ರಾಜ್ಯ ಸುದ್ದಿ
ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ.ಕನಿಷ್ಠ ಅಂಕ ನೀಡಿ ಎಲ್ಲರನ್ನೂ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವುದು. ಮರು ಮೌಲ್ಯಮಾಪನಕ್ಕೆ ಅವಕಾಶ ಇಲ್ಲ ಎಂದು ಸರ್ಕಾರ ಈ ಸಂಬಂಧ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಿದೆ. ಹಾಗೆಯೇ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಅವರಿಗೆ ಶ್ರೇಣಿ ನೀಡಲಾಗುತ್ತದೆ. ಆದರೆ ಪರೀಕ್ಷಾ ದಿನಾಂಕ ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಪ್ರತಿ ವಿಷಯಗಳ ಪರೀಕ್ಷೆ 40 ಅಂಕಗಳಲ್ಲಿ ನಡೆಯಲಿದ್ದು, ಅವುಗಳನ್ನು 80 ಅಂಕಗಳಿಗೆ ಪರಿವರ್ತನೆ ಮಾಡಬೇಕು. ಒಟ್ಟು 625 ಅಂಕಗಳಿಗೆ ಅನುಗುಣವಾಗಿ ಫಲಿತಾಂಶ ನೀಡುವಂತೆಯೂ ಸರ್ಕಾರ ಹೇಳಿದೆ. ಈ ಪರೀಕ್ಷೆಗೆ ಸಂಬಂಧಿಸಿದಂತೆ ಛಾಯಾಪ್ರತಿ, ಮರು ಎಣಿಕೆ, ಮರು ಮೌಲ್ಯಮಾಪನ ಇರುವುದಿಲ್ಲ. ಕೊರೋನಾ ಕಾರಣದಿಂದ ಅನಾರೋಗ್ಯದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಯುವುದಾಗಿ ಸರ್ಕಾರ ತಿಳಿಸಿದೆ.
Be the first to comment