ಯಲಹಂಕ ವಲಯ ಪೊಲೀಸ ಇಲಾಖೆಯಿಂದ ಬಡಜನರಿಗೆ ಆಹಾರ ಕಿಟ್ ವಿತರಣೆ…!!! ಕೊರೊನಾ ವೈರಾನು ನಿರ್ಲಕ್ಷಬೇಡ: ಡಿಸಿಪಿ ಸಿ.ಕೆ.ಬಾಬಾ ಅವರಿಂದ ಜನ ಜಾಗೃತಿ

ವರದಿ: ಆಕಾಶ ಚಲವಾದಿ

ರಾಜ್ಯ ಸುದ್ದಿಗಳು

CHETAN KENDULI

ಬೆಂಗಳೂರು:

ಕೊರೊನಾ 2ನೇ ಅಲೆ ಎಲ್ಲ ವಲಯದ ಜನರನ್ನೂ ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಮದ್ಯಮ ವರ್ಗದ ಜನರಿಗೆ ಆರ್ಥಿಕವಾಗಿ ತೊಂದರೆಯಾದರೆ ಕೆಲಮಟ್ಟದ ಜನರಿಗೆ ಒಂದು ದಿನ ಕಳೆಯುವುದೂ ಕಷ್ಟಕರವಾಗುವಂತೆ ಮಾಡಿದೆ. ಇಂತಹ ವರ್ಗದ ಜನರಿಗೆ ಅಲ್ಪಮಟ್ಟಿಗೆ ಸಹಾಯವಾಗಲೆಂದು ಪೊಲೀಸ ಇಲಾಖೆಯಿಂದ ದಿನಸಿ ವಸ್ತುಗಳೊಂದಿಗೆ ಅಗತ್ಯ ವಸ್ತಗಳನ್ನು ಪೊರೈಸಲಾಗುತ್ತಿದೆ ಎಂದು ಯಲಹಂಕ ಉತ್ತರ ಭಾಗದ ಉಪ ಪೊಲೀಸ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹೇಳಿದರು.
ಬೆಂಗಳೂರಿನ ಯಲಹಂಕದ ವಿದ್ಯಾರಣ್ಯಪುರದ ಯಲಹಂಕ ಉತ್ತರ ಭಾಗದ ಉಪ ಪೊಲೀಸ ವರಿಷ್ಠಾಧಿಕಾರಿ ಹಾಗೂ ಸಹಾಯಕ ಪೊಲೀಸ ಆಯುಕ್ತರ ನೇತೃತ್ವದಲ್ಲಿ ಬಸ ಜನರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.



ಇದು ಕೊರೊನಾ ಪ್ರಥಮ ಹಂತದಿಂದ ಎರಡನೇ ಹಂತದವರೆಗೆ ಸಾಕಷ್ಟು ಸಂಕಷ್ಟುಗಳನ್ನು ಎದುರಿಸಿ ಎಲ್ಲರೂ ಬಂದು ನಿಂತಿದ್ದೇವೆ. ಆದರೆ ವೈದ್ಯರು ಇನ್ನೂ ಮೂರನೇ ಹಂತದ ಮುಂಜಾಗೃತೆಯನ್ನು ನೀಡಿದ್ದು ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸದ್ಯಕ್ಕೆ ಕೊರೊನಾ ಅಲೆ ಕಡಿಮೆಯಾಗುತ್ತಿದೆ. ಆದರೆ ಜನರು ಯಾವುದೇ ಕಾರಣಕ್ಕೂ ಕೊರೊನಾ ವೈರಾನುವನ್ನು ನಿರ್ಲಕ್ಷ ಮಾಡಬಾರದು. ಮೂರನೇ ಹಂತದ ಸೂಚನೆ ನೀಡಿದ್ದು ಎಲ್ಲರೂ ಎಚ್ಚರಿಕೆಯಿಂದ ಇದ್ದರೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ ಎಂದು ಅವರು ಹೇಳಿದರು.


ಯಲಹಂಕ ಉತ್ತರಭಾಗದ ಸಹಾಯಕ ಪೊಲೀಸ ಆಯುಕ್ತ ಜೈರಾಮ ಮಾತನಾಡಿ, ಕೊರೊನಾ ವೈರಾನು ಬಗ್ಗೆ ಭಯಪಡಬೇಡಿ. ಆದರೆ ಎಚ್ಚರಿಕೆಯಿಂದ ಇರುವುದು ಅತೀ ಅವಶ್ಯಕವಾಗಿದೆ. ಕೊರೊನಾ ಅಲೆಯಿಂದ ಎಲ್ಲ ವರ್ಗದ ಜನರಿಗೂ ತೊಂದರೆಯಾಗಿದೆ. ಸದ್ಯಕ್ಕೆ ಕ್ರಮೀಣ ಕಡಿಮೆಯಾಗುತ್ತಿರುವ ಕೊರೊನಾ ಅಲೆಯ ಬಗ್ಗೆ ನಿರ್ಲಕ್ಷ ವಹಿಸದೇ ಮುಂದಿನ ದಿನಗಳಲ್ಲಿಯೂ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಇದೇ ವೆಳೆಯಲ್ಲಿ ಯಲಹಂಕ ಉತ್ತರ ಭಾಗದ ಉಪ ಪೊಲೀಸ ವರಿಷ್ಠಾಧಿಕಾರಿ ಹಾಗೂ ಸಹಾಯಕ ಪೊಲೀಸ ಆಯುಕ್ತರು ಸೇರಿದಂತೆ ಪೊಲೀಸ ಸಿಬ್ಬಂದಿ ವರ್ಗದ ನೇತೃತ್ವದಲ್ಲಿ ಹಾಲು, ಬಿಸ್ಕೆಟ್ ಒಳಗೊಂಡ ಆಹಾರ ಕಿಟ್, ಸ್ಯಾನಿಟೈಜರ್, ಮಾಸ್ಕಗಳನ್ನು ಸಾವಿರಕ್ಕೂ ಹೆಚ್ಚು ಜನರಿಗೆ ವಿತರಣೆ ಮಾಡಲಾಯಿತು.

Be the first to comment

Leave a Reply

Your email address will not be published.


*