ಜಿಲ್ಲಾ ಸುದ್ದಿಗಳು
ಕುಮಟಾ
ಸಮಾಜಮುಖಿ ಚಿಂತನೆಗಳ ಮೂಲಕ ಕನ್ನಡ ಭಾಷೆಯನ್ನು ಉಳಿಸಿ,ಬೆಳೆಸಲು ಕುಮಟಾ ಕನ್ನಡ ಸಂಘ ಕಾರ್ಯೊನ್ಮುಖವಾಗಲಿ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎಮ್.ಆರ್.ನಾಯಕ ಹೇಳಿದರು.ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ “ಕುಮಟಾ ಕನ್ನಡ ಸಂಘದ”À ಲಾಂಛನ ಅನಾವರಣಗೊಳಿಸಿ ಅವರು ಮಾತನಾಡಿದರು. ಯಾವುದೇ ಒಂದು ಸಂಘಟನೆಗೆ ಲಾಂಛನ ಅತ್ಯವಶ್ಯ. ಈ ದಿಶೆಯಲ್ಲಿ ಇಡಿ ಜಿಲ್ಲೆಯ ಜನರ ಭಾವನೆಗಳ ಪಾಕೃತಿಕ ಸೋಗಡನ್ನು ಹೊಂದಿರುವ ಲಾಂಛನವನ್ನು ವಿನ್ಯಾಸಗೊಳಿಸಿದ ಅಂಕೋಲಾದ ಶ್ಯಾಮಸುಂದರ ಗೌಡವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ಮಾತನಾಡಿ ಕನ್ನಡವನ್ನು ಉಳಿಸಿ,ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಉತ್ತರಕನ್ನಡದ ಜೊತೆಯಲ್ಲೇ ಕನ್ನಡ ಹೊಂದಿಕೊಂಡಿರುವುದು ನಮ್ಮ ಸೌಭಾಗ್ಯ. ಪಂಪನ ಕಾವ್ಯದ ಜೊತೆಯಲ್ಲಿ ಬನವಾಸಿಯ ವೈಭವ ನಮ್ಮ ಮುಂದಿದೆ. ಇಂತಹ ಪುಣ್ಯ ನೆಲದಲ್ಲಿ ಕನ್ನಡದ ಸುಮನಸುಗಳು ಸೇರಿ ಕುಮಟಾ ಕನ್ನಡ ಸಂಘ ಹುಟ್ಟು ಹಾಕುವ ಮೂಲಕ ಒಳ್ಳೆಯ ಕಾರ್ಯ ಮಾಡಿದ್ದಾರೆ ಎಂದರು.ಸಂಘದ ಗೌರವಾಧ್ಯಕ್ಷ ಎಮ್.ಜಿ.ಭಟ್ಟ ಮಾತನಾಡಿ ಬರೆಯಲು ಓದಲು ಸುಂದರವಾಗಿರುವ ಕನ್ನಡ ಭಾಷೆಯನ್ನು ಇನ್ನಷ್ಟು ಮೇಲ್ಪಂಕ್ತಿಗೆ ಕೊಂಡೊಯ್ಯಲು ಎಲ್ಲರೂ ಒಂದಾಗಿ ಶ್ರಮಿಸೋಣ ಎಂದರು.ಆಶಯ ನುಡಿಳನ್ನಾಡಿದ ತಿಗಣೇಶ ಮಾಗೋಡ “ಮರೆಯಲ್ಲಿರುವ ಸಾಹಿತಿಗಳ ಧ್ವನಿಯಾಗಿ ಬದಿಗಿಟ್ಟ ಲೇಖನಿಗಳು ಹೊರ ಜಗತ್ತಿಗೆ ಅನಾವರಣಗೊಳ್ಳಲಿ” ಎಂದರು.
ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಡಾ.ಪ್ರತಿಭಾ ಭಟ್ಟ ಮಾತನಾಡಿದರು.ಸಂಘದ ಪದಾಧಿಕಾರಿಗಳಾದ ಜಿ.ಎಲ್.ನಾಯ್ಕ,ನಿತೀನ ಗೌರಯ್ಯ,ರಾಘವೇಂದ್ರ ಪಟಗಾರ,ರಾಘವಿ ನಾಯಕ,ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ, ರವಿ ಗಾವಡಿ, ಗಣೇಶ ಜೋಶಿ, ಪ್ರಮೋದ ಮಡಿವಾಳ, ಮೋಹನ ನಾಯ್ಕ ಕೂಜಳ್ಳಿ,ಪತ್ರಕರ್ತ ಎಮ್.ಜಿ.ನಾಯ್ಕ, ಕೃಷ್ಣಾನಂದ ಭಟ್ಟ ಇನ್ನಿತರರು ಇದ್ದರು.ಸಂಘದ ಕಾರ್ಯದರ್ಶಿ ಶಿಕ್ಷಕ ಮುಂಜುನಾಥ ಗಾಂವಕರ್ ಬರ್ಗಿ ಸ್ವಾಗತಿಸಿ ನಿರೂಪಿಸಿದರು. ನಿವೃತ್ತ ಶಿಕ್ಷಕ ಆರ್.ಎನ್.ಹೆಗಡೆ ವಂದಿಸಿದರು.
Be the first to comment