರೀ ಭುವನೇಶ್ವರಿ ಕನ್ನಡ ಸಂಘ ಬಲವಾಗಿ ಖಂಡಿಸುತ್ತದೆ. ನಮ್ಮ ಸಂಘವು ಕಳೆದ ೨೪ ವರ್ಷಗಳಿಂದ ಕನ್ನಡದ ನೆಲ ಜಲ ಭಾಷೆಗೆ ಧಕ್ಕೆ ಬಾರದಂತೆ ಹೋರಾಟ ಮಾಡುತ್ತ ಬಂದಿದ್ದಾರೆ.

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಕನ್ನಡದ ನೆಲ ಜಲ ಭಾಷೆ ರಕ್ಷಣೆಗೆ ನಮ್ಮ ಸಂಘವು ಕಟಿಬದ್ಧವಾಗಿದೆ.

ಹೀಗಿರುವಾಗ ಮೊನ್ನೆ ಬೆಳಗಾವಿಯಲ್ಲಿ ನಡೆದ ಘಟನೆಯು ಕನ್ನಡಿಗರ ಸ್ವಾಭಿಮಾನವನ್ನು ಸಿಲುಕುವಂತೆ ಮಾಡಿದೆ. ಈ ಘಟನೆಯನ್ನು ನಮ್ಮ ಸಂಘವು ಕಠೋರವಾಗಿ ಖಂಡಿಸುತ್ತ ಮುಂದೆ ಮರುಕಳಿಸದಂತೆ ಎಮ್. ಇ. ಎಸ್. ಸಂಘಟನೆಯನ್ನು ಎಚ್ಚರಿಸುತ್ತದೆ.

ಘಟನೆಗೆ ಸಂಬAಧಿಸಿದAತೆ ಘನಸರ್ಕಾರವು ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹೂಡಿರುವ ಎಲ್ಲಾ ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕು ಹಾಗೂ ಕರ್ನಾಟಕದಲ್ಲಿ ಎಂ. ಇ. ಎಸ್. ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಸಂಘಟನೆಯ ಸದಸ್ಯರು ಮನವಿ ಜೊತೆಗೆ ಆಗ್ರಹಿಸಿದರು.

ನಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಹಾಗೂ ಎಂ. ಇ. ಎಸ್. ಸಂಘಟನೆಯ ಕಿಡಿಗೇಡಿಗಳ ಅತಿರೇಕದ ವರ್ತನೆ ಹೀಗೆ ಮುಂದುವರೆದಲ್ಲಿ ಹಾಗೂ ಮುಂದಿನ ದಿನಗಳಲ್ಲಿ ಸಂಘವು ಇತರ ಸಂಘಟನೆಯೊAದಿಗೆ ಸೇರಿಕೊಂಡು ಬ್ರಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಸಹಾಯಕ ಆಯುಕ್ತೆ ಮಮತಾದೇವಿ ಜಿ. ಎಸ್. ಅವರ ಅನುಪಸ್ಥಿತಿಯಲ್ಲಿ ಉಪ ತಹಸೀಲ್ದಾರ ಸಂತೋಷ ಭಂಢಾರಿ ಅವರು ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಮೇಶ್ ಪಿ ನಾಯ್ಕ, ಕಾರ್ಯದರ್ಶಿ ಪಾಂಡುರAಗ ಎಸ್. ನಾಯ್ಕ, ಸಂಘದ ಪ್ರಮುಖ ಸದಸ್ಯರಾದ ಪ್ರಕಾಶ್ ನಾಯ್ಕ, ಶ್ರೀಕಾಂತ ನಾಯ್ಕ, ವಸಂತ ಡಿ. ನಾಯ್ಕ, ಈಶ್ವರ ಎನ್. ನಾಯ್ಕ, ರಾಮಚಂದ್ರ ಎನ್. ನಾಯ್ಕ, ಮಂಜುನಾಥ ಡಿ. ನಾಯ್ಕ,ವೆಂಕಟೇಶ್ ಸಿ. ನಾಯ್ಕ, ಹನುಮಂತ ನಾಯ್ಕ, ಕನ್ನಡಪರ ಹೋರಾಟಗಾರರಾದ ಪ್ರಶಾಂತ ನಾಯ್ಕ ಕೋಕ್ತಿ , ಶ್ರೀನಿವಾಸ್ ಹನುಮಾನ್ ನಗರ, ವೆಂಕಟೇಶ್ ನಾಯ್ಕ ಮೊದಲಾದವರು ಹಾಜರಿದ್ದರು.

 

Be the first to comment

Leave a Reply

Your email address will not be published.


*