ರಾಜ್ಯ ಸುದ್ದಿಗಳು
ಭಟ್ಕಳ
ಭಟ್ಕಳ ತಾಲೂಕಾಸ್ಪತ್ರೆ ಎದುರಿನ ರಿಕ್ಷಾ ನಿಲ್ದಾಣಕ್ಕೆ ಶಾಸಕ ಸುನೀಲ ನಾಯ್ಕ ತಮ್ಮ ಸ್ವಂತ ಖರ್ಚಿನಲ್ಲಿ ನಿಲ್ದಾಣದ ಮೇಲ್ಚಾವಣಿ ಹೊದಿಕೆ ಹಾಕಿಸಿಕೊಟ್ಟು ಅವರ ನೆರವಿಗೆ ನಿಂತಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಿದರು.ಉದ್ಘಾಟನೆ ಬಳಿಕ ಮಾತನಾಡಿದ ಶಾಸಕ ಸುನೀಲ ನಾಯ್ಕ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿರುವರೆಂದರೆ ಅದು ರಿಕ್ಷಾ ಚಾಲಕರಾಗಿದ್ದರೆ. ಕಳೆದ ೨ ವರ್ಷಗಳಿಂದ ಕೋವಿಡ್ ಸಂಕಷ್ಟದಿಂದ ಕಾಲ ಕಳೆದಿದ್ದಾರೆ ಇನ್ನೊಂದೆಡೆ ಇಂದಿನ ದಿನದಲ್ಲಿ ದಿನ ನಿತ್ಯ ಆಟೊ ರಿಕ್ಷಾಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು ಹೀಗೆ ಆಟೋ ಚಾಲಕರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಆಟೋ ಚಾಲಕರಿಗೆ ನನ್ನಿಂದ ಏನಾದರೊಂದು ಸಹಾಯ ಮಾಡಬೇಕೆಂಬ ಉದ್ದೇಶ ದಿಂದ ಈ ಕೆಲಸ ಮಾಡುತ್ತಿದ್ದೇನೆ
ನಾನು ಸರ್ಕಾರದ ನಿಧಿಯಿಂದ ರಿಕ್ಷಾ ನಿಲ್ದಾಣ ಮೇಲ್ಛಾವಣಿ ಕೆಲಸ ಮಾಡಿಸುಬಹುದಿತ್ತು ಆದರೆ ಆ ರೀತಿ ಮಾಡದೆ ನನ್ನ ವೈಯಕ್ತಿಕ ಕೊಡುಗೆ ಕೊಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದೇನೆ ಎಂದ ಅವರು ಮತ ಕ್ಷೇತ್ರದಲ್ಲಿ ಈಗಾಗಲೇ ೧೪ ರಿಂದ ೧೫ ಕಡೆಯಲ್ಲಿ ರಿಕ್ಷಾ ನಿಲ್ದಾಣದ ಮೇಲ್ಚಾವಣಿ ನಿರ್ಮಿಸಿಕೊಟ್ಟಿದ್ದೇನೆ. ಮುಂದಿನ ದಿನದಲ್ಲಿ ತಾಲೂಕಿನ ೧೦೦ಕ್ಕೂ ಅಧಿಕ ರಿಕ್ಷಾ ನಿಲ್ದಾಣದ ಮೇಲ್ಛಾವಣಿಯ ಅವಶ್ಯಕತೆ ಇದ್ದಲ್ಲಿ ನಿರ್ಮಿಸಿಕೊಡುವಲ್ಲಿ ಸಿದ್ಧನಿದ್ದೇನೆ ಎಂದರು.‘ಬಾಲ್ಯದಿಂದಲೂ ಆಟೋ ಚಾಲಕರ ಮೇಲೆ ನನಗೆ ಪ್ರೀತಿ ಇದ್ದು ಕಾರಣ ನಾನು ಶಾಲೆಗೆ ಹೋಗಿ ಮನೆಗೆ ಬರುವ ವೇಳೆ ಹಣ ಪಡೆಯದೆ ಅದೆಷ್ಟೋ ಆಟೋ ಚಾಲಕರು ನನ್ನನ್ನು ಮನೆಗೆ ತಲುಪಿಸುತ್ತಿದ್ದರು ಎಂದು ತಮ್ಮ ಬಾಲ್ಯದ ನೆನಪು ಮಾಡಿಕೊಂಡರುನಂತರ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ ಇಲ್ಲಿನ ಆಟೋ ಚಾಲಕರು ಮತ್ತು ನಮ್ಮ ಆಸ್ಪತ್ರೆಯ ಸಂಬಂದ ಒಂದು ಕುಟುಂಬದ ಹಾಗೆ ಇದ್ದು
ಆಸ್ಪತ್ರೆಯಲ್ಲಿ ಯಾವುದೇ ಒಳ್ಳೆ ಕಾರ್ಯವಾದರೆ ