ಲೈನ್ ಮೆಕ್ಯಾನಿಕ್ ಸಿಬ್ಬಂದಿಯ ವರ್ಗಾವಣೆ ತಡೆಗೆ ಆಗ್ರಹಿಸಿ ಕುಂಟೋಜಿ ಗ್ರಾಮಸ್ಥರಿಂದ ಹೆಸ್ಕಾಂ ಅಧಿಕಾರಿಗಳಿಗೆ ಮನವಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಮುದ್ದೇಬಿಹಾಳ ಹೆಸ್ಕಾಂನಲ್ಲಿ ಪವರಮೆನ್ ಆಗಿ ಉತ್ತಮ ಸೇವೆ ಸಲ್ಲಿಸಿ ಲೈನ್ ಮೆಕ್ಯಾನಿಕ್ ಹುದ್ದೆಗೆ ಬಡ್ತಿಯಾಗಿ ಬಸವನ ಬಾಗೇವಾಡಿಗೆ ವರ್ಗಾವಣೆಯಾಗಿರುವ ಎಸ್.ಎನ್.ಬಳೂತಿಯವರನ್ನು ತಡೆ ಹಿಡಿದು ಅವರನ್ನು ಮುದ್ದೇಬಿಹಾಳ ಹೆಸ್ಕಾಂನಲ್ಲಿಯೆ ಲೈನ್ ಮೆಕ್ಯಾನಿಕ್ ಗ್ರೇಡ-2 ಹುದ್ದೆಯಲ್ಲಿ ಸೇವೆ ಮುಂದುವರೆಸುವಂತೆ ಆಗ್ರಹಿಸಿ ಶನಿವಾರ ಕುಂಟೋಜಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಹಾಯಕ ಕಾರ್ಯನಿರ್ವಾಹಕ ಅಬಿಯಂತರರಿಗೆ ಮನವಿ ಸಲ್ಲಿಸಿದರು.
ಎಸ್.ಎನ್.ಬಳೂತಿಯವರು ರೈತರು ಹಾಗೂ ಸಾರ್ವಜನಿಕರೋಂದಿಗೆ ಉತ್ತಮ ಬಾಂಧವ್ಯ ಹೋಂದಿರುವದರ ಜೋತೆಗೆ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತಿದ್ದ ಅವರನ್ನು ಬಡ್ತಿ ನೀಡಿರುವದು ಉತ್ತಮ. ಆದರೆ ಅವರನ್ನು ಬಸವನ ಬಾಗೇವಾಡಿಗೆ ವರ್ಗಾವಣೆ ಮಾಡಿರುವದು ಸರಿಯಲ್ಲ ಅವರನ್ನು ಮುದ್ದೇಬಿಹಾಳ ಹೆಸ್ಕಾಂ ಕಾರ್ಯಾಲಯದಲ್ಲಿಯೆ ಬಡ್ತಿ ಹೋಂದಿದ ಲೈನ್ ಮೆಕ್ಯಾನಿಕ್ ಗ್ರೆಡ್-2 ಹುದ್ದೆಯಲ್ಲಿ ಮುಂದುವರೆಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಮಯದಲ್ಲಿ ಯಲ್ಲಪ್ಪ ಯರಝರಿ, ಬುಡ್ಡೆಸಾ ಕುಂಟೋಜಿ, ಅಮರಪ್ಪ ಗಂಗನಗೌಡರ, ನಾಗಪ್ಪ ಹುಲಗಣ್ಣಿ, ಪರಸಪ್ಪ ಪಿರಂಗಿ, ಎಂ.ಪಿ.ಮಡಿವಾಳರ, ಅಶೋಕ ತಾಳಿಕೋಟಿ, ಯಮನಪ್ಪ ಹರಿಂದ್ರಾಳ, ಜಗದೀಶ ಪೂಜಾರಿ, ಸಿದ್ದಪ್ಪ ಹುಲಗಣ್ಣಿ, ಚನಬಸಪ್ಪ ಪಣೆದಕಟ್ಟಿ, ಬಸವರಾಜ ಸುದಾಕರ, ರಾಮಚಂದ್ರಪ್ಪ ನರಸಲಗಿ, ಗಂಗಾದರ ಹುಲಗಣ್ಣಿ, ಮಲ್ಲಪ್ಪ ಸಾತಿಹಾಳ, ಶೇಖಪ್ಪ ಪತ್ತಾರ, ಅಪ್ಪಣ್ಣ ರಾಮೋಡಗಿ, ಕೆ.ಎನ್.ಅಗಸರ, ಹುಸೇನಸಾ ಬಾಗೇವಾಡಿ, ಮೆಹಬೂಬ ನಾಲತವಾಡ, ಚನಬಸಪ್ಪ ಕೋಪ್ಪದ, ಹಣಮಂತ ಕವಡಿಮಟ್ಟಿ, ಎನ್.ಸಿ.ಮಾಮನಿ, ಎಸ್.ಎಂ.ಕಾಟಿ, ಎಂ.ಎಸ್.ಬಿರಾದಾರ, ಬಿ.ಎಸ್.ಬಿರಾದಾರ ಇದ್ದರು.

Be the first to comment

Leave a Reply

Your email address will not be published.


*