ರಾಜ್ಯ ಸುದ್ದಿಗಳು
ಮಸ್ಕಿ
ತಾಲೂಕಿನ ಮೆದಿಕಿನಾಳ ಗ್ರಾಮದ ಎಸ್ಸಿ ಕಾಲೋನಿಯ ಅಂಗನವಾಡಿ ಕೇಂದ್ರ ನಾಲ್ಕರಲ್ಲಿನ ಬಾಲ ಮಕ್ಕಳನ್ನು ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ, ಸ್ಥಳೀಯಗ್ರಾಮಪಂಚಾಯತ್ ಸದಸ್ಯರುಗಳ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಬಾಲ ಮಕ್ಕಳು ಮನೆಯಲ್ಲೇ ಉಳಿದಿದ್ದರು. ಸರಕಾರದ ಆದೇಶದಂತೆ ಇಂದು ದಿನಾಂಕ:08-11-2021 ರಂದು ರಾಜ್ಯಾದ್ಯಂತ ಎಲ್ಲಾ ಅಂಗನವಾಡಿ ಕೇಂದ್ರಗಳು ಪ್ರಾರಂಭಿಸಲಾಯಿತು. ಹಾಗೆಯೇ ಮೆದಿಕಿನಾಳ ಗ್ರಾಮದ ಅಂಗನವಾಡಿ ಕೇಂದ್ರ ನಾಲ್ಕರಲ್ಲಿ ಕೇಂದ್ರದ ಎಲ್ಲಾ ಮಕ್ಕಳಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಿ ಆರತಿ ಬೆಳಗಿ ,ತಿಲಕವಿಟ್ಟು, ಗುಲಾಬಿ ಹೂ ನೀಡುವ ಮೂಲಕ ವಿಶೇಷವಾಗಿ ಅಂಗನವಾಡಿ ಶಾಲೆಗೆ ಬರ ಮಾಡಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಶ್ರೀಮತಿ ಡಿ.ಆರ್ ಲಲಿತಾ ಅಂಗನವಾಡಿ ಮೇಲ್ವಿಚಾರಕಿ, ಶ್ರೀಮತಿ ಶಕುಂತಲಾ ಗಂ/ ಗೋಪಾಲ ಗ್ರಾಮ ಪಂಚಾಯತ್ ಸದಸ್ಯರು, ಶ್ರೀಮತಿ ದೇವಮ್ಮ ಗಂ/ ಕುಪ್ಪಣ್ಣ ಗ್ರಾಮ ಪಂಚಾಯತ್ ಸದಸ್ಯರು, ಅಮೀರ್ ಸಾಬ್ ಗ್ರಾಮ ಪಂಚಾಯತ್ ಸದಸ್ಯರು, ಶ್ರೀಮತಿ ಮರಿಯಮ್ಮ ಅಂಗನವಾಡಿ ಕಾರ್ಯಕರ್ತೆ, ಶ್ರೀಮತಿ ಅಂಜಮ್ಮ ಅಂಗನವಾಡಿ ಸಹಾಯಕಿ,ಅಂಗನವಾಡಿ ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment