ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಮತ್ತು ಯುನಿಸೆಫ್ ವತಿಯಿಂದ ವಿಧ್ಯಾರ್ಥಿಗಳಿಗೆ ಕೈತೊಳೆಯುವ ಸ್ವಚ್ಛತಾ ಆಂದೋಲನ ಜಾಥಾ ಯಶಸ್ವಿ…!

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

ಜಿಲ್ಲಾ ಸುದ್ದಿಗಳು 

ದೇವದುರ್ಗ(ರಾಯಚೂರು):

CHETAN KENDULI

ಯುನಿಸೆಫ್ ಗ್ಲೋಬಲ್ ಹ್ಯಾಂಡ್ ವಾಷಿಂಗ್ ಸ್ಯಾನಿಟೈಸೇಶನ್ ಜಾಥಾ ಕಾರ್ಯಕ್ರಮ ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಮತ್ತು ಯುನಿಸೆಫ್ ಸಹಯೋಗದಲ್ಲಿ ದೇವದುರ್ಗ ತಾಲೂಕಿನ 08 ಪಂಚಾಯತಿಗಳಾದ ಮಸರಕಲ್ ,ರಾಮದುರ್ಗ, ಮುಸ್ಟುರು, ಹಿರೇಬೂದುರು, ಮಲದಕಲ್, ಗೊಬುರು, ನಾಗಡದಿನ್ನಿ, ಜಾಗಿರ್ ಜಡಲಾದಿನ್ನಿ ಪಂಚಾಯತಿಗಳಲ್ಲಿ ಮಾಡಲ್ ಹ್ಯಾಂಡ್ ವಾಷಿಂಗ್ ಸ್ಟೇಶನ್ ನಿರ್ಮಾಣ ಮಾಡುತಿದ್ದು. ಈ ಕಾರ್ಯಕ್ರಮದ ಬಾಗವಾಗಿ 23 ಹಳ್ಳಿಗಳಲ್ಲಿ ಜಾಗತಿಕ ಕೈತೊಳೆಯುವ ಸ್ವಚ್ಛತಾ ಆಂದೋಲನದ ಜಾತಾ ಕಾರ್ಯಕ್ರಮ ರಾಮದುರ್ಗ ಪಂಚಾಯತಿ ಅಧಿಕಾರಿಗಳು , ಜನಪ್ರತಿನಿಧಿಗಳ ಮತ್ತು ಶಾಲಾ ಮಕ್ಕಳ ಶಿಕ್ಷಕರ ಚೈಲ್ಡ್ ಫಂಡ್ ಸಿಬ್ಬಂದಿಯೊಂದಿಗೆ ಸಮುದಾಯದ ಜನರಿಗೆ ಮತ್ತು ಮಕ್ಕಳಿಗೆ ಕೈ ತೊಳೆಯುವ ವಿಧಾನ ಮಹತ್ವದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಇಂದಿನ ಜಾಗತೀಕ ಕಲುಷಿತ ವಾತಾವರಣದಲ್ಲಿ ನಮ್ಮ ಆರೋಗ್ಯ ಮತ್ತು ಸಮುದಾಯದ ಆರೋಗ್ಯ ಸ್ವಚ್ಛವಾಗಿ ಶುಭ್ರವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ನಮ್ಮ ಕೈ ಸ್ವಚ್ಛವಾಗಿ ತೊಳೆಯುವುದರಿಂದ ಶೇಕಡಾ 80% ರಷ್ಟು ಸಾಂಕ್ರಾಮಿಕ ರೋಗಗಳಿಂದ ಸುರಕ್ಷಿತವಾಗಿರಲು ಸಹಾಯವಾಗುತ್ತದೆ ಹಾಗಾಗಿ ಎಲ್ಲರೂ ಗ್ರಾಮದ ತಮ್ಮ ಮನೆ ಮನೆಗಳಲ್ಲಿ ಸ್ವಯಂ ಪ್ರೇರಿತವಾಗಿ ಕೈತೊಳೆಯುವಾ ತೊಟ್ಟಿ ನಿರ್ಮಾಣ ಮಾಡಿಕೊಂಡು ನೀವು ನಿಮ್ಮ ಕುಟುಂಬ ಆರೋಗ್ಯವಾಗಿರಲು ಸಹಕರಿಸಿ ಸಮುದಾಯದ ಆರೋಗ್ಯ ಸ್ವಚ್ಛವಾಗಿ ಇರಲು ಸಹಕರಿಸಿ ಸ್ಥಳೀಯವಾಗಿ ಸಂಬಂಧಪಟ್ಟ ಪಂಚಾಯತಿ ಅಧಿಕಾರಿಗಳು ಜನಪ್ರತಿನಿಧಿಗಳ ಶಾಲಾ ಶಿಕ್ಷಕರು ಸ್ವಚತೆ ಬಗ್ಗೆ ಜನರಲ್ಲಿ ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕೆಂದು ನನ್ನ ಮನವಿ. ಎಂದು ಚೈಲ್ಡ್ ಫಂಡ್ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಅನಿಲ್ ಕುಮಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಚೈಲ್ಡ್ ಫಂಡ್ ಸಂಸ್ಥೆಯ ಪ್ರೋಗ್ರಾಂ ಆಫೀಸರ್ ಅನಿಲ್ ಕುಮಾರ್,ಸಿಬ್ಬಂದಿ ಖಾಜಾ ಹುಸೇನ್ ,ಆಂಜನೇಯ ಮಲದಕಲ, ಶಾಲೆಯ ಮುಖ್ಯ ಶಿಕ್ಷಕ ಶಿವಶರಣ, ಶಿಕ್ಷಕರಾದ ರಾಮಣ್ಣ ತಿಪ್ಪೇಸ್ವಾಮಿ, ಪಂಚಾಯತಿ ಅಧಿಕಾರಿಗಳು, ಪ್ರತಮೀಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*