ಗಣಿಗಾರಿಕೆ ಸ್ಪೋಟದಿಂದಾಯಿತೇ ಪಂಚಗಿರಿಗೆ ನಡುಕ ನಂದಿಬೆಟ್ಟದ ಬಳಿ ಭೂ ಕುಸಿತಕ್ಕೆ ಮಳೆನಾ ಅಥವಾ ಗಣಿಗಾರಿಕೆಯೇ ಯಕ್ಷ ಪ್ರಶ್ನೆ?

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಬಳಿ ಭೂಕುಸಿತಕ್ಕೆ ಸಂಬಂಧಿಸಿದಂತೆ, ಕಳೆದ ರಾತ್ರಿ ಬಿದ್ದ ಮಳೆನಾ ಅಥವಾ ಗಣಿಗಾರಿಕೆಯಾ ಎಂಬ ಯಕ್ಷ ಪ್ರಶ್ನೆ ಜನಸಾಮಾನ್ಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.

CHETAN KENDULI

ಶತಮಾನಗಳಿಂದ ಮಳೆ ಬಿಳುತ್ತಲೇ ಇದೆ. ಯಾವ ಭೂಕುಸಿತವೂ ಕಂಡಿರಲಿಲ್ಲ. ರಾಜ್ಯದ ಶಿವಮೊಗ್ಗದ ಭೂಮಿ ಕುಸಿಯುತ್ತದೆ ಅಂದರೆ ಅದು ಮಣ್ಣಿನಿಂದ ಕೂಡಿರುವಂತಹದ್ದು, ಆದರೆ, ನಂದಿ ಬೆಟ್ಟವೂ ಏಕ ಶಿಲೆಯಿಂದ ಕೂಡಿದೆ ಹೀಗಿರುವಾಗ ಭೂ ಕುಸಿತ ಎಂದರೆ ಅದು ಅನುಮಾನವಾಗಿದೆ. ಪಂಚಗಿರಿಗಳಾದ ಸ್ಕಂದಗಿರಿ, ಬ್ರಹ್ಮಗಿರಿ, ನಂದಿಗಿರಿ, ದಿಬ್ಬಗಿರಿ ಮತ್ತು ಚನ್ನಗಿರಿ ಬೆಟ್ಟಗಳನ್ನು ಕೂಡಿರುತ್ತದೆ. ಬ್ರಹ್ಮಗಿರಿಯಲ್ಲಿ ನೆನ್ನೆಯಷ್ಟೇ ಭೂಕುಸಿತವಾಗಿದೆ.

ಭೂಕುಸಿತಕ್ಕೆ ಗಣಿಗಾರಿಕೆ ಕಾರಣವಾಗಿರಬಹುದೇ: ನಂದಿ ಗಿರಿಧಾಮದ ಸುತ್ತಲು ಸುಮಾರು ೫-೧೦ಕಿ.ಮೀ. ಹೊರವಲಯದ ಹಲವು ಭಾಗದ ಸ್ಕಂದಗಿರಿ, ಚನ್ನಗಿರಿ ತಪ್ಪಲಿನಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳ ಕಾರ್ಯ ಬೃಹತ್ ಮಟ್ಟದಲ್ಲಿ ನಡೆಯುತ್ತಿದೆ. ಸುಮಾರು ೧೦-೧೫ವರ್ಷಗಳ ಹಿಂದೆ ನಂದಿ ತಪಲನ್ನು ಸೇಫರ್‌ಝೋನ್ ಮಾಡಬೇಕೆಂದು ಮಾಡಲಾಗಿತ್ತು. ಒಂದು ಕಡೆ ಸರಕಾರ ಗಣಿಗಾರಿಕೆ ಮತ್ತು ಮತ್ತೊಂದೆಡೆ ಭೂಮಿ ಕೊರೆಯುವುದಕ್ಕೆ ಅವಕಾಶ ನೀಡಿದೆ. ಸುತ್ತಮುತ್ತಲಿನ ಗಣಿಗಾರಿಕೆ ಬ್ಲಾಸ್ಟಿಂಗ್‌ನಿಂದ ಈ ರೀತಿಯ ಭೂಮಿಯ ಕೆಲವು ಭಾಗಗಳಲ್ಲಿ ಈ ಘಟನೆಗಳು ನಡೆಯಲು ಮುಖ್ಯ ಕಾರಣವಾಗಬಹುದು. ಉದಾಹರಣೆಗೆ ದೇವನಹಳ್ಳಿಯ ಕೊಯಿರ, ತೈಲಗೆರೆ ಸುತ್ತಮುತ್ತಲು ನಡೆಯುತ್ತಿರುವ ಕಲ್ಲುಗಣಿಗಾರಿಕೆ ಮತ್ತು ಸ್ಪೋಟದಿಂದಾಗಿ ಕೊಯಿರ ಬೆಟ್ಟದ ಚೋಳರ ಕಾಲದ ಗುಹೆಗಳು ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಗಣಿಗಾರಿಕೆಯಿಂದಾಗಿ ಈ ರೀತಿಯ ಭೂಕುಸಿತವಾಗಿದೆ ಎಂಬ ಅನುಮಾನ ಜನಸಾಮಾನ್ಯರಲ್ಲಿ ಕಾಡುತ್ತಿದೆ.ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 25ಕಿ.ಮೀ. ಅಂತರದಲ್ಲಿ ಯಾವುದೇ ಗಣಿಗಾರಿಕೆ ನಡೆಯಬಾರದೆಂಬ ಸರಕಾರದ ಆದೇಶವಿದೆ. 25ಕಿ.ಮೀ. ಅಂತರದಲ್ಲಿ ಅಂದರೆ, ನಂದಿಬೆಟ್ಟವೂ ಸಹ ಸೇರಿಕೊಳ್ಳುತ್ತದೆ. ಬೆಟ್ಟದ ಸುತ್ತಲು ಸರಕಾರ ಸಂರಕ್ಷಣಾ ವಲಯವನ್ನಾಗಿಸಬೇಕು.

