ಜಿಲ್ಲಾ ಸುದ್ದಿಗಳು
ರಾಯಚೂರು:
ನಗರದ ವಿವಿಧ ಬಡಾವಣೆಯಲ್ಲಿ ತಡ ರಾತ್ರಿ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತ ಗೊಂಡಿದೆ. ಬಸವನ ಭಾವಿ ರಸ್ತೆಯ ಮಕ್ತೆಲ್ ಪೇಟೆಯಲ್ಲಿನ ಹಲವು ಅಂಗಡಿ ಮುಂಗಟ್ಟುಗಳಿಗೆ ಮತ್ತು ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ನಿದ್ರೆ ಮಾಡಲೂ ಹರಸಾಹಸಪಟ್ಟರೆಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಳ ಚರಂಡಿ ವ್ಯವಸ್ಥೆ ಹದಗೆಟ್ಟಿರುವುದರಿಂದಲೇ ಮಳೆ ನೀರು ಮನೆಗೆ ನುಗ್ಗಿರುವುದಕ್ಕೆ ಅನುಮಾನವೇ ಇಲ್ಲ ಎಂದು ಮೊಲ್ನೋಟಕ್ಕೆ ಕಂಡು ಬರುತ್ತದೆ. ಹಾಗೆಯೇ ಇದೇನು ಮೊದಲಲ್ಲಾ ಸುಮಾರು ಸಾರಿ ಮನೆಗೆ ಹಾಗೂ ಅಂಗಡಿ ಗಳಿಗೆ ನೀರು ನುಗ್ಗಿದ ವಿಚಾರ ಮುನ್ಸಿಪಾಲಿಟಿ ಯವರ ಗಮನಕ್ಕೂ ಬಂದರು ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿಯೂ ಸಾರ್ವಜನಿಕರ ಕಷ್ಟಕ್ಕೆ, ನೋವಿಗೆ ಸ್ಪಂದಿಸದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ. ಈಗಲಾದರು ಅರಿತು ಇವರ ಕಷ್ಟಕ್ಕೆ ಸ್ಪಂದಿಸುವರೋ ಎಂದು ಕಾದು ನೋಡಬೇಕಿದೆ.
ಜೋರಾದ ಮಳೆ ಬಂದಾಗಲೆಲ್ಲಾ ನಮ್ಮ ನಗರದ ಕೆಲವು ಮನೆಗಳಿಗೆ ಮತ್ತು ಅಂಗಡಿ ಮುಗಟ್ಟುಗಲಿಗೆ ಚರಂಡಿ ನೀರು ಮನೆಗೆ ನುಗ್ಗುತ್ತವೆ. ಈ ವಿಚಾರವನ್ನು ಮುನ್ಸಿಪಾಲಿಟಿ ಯವರಿಗೆ ತಿಳಿಸಿದರೆ ಕಂಡು ಕಾಣದ, ಕೇಳಿಯೂ ಕೇಳದವರಂತೆ ನಿರ್ಲಕ್ಷದೋರಣೆ ಮುಂದುವರೆಸುತ್ತಾ ಬಂದಿದ್ದಾರೆ. ನಮ್ಮ ಕಷ್ಟವನ್ನು ಅರಿತು ಸಮಸ್ಯೆಗೆ ಸ್ಪಂದಿಸುವಂತೆ ಜಿಲ್ಲಾಡಳಿತಕ್ಕೆ ವಿನಂತಿಸಿಕೊಳ್ಳುತ್ತೇನೆ.
-ನೊಂದ ಯವಕ ರಾಜೇಶ್, ಬಸವನ ಭಾವಿ ರಸ್ತೆ ರಾಯಚೂರು
Be the first to comment