ಜಿಲ್ಲಾ ಸುದ್ದಿಗಳು
ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗಡೇಮನೆ ಗ್ರಾಮದವರಾದ ಶ್ರೀಮತಿ ಲಕ್ಷ್ಮಿ ರಾಮಪ್ಪ ಇವರು ಕರ್ನಾಟಕದ ಹಸೆ ಚಿತ್ತಾರ ಕಲೆಯನ್ನು ರಾಷ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಲು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಗೃಹಿಣಿಯಾಗಿ ಕೃಷಿಕರಾಗಿದ್ದು ಸೂಕ್ಷ್ಮ ವಿನ್ಯಾಸದ ಹಸೆ ಚಿತ್ತಾರ ಕಲಾವಿದೆ. ಎಲ್ಲಾ ದೀವರ ಹೆಣ್ಣುಮಕ್ಕಳಂತೆ ಸಾಂಪ್ರದಾಯಿಕ ಹಸೆ ಚಿತ್ತಾರ ಬರೆಯುವುದನ್ನು ಕಲಿತ ಇವರು ತಮ್ಮ ತಾಯಿಯಿಂದ ನೋಡುತ್ತಲೇ ಕಲಿತಿದ್ದಾರೆ. ದೀವರ ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಹಸೆಚಿತ್ತಾರ ರಕ್ತಗದ ಕಲೆ ಎಂದೇ ಹೇಳಬಹುದು. ಇವರು ಸುಮಾರು ಮೂವತ್ತು ವರ್ಷಗಳಿಂದ ಇವರ ಹಸೆಚಿತ್ತಾರಗಳು ರಾಜ್ಯ ಮಟ್ಟದಲ್ಲಿ, ರಾಷ್ಟçಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಪ್ರದರ್ಶನವಾಗಿವೆ. ಮತ್ತು ತರಬೇತಿ ಸಹ ನೀಡಿದ್ದಾರೆ. ಮಲೆನಾಡಿನ ರೈತಾಪಿ ವರ್ಗದ ಜಾನಪದ ಗೀತೆಗಳನ್ನು ಹಾಡುವಲ್ಲಿಯೂ ಸಹ ಇವರು ಎತ್ತಿದ ಕೈ. ಇವರಿಗೆ 2021 ನೇ ಸಾಲಿನ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಒಲಿದು ಬಂದಿರುವುದು ಮಲೆನಾಡಿನ ಹಸೆಚಿತ್ತಾರ ಪರಂಪರೆಗೆ ಸಂದ ಗೌರವ ಎಂದು ಜಾನಪದ ಅಕಾಡೆಮಿ ಸದಸ್ಯ ಪುಷ್ಪಲತ ಹರ್ಷ ವ್ಯಕ್ತಪಡಿಸಿದ್ದಾರೆ. ಮಲೆನಾಡಿನಲ್ಲಿ ಮದುವೆ ಶಾಸ್ತ್ರಕ್ಕೆ ,ಭೂಮಣ್ಣಿ ಹಬ್ಬಕ್ಕೆ ಪ್ರದಾನವಾಗಿ ಲಕ್ಷಾಂತರ ದೀವರ ಹೆಣ್ಣುಮಕ್ಕಳು, ಹಾಗು ಬೇರೆ ಬೇರೆ ಜಾತಿ ಸಮುದಾಯದ ಹಳ್ಳಿಯ ಹೆಣ್ಣುಮಕ್ಕಳು ಬಿಡಿಸುವ ಸಂಪ್ರದಾಯಿಕ ಚಿತ್ತಾರ ಕಲೆಯಾಗಿರುವ ಹಸೆಚಿತ್ತಾರವನ್ನು ಗಡೇಮನೆ ಲಕ್ಷ್ಮಮ್ಮ ಅವರು ಮತ್ತಷ್ಟು ಸೂಕ್ಷ ವಿನ್ಯಾಸಗಳೊಂದಿಗೆ ಚಿತ್ರಿಸುವಲ್ಲಿ ಸಿದ್ದಹಸ್ತರಾಗಿದ್ದಾರೆ.