ಗಣಿಗಾರಿಕೆಯನ್ನು ಸ್ಥಗಿತಗೊಳಸಬೇಕು. ನಗರೀಕರಣದ ಮೇಲೆ ಹಿಡಿತವಿರಬೇಕು. ಅಕ್ರಮ ಲೇಔಟ್‌ಗಳಿಗೆ ಕಡಿವಾಣವಾಗಬೇಕು. ಬೆಟ್ಟದ ಮೇಲೆ ರೇಸಾರ್ಟ್ ಮಾಡುವುದು, ಇತರೆ ಬೆಟ್ಟಕ್ಕೆ ತೊಂದರೆಯಾಗುವಂತೆ ಯಾವುದೇ ಬೃಹತ್ ಮಟ್ಟದ ಕಾಮಗಾರಿಗಳು ನಡೆಯಬಾರದೆಂಬುವುದು ಸಾರ್ವಜನಿಕರ ಒತ್ತಾಯವಾಗಿದೆ

.ಕೊಯಿರ ಚಿಕ್ಕೇಗೌಡ*, *ಆರ್‌ಟಿಐ ಕಾರ್ಯಕರ್ತ*ನಂದಿಗಿರಿಧಾಮದ ಬಳಿ ಸ್ಕಂದಗಿರಿ ಮತ್ತು ಚನ್ನಗಿರಿ ಮಧ್ಯೆ ಕಣಿವೆ ನಾರಾಯಣಪುರವಿದೆ.ಅಲ್ಲಿ ಬೋರ್‌ವೆಲ್‌ಗಳನ್ನಿಟ್ಟು ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಸರಕಾರ ನಂದಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಬೆಟ್ಟಗಳ ಉಳಿವಿಗೆ ಮೊದಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು. ಏಕಶಿಲೆ ನಂದಿ ಬೆಟ್ಟದ ಬಳಿ ಗುಡ್ಡ ಮಳೆಯಿಂದಾಗಿ ಕುಸಿದಿದೆ ಎಂದರೆ ಅದು ಅನುಮಾನವಾಗಿದೆ. ಶತಮಾನಗಳಿಂದ ಭೂಕುಸಿತ ಕಂಡಿರಲಿಲ್ಲ. ಈ ರೀತಿಯ ನಿರೀಕ್ಷೆಯೂ ಸಹ ಮಾಡಿರಲಿಲ್ಲ. ಗಣಿಗಾರಿಕೆ ಮತ್ತು ಭೂಕೊರೆತವೇ ಭೂ ಕುಸಿತಕ್ಕೆ ಕಾರಣವಾಗಿರಬಹುದು ಎಂದು ಅಭಿಪ್ರಾಯ ಹಂಚಿಕೊಂಡರು.

Be the first to comment

Leave a Reply

Your email address will not be published.


*