ರಾಜ್ಯ ಸುದ್ದಿಗಳು
ಹೊನ್ನಾವರ
ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ತಮ್ಮ ಲಾಭಕ್ಕಾಗಿ ಕೋಳಿ ಹುಂಜಗಳನ್ನು ಎರಡು ಕಡೆಯಿಂದಲೂ ಕಾದಾಡಲು ಬಿಟ್ಟು ಅವುಗಳ ಮೆಲೇ ಹಣವನ್ನು ಪಂಥವನ್ನಾಗಿ ಕಟ್ಟಿಕೊಂಡು, ಹೊನ್ನಾವರ ತಾಲೂಕಿನ ಚಂದಾವರ ತಲಗೋಡು ಸಾರ್ವಜನಿಕ ಪ್ರದೇಶದಲ್ಲಿ ಜೂಜಾಟ ಆಡುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆಸಿದ ಪೋಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ಸಮಯದಲ್ಲಿ ಸುಮಾರು 800 ರೂಪಾಯಿ ಕೋಳಿ ಹುಂಜ 3 , ಬೈಕ್, ಸ್ಕೂಟಿ ನಂಬರ್ ಪ್ಲೇಟ್ ಇಲ್ಲದ ಹಳೆದ ಸ್ಪೆಂಡರ್ ಬೈಕ್, ವಶಪಡಿಸಿಕೊಂಡಿದ್ದಾರೆ. ಆರೋಪಿತರ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿ ಕುಮಟಾ ತಾಲೂಕಿನ ಹೆಗಡೆಯ ಗೊಯ್ದು ಶಂಕರ್ ಪಟಗಾರ್ ಎಂದು ತಿಳಿದು ಬಂದಿದ್ದು ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Be the first to comment