ಜಿಲ್ಲಾ ಸುದ್ದಿಗಳು
ಲಿಂಗಸ್ಗೂರು:
ಪಟ್ಟಣ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ 28 ತಿಂಗಳುಗಳಿಂದ ಅಂದರೆ ಏಪ್ರಿಲ್ 2019 ರಿಂದ ಇಲ್ಲಿಯವರೆಗೆ ವೇತನ ಪಾವತಿ ಮಾಡದ ಆಡಳಿತ ವರ್ಗದ ಧೋರಣೆ ಖಂಡಿಸಿ ಸಾಂಕೇತಿಕ ಧರಣಿ ನಡೆಸಿದರು.
ಎರಡು ವರೆ ವರ್ಷಗಳಿಂದ ವೇತನ ನೀಡದೆ ನಮ್ಮ ಕುಟುಂಬದ ಆರ್ಥಿಕ ವ್ಯವಸ್ಥೆ ತುಂಬಾ ಹದಗೆಟ್ಟಿದ್ದು ಜೀವನೋಪಾಯ ತುಂಬಾ ಕಷ್ಟಕರವಾಗಿದ್ದು. ನಮಗೆ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ತಾವುಗಳು ವೇತನ ಕೇಳಿದರೆ ಮೇಲಾಧಿಕಾರಿಗಳ ಅನುಮೋದನೆ ಆಗುವವರೆಗೂ ವೇತನ ಪಾವತಿ ಮಾಡಲು ಆಗುದಿಲ್ಲವೆಂದು ಹೇಳುತ್ತಿದ್ದುದ್ದರಿಂದ
20-12-2021 ರಿಂದ ಸೋಮವಾರದಿಂದ ಕೆಲಸಕ್ಕೆ ಹಾಜರಾಗದೇ ಕೆಲಸನಿರ್ವಹಿಸುವುದಿಲ್ಲವೆಂದು ಹೋರಾಟ ನಿರತ ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಸಿಬ್ಬಂದಿಗಳು ರಾಜಪ್ಪ, ಅಮ್ಜದ್, ಅಮರಪ್ಪ ಹನುಮೇಶ್, ತುಳಸಮ್ಮ, ನೀಲಮ್ಮ, ಪದ್ಮ, ಹನುಮಂತ, ಬಿಮಣ್ಣ, ವೀರೇಶ್, ಜಡಿಯಪ್ಪ, ಚಾಂದ್ ಪಾಶ, ರಿಯಾಜ್, ಹುಸೇನಸಾಬ, ಅಜಿಮ್ ಪಾಶ, ಮಾನಪ್ಪ, ಲಕ್ಷ್ಮಣ, ಯಂಕಪ್ಪ, ಮೌನೇಶ್, ಗಂಗಾಧರ್, ಅಮರೇಶ್ R, ಯಂಕೊಬ್, ದೇವಪ್ಪ, ಉಸ್ಥಾನ್ ಗಣಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment