ಸರಕು ಸಾಗಾಣಿಕೆ ಮೊದಲ ಸ್ಥಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ…!!!

 ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ:

CHETAN KENDULI

ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತಿ ಹೆಚ್ಚು ಪೆರಿಷೆಬಲ್ ಪದಾರ್ಥಗಳ ಸರಕು ಸಾಗಣಿ ಮಾಡಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೃಷಿ ಮತ್ತು ಸಂಸ್ಕರಿಸಿದ ಉತ್ಪನ್ನಗಳ ರಫ್ತು ಅಭಿವೃದ್ಧಿ ಮಂಡಳಿ (ಎಪಿಇಡಿಎ) ಅವರ ಮಾಹಿತಿ ಪ್ರಕಾರ 2020-21ರ ಹಣಕಾಸು ವರ್ಷದಲ್ಲಿ 41,130 ಮೆಟ್ರಿಕ್ ಟನ್‌ನಷ್ಟು ಕಡಿಮೆ ಬಾಳಿಕೆ ಅವಧಿಯ ಹಣ್ಣು, ತರಕಾರಿಯಂಥ (ಪೆರಿಷಬಲ್) ಉತ್ಪನ್ನಗಳನ್ನು ರಫ್ತು ಮಾಡಲಾಗಿದ್ದು, ಇದು ದೇಶದ ಪೆರಿಷಬಲ್ ಉತ್ಪನ್ನಗಳ ಪೈಕಿ ಶೇ.31ರಷ್ಟು ಕೆಂಪೇಗೌಡ ವಿಮಾನ ನಿಲ್ದಾಣದಿಂದಲೇ ಹೋಗಿದೆ.

ಕೋಳಿ, ಹೂಗಳ ರಫ್ತಿನಲ್ಲೂ ಕೆಂಪೇಗೌಡ ವಿಮಾನ ನಿಲ್ದಾಣವೇ ಮುಂಚೂಣಿಯಲ್ಲಿದ್ದು, 28,182 ಮೆಟ್ರಿಕ್‌ಟನ್‌ನಷ್ಟು ಕೋಳಿ ಹಾಗೂ 1,296 ಮೆಟ್ರಿಕ್‌ಟನ್‌ ಅಷ್ಟು ಹೂವುಗಳನ್ನು ರಫ್ತು ಮಾಡಲಾಗಿದೆ.

24 ವಿಮಾನಯಾನ ಸಂಸ್ಥೆಗಳು 46 ವಿದೇಶಗಳಲ್ಲಿ ಪೆರಿಷಬಲ್ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಪೆರಿಷಬಲ್ ಉತ್ಪನ್ನಗಳನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಕೆಡದಂತೆ ಸಂಸ್ಕರಿಸಿ ವೇಗವಾಗಿ ರಫ್ತು ಮಾಡಲಾಗುತ್ತಿದೆ. ಇದರಿಂದ ರಫ್ತು ಬೇಡಿಕೆಯೂ ಸಹ ದಿನೇದಿನೆ ಹೆಚ್ಚುತ್ತಲೇ ಇದೆ ಎಂದು ಬಿಐಎಎಲ್ ಸ್ಟಾರ್ಟಜಿ ಆಂಡ್ ಡೆವಲಪ್‌ಮೆಂಟ್ ಮುಖ್ಯಾಧಿಕಾರಿ ಸಾತ್ಯಕಿ ರಘುನಾಥ್ ಹೇಳಿದ್ದಾರೆ.

ಪ್ರಧಾನಿ ಅವರ ಆಶಯದಂತೆ ರೈತರ ಉತ್ಪನ್ನಗಳಿಗೆ ಆದಾಯ ಕೊಡಿಸುವ ನಿಟ್ಟಿನಲ್ಲಿ ಉತ್ಪನ್ನಗಳ ರಫ್ತು ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ವಿಮಾನ ನಿಲ್ದಾಣ, ರಫ್ತು ಹಾಗೂ ಪಾಲುದಾರರ ಸಹಯೋಗದಲ್ಲಿ ಕೋಲ್ಡ್ ಸ್ಟೋರೇಜ್‌ನ ಇನ್ನಷ್ಟು ಮೇಲ್ದರ್ಜೆಗೇರಿಸಲು ಸಹ ಯೊಜಿಸಿದ್ದೇವೆ ಎಂದು ಎಪಿಇಡಿಎ ಅಧ್ಯಕ್ಷ ಡಾ.ಎಂ. ಅಂಗಮುತ್ತು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*