ರಾಜ್ಯ ಸುದ್ದಿಗಳು
ದೇವನಹಳ್ಳಿ
ಪಟ್ಟಣದ ರಸ್ತೆ ದೂಳಿನ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿಸುತ್ತಿದ್ದಾರೆ. ಅದಕ್ಕೆ ಉತ್ತರ ಕೊಡುವ ಸಂದರ್ಭ ಶೀಘ್ರದಲ್ಲಿಯೇ ಇದೆ. ಡಿ.16ರ ನಂತರ ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರಕಾರದ ಕಾನೂನಿನಲ್ಲಿ ಏನೇನು ಅವಕಾಶವಿದೆಯೋ ಅವನ್ನೆಲ್ಲ ಬಳಸಿಕೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಎಸ್‌ಎಸ್‌ಟಿಪಿಯ ಅನುದಾನದಲ್ಲಿ ದೇವನಹಳ್ಳಿಗೆ 9ಕೋಟಿ, ವಿಜಯಪುರಕ್ಕೆ 8ಕೋಟಿ ರೂ. ಅನುಮೋದನೆ ಸಿಕ್ಕಿದೆ. ಚುನಾವಣೆ ನೀತಿ ಸಂಹಿತೆಯಿಂದ ಟೆಂಡರ್ ಹೋಗುವುದು ತಡವಾಗಿದೆ. ಡಿ.16 ಕಳೆದ ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತದೆ. ಕೆಲವರು ಜನರಿಗೆ ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸರಕಾರದಿಂದ ಯಾವ ರೀತಿ ನಾನು ಅನುದಾನವನ್ನು ತಂದು ಅಭಿವೃದ್ಧಿ ಮಾಡುವ ಬಗ್ಗೆ ಗಮನಹರಿಸುತ್ತಿರುವುದು ವಿರೋಧಿಸುವವರಿಗೆ ಮಾಹಿತಿ ಇಲ್ಲ. ಏನೇನು ತಪ್ಪು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿದ್ದಾರೆ. ಆ ರೀತಿ ಮಾಡುವುದರಿಂದ ಯಾರಿಗೂ ಲಾಭವಿಲ್ಲ. ನಾನು ಅಭಿವೃದ್ಧಿಯ ಪಣತೊಟ್ಟಿದ್ದೇನೆ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೂ ತಂದು ಮನವಿ ಮಾಡಲಾಗಿದೆ. ಅವರೂ ಸಹ ಜ.೧೪ರ ಹಿಂದು-ಮುಂದು ಅದಕ್ಕೆ ಮಂಜೂರು ಮಾಡಿಕೊಡುತ್ತೇವೆಂದು ಹೇಳಿದ್ದಾರೆ. ಇದರ ಜೊತೆಯಲ್ಲಿ ಈಗಾಗಲೇ ಬಿಎಂಆರ್‌ಡಿಯಲ್ಲಿಯೂ ಸಹ 25ಕೋಟಿ ರೂ. ದೇವನಹಳ್ಳಿಗೆ ಮತ್ತು 20ಕೋಟಿ ರೂ. ವಿಜಯಪುರಕ್ಕೆ ಅನುದಾನ ಮಂಜೂರಾಗಿದೆ. ಈ ಮಾಹಿತಿಯನ್ನು ಪಡೆಯುವುದಕ್ಕೆ ಅವರಿಗೆ ಶಕ್ತಿ ಇಲ್ಲ. ಎಲ್ಲಿ ಏನು ಮಾಡಬೇಕು ಎಂಬುವುದರ ಅರಿವು ಇಲ್ಲ. ಆದರೆ ಸರಕಾರಕ್ಕೆ ಕೇಳಿದ ತಕ್ಷಣವೇ ಹಣ ಬಿಡುಗಡೆ ಮಾಡುವ ನಿಯಮ ಇಲ್ಲ. ಅದೆಲ್ಲವೂ ಕ್ರಮಬದ್ಧವಾಗಿ ಸರಕಾರದ ಹಂತದಲ್ಲಿ ನಡೆಯಬೇಕಾಗುತ್ತದೆ. ಅನುದಾನ ಬಿಡುಗಡೆಯಾಗುವುದಕ್ಕೆ ಚುನಾವಣೆ ನೀತಿ ಸಂಹಿತೆ ಮತ್ತು ಕೋವಿಡ್-19 ಅಡ್ಡವಿತ್ತು. ಆದರೂ ಸಹ ಸರಕಾರಕ್ಕೆ ನಾನು ಈಗಾಗಲೇ 17ಕೋಟಿ ರೂ.ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿದ ನಂತರ ದೇವನಹಳ್ಳಿ ಮತ್ತು ವಿಜಯಪುರ ರಸ್ತೆಗಳ ಕಾಮಗಾರಿ ಪ್ರಾರಂಭವಾಗುವುದರಲ್ಲಿ ಎರಡು ಮಾತಿಲ್ಲ. ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬರುವ ಪೋಸ್ಟ್‌ಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.
Be the first to comment