ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ತಹಶೀಲ್ದಾರ್ ಮೂಲಕ ಮನವಿ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ವಿಜಯ ಮೇ ಕಲಿಕೆ ಹಾಗೂ ಅವರ ಸಿಬ್ಬಂದಿಗಳ ಮೇಲೆ ದಿನಾಂಕ 19-12-2021ರಂದು ಪೂರ್ವನಿಯೋಜಿತವಾಗಿ ಹಲ್ಲೆ ಮಾಡಲಾಗಿದ್ದು, ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಹಾಡುಹಗಲೇ ಗುಂಡಾಗಳು ಬಹಿರಂಗವಾಗಿ ರಸ್ತೆಯಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದನ್ನು ಖಂಡಿಸುತ್ತಾ, ಹಲ್ಲೆ ಮಾಡಿದವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಗಡಿಪಾರು ಮಾಡಬೇಕು ಮತ್ತು ಹಲ್ಲೆಗೆ ಒಳಗಾದ ಆಯುಕ್ತರಿಗೆ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಾ ಆರೋಪಿಗಳನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ಸ್ಥಳೀಯ ಸಂಸ್ಥೆಯ ನೌಕರರು ಅನಿರ್ಧಿಷ್ಟವಾಗಿ ಧರಣಿಯನ್ನು ಕೈಗೊಳ್ಳಲಾಗುವುದೆಂದು ತಹಸೀಲ್ದಾರರ ಮೂಲಕ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು. 

CHETAN KENDULI

ಇದೇ ಸಂದರ್ಭದಲ್ಲಿ ಶಿವಣ್ಣ ಅಧ್ಯಕ್ಷರು,ರಮೇಶ ಕಾರ್ಯದರ್ಶಿ, ಮೀನಾಕ್ಷಮ್ಮ , ರಾಘವೇಂದ್ರ ಮುತಾಲಿಕ್, ರಾಮಸ್ವಾಮಿ, ಕುಮಾರ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*