ತರಬೇತಿ ಮತ್ತು ಪ್ರದರ್ಶನಗಳು ಅವರು ಹಲವು ತಾಲ್ಲೂಕು, ಜಿಲ್ಲೆ ರಾಜ್ಯ ರಾಷ್ಟçಹಂತದಲ್ಲಿ ಸಾಕಷ್ಟು ತರಬೇತಿಗಳನ್ನು ನೀಡಿದ್ದಾರೆ. ಹಸೆ ಚಿತ್ತಾರ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಮುಖ್ಯವಾಗಿ 1999 ರಲ್ಲಿ ನೀನಾಸಂ ಸಂಸ್ಥೆಯಿAದ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಒಂದು ವಾರ ವಿವಿಧ ಜಿಲ್ಲೆಯ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. 2000ನೇ ಸಾಲಿನಲ್ಲಿ ಹೊನ್ನೆಮರಡುವಿನಲ್ಲಿ ಒಂದು ವರ್ಷ ಹಲವಾರು ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. 2002ರಲ್ಲಿ ಸಾಗರದ ಸ್ಥಳೀಯರಿಗೆ ಭೀಮನಕೇರಿ ಶಾಲೆ, ಹೊನಕೇರಿ ಶಾಲೆ ಇನ್ನಿತರ ಕಡೆಗಳಲ್ಲಿ ಶಾಲಾ ಮಕ್ಕಳಿಗೆ ತರಬೇತಿ ನೀಡಿದ್ದಾರೆ. 2007ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಶಾಲಾ ಮಕ್ಕಳಿಗೆ ತರಬೇತಿ ನೀಡಿದ್ದಾರೆ. 2011ರಲ್ಲಿ ಸರ್ವ ಶಿಕ್ಷಣ ಅಭಿಯಾನ ಕರ್ನಾಟಕ ಸರ್ಕಾರ ಸಂಸ್ಥೆಗಳ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಹೆಬ್ಬಾಳದಲ್ಲಿ 2000ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ತರಬೇತಿ ನೀಡಿದ್ದಾರೆ. 2012ರಲ್ಲಿ ಹಂಪಿ ವಿಶ್ವವಿದ್ಯಾನಿಲಯದ ವಸ್ತುಸಂಗ್ರಹಾಲಯದಲ್ಲಿ ಚಿತ್ತಾರದ ವಿವಿಧ ಬಗೆಯ ಪ್ರಕಾರಗಳನ್ನು ಪ್ರದರ್ಶನ ಮಾಡಿದ್ದಾರೆ. 2013 ರಿಂದ 18 ರವರೆಗೆ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಮಾಸ್ ಕಮ್ಯುನಿಕೇಷನ್ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಚಿತ್ತಾರ ತರಬೇತಿಯನ್ನು ಹೇಳಿದ್ದಾರೆ. 2014ರಲ್ಲಿ ಹಂಪಿ ವಿಶ್ವವಿದ್ಯಾಲಯ ಚಿತ್ರಕಲಾ ಪರಿಷÀತ್ ಬೆಂಗಳೂರು ವಿಶ್ವವಿದ್ಯಾಲಯ ಕಲಾಮಂದಿರ ವಿದ್ಯಾರ್ಥಿಗಳಿಗೆ ಇಂದಿರಾ ಗಾಂಧಿ ನ್ಯಾಷÀನಲ್ ಸೆಂಟರ್ ಫಾರ್ ಸಂಸ್ಥೆಯಲ್ಲಿ ತರಬೇತಿ £Ãಡಿದ್ದಾರೆ. 2015ರಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕು ಚಿತ್ರಕಲಾ ಶಿಕ್ಷಕರ ಸಂಘ ಇವರು ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿದ ಚಿತ್ತಾರದಲ್ಲಿ ನಿರ್ದೇಶಕರಾಗಿ ತಾಲ್ಲೂಕಿನ ಚಿತ್ರಕಲಾ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. 2016ರಲ್ಲಿ ಮೇಲುಕೋಟೆಯಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ದೃಶ್ಯ ಕಲಾವಿದರ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ಚಿತ್ತಾರ ಪ್ರದರ್ಶನ ಮಾಡಿದ್ದಾರೆ. ಜಾನಪದ ವಿಶ್ವವಿದ್ಯಾಲಯದಲ್ಲಿ ಗೊಟಗೋಡಿಯಲ್ಲಿ ಚಿತ್ರಕಲಾ ವಿಷಯದಲ್ಲಿ ಎಂ.ಎ ಪದವಿ ವಿದ್ಯಾರ್ಥಿಗಳಿಗೆಸಂಪನ್ಮೂಲ ವ್ಯಕ್ತಿಯಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಸಿಪ್ರಿಯ ಸಂಸ್ಥೆ ಬೆಂಗಳೂರು ಜೊತೆಗೂಡಿ ಹಲವಾರು ಶಿಬಿರ ಏರ್ಪಡಿಸಿದ್ದಾರೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಮತ್ತು ಪ್ರದರ್ಶನಗಳು
ಇವರು ಬಿಡಿಸಿದ ಹಸೆ ಚಿತ್ತಾರಗಳು ದೇಶದಲ್ಲಿ ಅಲ್ಲದೆ ವಿದೇಶಗಳಲ್ಲಿಯೂ ಸಹ ಪ್ರದರ್ಶನ ಆಗಿವೆ.ಹಲವು ದೇಶವಿದೇಶಗಳ ಕಲಾವಿದರಿಗೆ ಚಿತ್ತಾರ ಕಲೆಯನ್ನು ತರಬೇತಿಗಳಲ್ಲಿ ಪರಿಚಯಿಸಿದ್ದಾರೆ. ಅಪ್ಪಟ ಮಲೆನಾಡಿನ ದೀವರ ಸಂಪ್ರದಾಯಿಕ ಹಸೆಚಿತ್ತಾರ ಕಲೆಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಸಹ ಪ್ರದರ್ಶನ ಮತ್ತು ತರಬೇತಿ ನೀಡಿದ್ದಾರೆ. ಕಲ್ಕತ್ತಾ, ನವದೆಹಲಿ, ಕುಪ್ಪಂ, ಚೆನ್ನೆöÊನಲ್ಲಿ ಜರುಗಿದ ಕಲಾಮೇಳದಲ್ಲಿ ಪ್ರದರ್ಶನ ನೀಡಿದ್ದಾರೆ. 2011ರಲ್ಲಿ ನಡೆದ ಜಪಾನ್ ಹಬ್ಬದಲ್ಲಿ ಸುಮಾರು 170 ರಿಂದ 150 ವಿದ್ಯಾರ್ಥಿಗಳಿಗೆ ಹಾಗೂ 20ರಿಂದ 25 ಶಿಕ್ಷಕರಿಗೆ ನೈಸರ್ಗಿಕವಾಗಿ ಮಾಡಿದ ಕುಂಚ ಮತ್ತು ನೈಸರ್ಗಿಕವಾಗಿ ತಯಾರಿಸಿದ ಬಣ್ಣದಲ್ಲಿ ತರಬೇತಿ ನೀಡಿದ್ದಾರೆ. ಹಾಗೂ ಜಪಾನಿನ 200 ಜನ ಸಾರ್ವಜನಿಕರಿಗೆ ತರಬೇತಿ ನೀಡಲಾಗಿದೆ. 2011ರಲ್ಲಿ ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿದೆ. 2012ರಲ್ಲಿ ವೀಲರ್ಸ್ ವೀಲ್ ಆಯೋಜಿಸಿರುವ ಲೆಕ್ಚರ್ ಡೆಮಾನ್ ಸ್ಟೇಷನ್ ನಲ್ಲಿ ಇಟಲಿಯ ಪ್ರೊ ಆಲ್ಬರ್ಟ್ ಅವರಿಗೆ ತರಬೇತಿ ನೀಡಿದ್ದಾರೆ. 2012ರಲ್ಲಿ ಫಾರ್ಮ್ ಹೌಸ್ ನಲ್ಲಿ ಜಪಾನ್ ದೇಶದ ಸುಮಾರು 18 ರಿಂದ 20 ಜನರಿಗೆ ಲೆಕ್ಚರ್ ಡೇಮಾನ್ ಸ್ಟೇಷನ್ ನೀಡಿದ್ದಾರೆ. 2013ರಲ್ಲಿ ಕಲಾಪೂರ್ಣಿಮದಲ್ಲಿ ಸುಮಾರು 50 ಜನರಿಗೆ ತರಬೇತಿ ನೀಡಿದ್ದಾರೆ. 1999 ರಲ್ಲಿ ರಮಾದೇವಿ ಅವರು ರಾಜ್ಯಪಾಲರಾಗಿದ್ದಾಗ ರಾಜಭವನದ ಗೋಡೆಯಲ್ಲಿ ಹಸೆ ಚಿತ್ತಾರ ಪ್ರದರ್ಶನ ಮಾಡಲಾಗಿದೆ. ರಾಜ್ಯದ ಹಲವಾರು ಹಸೆ ಚಿತ್ತಾರ ಪ್ರಿಯರ ಮನೆಯಲ್ಲಿ, ವಾಣಿಜ್ಯ ಕೇಂದ್ರಗಳಲ್ಲಿ, ಚಿತ್ತಾರವನ್ನು ಬಿಡಿಸಿದ್ದಾರೆ. ಪ್ರಶಸ್ತಿ-ಪುರಸ್ಕಾರಗಳು2014 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಕರ್ನಾಟಕ ಲಲಿತ ಕಲಾ ಅಕಾಡೆಮಿ ಗೌರವ ಪ್ರಶಸ್ತಿ 2014ರಲ್ಲಿ ಲಭಿಸಿದೆ. ಅಶೋಕ ಫೌಂಡೇಷನ್ ಅಂತರಾಷ್ಟ್ರೀಯ ಸಂಸ್ಥೆ 2003ರಲ್ಲಿ ಗೌರವ ಪುರಸ್ಕಾರ ನೀಡಿದೆ. ಭಾರತೀಯ ರೈಲ್ವೆ ಇಲಾಖೆ ಗೌರವ ಪುರಸ್ಕಾರ ನೀಡಿದೆ. ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಇವರ ಕಲೆಯನ್ನು ಗುರುತಿಸಿ ಗೌರವ ಪುರಸ್ಕಾರ ನೀಡಿವೆ. ರಾಜ್ಯದ ಹಲವಾರು ಪತ್ರಿಕೆಗಳು ಇವರ ಹಸೆಚಿತ್ತಾರ ಸೇವೆಯನ್ನು ಕಲೆಯ ಕುರಿತು ಲೇಖನಗಳನ್ನು ಪ್ರಕಟಿಸಿವೆ.ದೀವರ ಯುವ ವೇದಿಕೆ, ಧೀರ ದೀವರ ಬಳಗ, ದೀವರ ಸಾಂಸ್ಕೃತಿಕ ಕ್ಷೇಮಾಭಿವೃದ್ದಿ ಸಂಘ ಗೌರವ ಪುರಸ್ಕಾರ ನೀಡಿದೆ. ಮಲೆನಾಡಿನ ಹಸೆ ಚಿತ್ತಾರ ಕಲಾವಿದೆಯನ್ನುಗುರುತಿಸಿದ್ದು ತಲೆತಲಾಂತರಗಳಿಂದ ಪೋಷಿಸಿಕೊಂಡು ಬಂದ ಹಸೆ ಚಿತ್ತಾರ ಪರಂಪರೆಗೆ ಸಂದ ಗೌರವವಾಗಿದ್ದು ಗುರುತಿಸಿದ ಆಯ್ಕೆ ಸಮಿತಿಗೆ ಲಕ್ಷ್ಮಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ. ಮಂಜಮ್ಮ ಜೋಗತಿಯವರ ಅಧ್ಯಕ್ಷತೆಯಲ್ಲಿ ಜಾನಪದ ಅಕಾಡೆಮಿ ಉತ್ತಮ ಸೇವೆ ಸಲ್ಲಿಸುತ್ತಿದ್ದು ಈ ಬಾರಿ ಆಯ್ಕೆಸಮಿತಿ ಉತ್ತಮ ಕಲಾವಿದರನ್ನು ಗುರುತಿಸಿ ಆರಿಸಿದೆ. ಕರ್ನಾಟಕ ದೇಶ ಚಿತ್ರಕಲೆಯಾದ ಹಸೆ ಚಿತ್ತಾರ ಕಲಾವಿದರನ್ನು ಪ್ರೋತ್ಸಾಹಿಸಿ ಗುರುತಿಸಿರುವುದು ಶ್ಲಾಘನೀಯ ಎಂದು ಇತ್ತೀಚೆಗೆ ಹಸೆ ಚಿತ್ತಾರ ಸಂಶೋಧನಾ ಕೃತಿ ಪ್ರಕಟಿಸಿದ ಕರ್ನಾಟಕ ಹಸೆಚಿತ್ತಾರ ಪರಿಷತ್ತಿನ ರವಿರಾಜ್ ಸಾಗರ್ ತಿಳಿಸಿದರು…. *ಅಂಬಿಗಾ ನ್ಯೂಸ್
Be the first to comment