ಆಕಾಶ್ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ಶಿಬಿರ 1 ಸಾವಿರಕ್ಕೂ ಹೆಚ್ಚು ಜನರ ನೊಂದಣಿ | 10 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪಟ್ಟಣದ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್ ಆಸ್ಪತ್ರೆ ಮತ್ತು ಆಕಾಶ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಒಂದು ದಿನದ ಉಚಿತ ಮಧುಮೇಹ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಆಕಾಶ್ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ವೆಂಕಟೇಶ್ ಮಾತನಾಡಿ, ಸಾಮಾನ್ಯವಾಗಿ ೪೦ ವರ್ಷ ವಯಸ್ಸಾಗಿರುವವರಲ್ಲಿ ಹೆಚ್ಚಾಗಿ ಮಧುಮೇಹ ಕಂಡುಬರುತ್ತದೆ. 40 ವರ್ಷ ವಯಸ್ಸಿನೊಳಗಿನವರಿಗೆ ಜಿಯೋನೇಟ್ ಡಯಾಬಿಟಿಕ್ಸ್ ಅದರ ಇನ್ಸಿಡೆಂಟ್ ಕಡಿಮೆ ಇರುತ್ತದೆ. ಸರಿಯಾದ ಆರೋಗ್ಯಕರ ಆಹಾರ ಮತ್ತು ಒತ್ತಡದ ಬದುಕಿನಲ್ಲಿ ಇಂತಹ ರೋಗಗಳು ಕಂಡುಬರುತ್ತದೆ. ಮೊದಲ ಸ್ಟೇಜ್‌ನಲ್ಲಿ ಇದು ಗೊತ್ತಾಗುವುದಿಲ್ಲ. ತದನಂತರ ಒಂದಲ್ಲಾ ಒಂದು ರೀತಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಅಂತಹವರಿಗೆ ಇದೊಂದು ಸದಾವಕಾಶವಾಗಿದೆ. ದೇವನಹಳ್ಳಿ ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

CHETAN KENDULI

ಮೆಡಿಕಲ್ ಸುಪರ್‌ಡೆಂಟ್ ಡಾ.ಬ್ರಿಜೇಶ್ ಮಾತನಾಡಿ, ಆಕಾಶ್ ಆಸ್ಪತ್ರೆ ಮತ್ತು ಆಕಾಶ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಈ ಶಿಬಿರವನ್ನು ಹಮ್ಮಿಕೊಂಡಿದ್ದು, ಬೆಂಗಳೂರು ನಗರ, ಗ್ರಾಮಾಂತರ ಮತ್ತು ಸುತ್ತಮುತ್ತಲಿನ ಜನರಿಗೆ ಶಿಬಿರದ ಬಗ್ಗೆ ಮನವರಿಕೆ ಮಾಡಿಕೊಟ್ಟು, ಉಚಿತವಾಗಿ ಮಧುಮೇಹ ಸೇರಿದಂತೆ ಹಲವು ಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಕೋವಿಡ್‌ನಿಂದಾಗಿ ಡಯಾಬಿಟಿಕ್ ಕಾಯಿಲೆಗಳು ಜಾಸ್ತಿಯಾಗಿವೆ. ಈಗಾಗಲೇ ಮಧುಮೇಹದಿಂದ ಇದ್ದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಸುಮಾರು 10 ಜನರಿಗೆ ಮಾಡಲಾಗುತ್ತಿದೆ ಎಂದರು.

ಆಕಾಶ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ರವಿಶಂಕರ್ ಮಾತನಾಡಿ, ದೇವನಹಳ್ಳಿ ತಾಲೂಕಿನ ಎಲ್ಲಾ ಹಳ್ಳಿಗಳ ಜನರು ನ.14 ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಆಕಾಶ್ ಆಸ್ಪತ್ರೆಯಲ್ಲಿ ಉಚಿತವಾಗಿ ಮಧುಮೇಹಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಮೇಗಾ ಚಿಕಿತ್ಸಾ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ 600-700 ಜನರು ಇದರ ಸದುಪಯೋಗ ಪಡಿಸಿಕೊಂಡಿದ್ದಾರೆ. ಉಳಿದಂತೆ ಎಲ್ಲರೂ ಇಂತಹ ಶಿಬಿರದಲ್ಲಿ ಪಾಲ್ಗೊಂಡು ಮಧುಮೇಹ ತಪಾಸಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. 

ಶಿಬಿರದಲ್ಲಿ ಸಾಲು ಸಾಲಾಗಿ ಜನರು ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ಬಿಪಿ, ಕಣ್ಣಿನ ಪರೀಕ್ಷೆ, ಮಧುಮೇಹ ಸೇರಿದಂತೆ ಹಲವು ರೀತಿಯ ರೋಗ ಪತ್ತೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಪಡೆದುಕೊಂಡರು. ಈ ಸಂದರ್ಭದಲ್ಲಿ ಆಕಾಶ್ ಆಸ್ಪತ್ರೆಯ ಮುನಿರಾಜು, ಆಡಳಿತಾಧಿಕಾರಿ ಅಮರ್‌ಗೌಡ, ಆಕಾಶ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ, ಅಣ್ಣೇಶ್ವರ ಗ್ರಾಪಂ ಅಧ್ಯಕ್ಷ ವೇಣುಗೋಪಾಲ್, ಹಲವಾರು ಪಾಲ್ಗೋಂಡಿದ್ದರು.

Be the first to comment

Leave a Reply

Your email address will not be published.


*