ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಶಸ್ತಿಗೆ ವಿಜಯಪುರ ನಗರದ ಅನುಗ್ರಹ ಕಣಿನ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಆಯ್ಕೆ..

ವರದಿ ಕಾಶಿನಾಥ ಬಿರಾದಾರ ನಾಲತವಾಡ

ಜಿಲ್ಲಾ ಸುದ್ದಿಗಳು 

ನಾಲತವಾಡ

..,.. ವಿಜಯಪುರ ಕಣ್ಣಿನ ಆಸ್ಪತ್ರೆಗೆ ಪ್ರಶಸ್ತಿ.ವೈದ್ಯ ದಂಪತಿ ಸಾಧನೆ ಗುರಿತಿಸಿದ ಸರ್ಕಾರ ಅಮೃತ ಮಹೋತ್ಸವ ಹಿನ್ನೆಲೆ…ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಶಸ್ತಿಗೆ ವಿಜಯಪುರ ನಗರದ ಅನುಗ್ರಹ ಕಣಿನ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಶಸ್ತಿಗೆ ಭಾಜನ.

CHETAN KENDULI

ಡಾ. ಪ್ರಭುಗೌಡ ಬಿ.ಎಲ್ (ಚಬನೂರ)ಹಾಗೂ ಡಾ.ಮಾಲಿನಿ ಪ್ರಭುಗೌಡ ವೈದ್ಯ ದಂಪತಿ ನೃತ್ಯದಲ್ಲಿ 2001 ರಲ್ಲಿ ಸ್ಥಾಪನೆಯಾದ ಅನುಗ್ರಹ ಕಣಿನ ಆಸ್ಪತ್ರೆ ಉತ್ತರ ಕರ್ನಾಟಕ ದಲ್ಲೇ ಹೆಸರುವಾಸಿಯಾಗಿದೆ ಪ್ರಸ್ತುತ ಇ ಆಸ್ಪತ್ರೆಯಲ್ಲಿ 20 ಜನ ನೆತ್ರ ತಜ್ಞರು50 ಜನ ಅರೇ ವೈದ್ಯಕೀಯ ಸಿಬ್ಬಂದಿ 100. ಜನ ವೈದಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ ಇವರೆಲ್ಲರ ಪರಿಶ್ರಮದಿಂದ 21 ವರ್ಷಗಳಲ್ಲಿ 90 ಸಾವಿರ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.ಬಡವರು ಹಾಗೂ ನಿರಗತಿಕರ ಚಿಕಿತ್ಸಗಾಗಿ ಅನುಗ್ರಹ ವಿಜನ್ ಫೌಂಡೇಷನ್ ಟ್ರಸ್ಟ್ ಎಂಬ ಧರ್ಮಾರ್ಥ ಸೇವಾ ಸಂಸ್ಥೆಯನ್ನು ಪ್ರಾರಂಬಿಸಿ ಅದರಡಿಯಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಶಿಬಿರಗಳನ್ನು ಆಯೋಜಿಸಲಾಗಿತ್ತಿದೆ.ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 25 ಸಾವಿರ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ 2 ಲಕ್ಷ ಹೊರ ರೋಗಿಗಳಿಗೆ ಉಚಿತವಾಗಿ ಕಣ್ಣಿನ ಚಿಕಿತ್ಸೆ ಮಾಡಲಾಗಿದೆ..

ಸಂಸ್ಥಾಪಕರಾದ ಡಾ.ಪ್ರಭುಗೌಡ ಬಿ.ಎಲ್ (ಚಬನೂರ ) ಅವರು ಕಣ್ಣಿನ ಚಿಕಿತ್ಸೆಯಲ್ಲಿ ಉನ್ನತ ಪರಿಣತಿಯನ್ನು ಪಡೆಯುವುದಕ್ಕಾಗಿ ಪ್ರಪಂಚದ ಅತಿ ಉನ್ನತ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾದ ಮಧುರೈನ ಅರವಿಂದ ಕಣ್ಣಿನ ಆಸ್ಪತ್ರೆಯಲ್ಲಿ ಎರಡು ವರ್ಷ ಸೇವೆ ಮಾಡಿದ್ದಾರೆ ಅದರ ಸಂಸ್ಥಾಪಕರಾದ ಡಾ.ಗೂವೀಂದಪ್ಪ ವೇಂಕಟಸ್ವಾಮಿ ಅವರ ಉಚಿತ ಸೇವಾ ಕಾರ್ಯದಿಂದ ಪ್ರಭಾವಿತರಾಗಿ ಸಮಾಜದ ಕಟ್ಟಕಡೆಯ ಅಂಧ ವ್ಯಕ್ತಿಗೂ ದೃಷ್ಟಿ ಭಾಗ್ಯ ಪಡಿಯಬೇಕೆನ್ನುವ ಸದುದ್ದೇಶದೋಂದಿಗೆ ನಗರದ ವೈದ್ಯಕೀಯ ಸೇವೆಯಲ್ಲಿ ತೂಡಗಿದ್ದಾರೆ.ಅವರು ಸೇವೆಗೆ ಬೆನ್ನುಲುಬಾಗಿ ನಿಂತ ನಾಲತವಾಡ ಪಟ್ಟಣದ ಡೆರೇದ ಮನೆತನದ ಮಗಳಾದ ಹಾಗೂ ಡಾ ಪ್ರಭುಗೌಡ ಅವರ ಧರ್ಮಪತ್ನಿ ಆದ ಡಾ.ಮಾಲಿನಿ ಪ್ರಭುಗೌಡ. ಪಾಟೀಲ ಅವರು ಸಹ ನೇತ್ರ ತಜ್ಞರಾಗಿದ್ದು ಆಸ್ಪತ್ರೆ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಹಾಗೂ ಕಲಬುರಗಿಯಲ್ಲಿ ಸೇವೆಗೈಯುತ್ತಿದೆ….

ವಿಶೇಷ ಸಾಧನಗಳು……. 500ಕ್ಕೂ ಅಧಿಕ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಆಯೋಜನೆ. ಬಡವರಿಗೆ ಅನುಗ್ರಹ ಧರ್ಮಾರ್ಥ (ಉಚಿತ) ಕಣ್ಣಿನ ಆಸ್ಪತ್ರೆಗಳ ಸ್ಥಾಪನೆ. ಉತ್ತರ ಕರ್ನಾಟಕದ ವಿಜಯಪುರ ಕಲಬುರಗಿ ಯಾದಗಿರಿ ಬಾಗಲಕೋಟ ರಾಯಚೂರು ಬೆಳಗಾವಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರಗಳ ಆಯೋಜನೆ ಕೋವಿಡ್ ಸಂದರ್ಭದಲ್ಲಿ ಇ_ ಕಣ್ಣು ಆ್ಯಪ್ ಸಿದ್ಧಪಡಿಸಿ ಆನ್‌ಲೈನ್ ಟಿಲಿ ಕನ್ಸಲ್ಟೇಷನ್ ಮೂಲಕ ದೇಶಾದ್ಯಂತ ಕಣ್ಣಿನ ಸಮಸ್ಯೆ ಯಿಂದ ಬಳಲುತ್ತಿರುವ ರೋಗಿಗಳಿಗೆ ಸ್ಪಂದನೆ .ಗ್ರಾಮೀಣ ಪ್ರದೇಶದಲ್ಲಿ 12 ಪ್ರಾಥಮಿಕ ನೇತ್ರ ತಪಾಸಣೆ ಕೇಂದ್ರಗಳ ಮೂಲಕ 20 ಸಾವಿರಕ್ಕೂ ಅಧಿಕ ರೋಗಿಗಳಿಗೆ ಕಣ್ಣಿನ ಚಿಕಿತ್ಸೆ ಅನುಗ್ರಹ ಸಂಚಾರಿ ನೇತ್ರ ಘಟಕದ ಮ‌ೂಲಕ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸೆ ವಿಜಯಪುರ ಹಾಗೂ ಕಲಬುರಗಿ ಮಹಾನಗರದಲ್ಲಿ ಅನುಗ್ರಹ ನೇತ್ರ ಭಂಡಾರದ ಸ್ಥಾಪನೆ ಹಾಗೂ ಕಣ್ಣಿನ ಕಸಿಯ ಉಚಿತ ಶಸ್ತ್ರಚಿಕಿತ್ಸೆ..

ಅಮೃತ ಮಹೋತ್ಸವ ಪ್ರಶಸ್ತಿ ಪ್ರೇರಣಾ ಶಕ್ತಿ ಆಗಿದೆ..ಇನ್ನಷ್ಟು ಸೇವೆ ಸಲ್ಲಿಸಲು ಸಹಾಯವಾಗಿದೆ. ಗ್ರಾಮೀಣ ಭಾಗದ ಜನರಿಗೆ ಇನ್ನಷ್ಟು ಹೆಚ್ಚಿನ ಸೇವೆ ಸಲ್ಲಿಸುವ ಕೆಲಸ ಮಾಡಲಾಗುವುದು ಎಂದು ವಿಜಯಪುರ ಅನುಗ್ರಹ ಕಣ್ಣಿನ ಸಂಸ್ಥಾಪಕರಾದ.. ಡಾ ಪ್ರಭುಗೌಡ ಬಿ.ಎಲ್ ( ಚಬನೂರ) ಖ್ಯಾತ ನೇತ್ರ ತಜ್ಞ..ನವೆಂಬರ್ ಒಂದು ರಂದು ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಜ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ವೈದ್ಯ ರಾದ ಡಾ.ಪ್ರಭುಗೌಡ ಬಿ.ಎಲ್ (ಚಬನೂರ ) ಅವರಿಗೆ ನೀಡಿದರು..

Be the first to comment

Leave a Reply

Your email address will not be published.


*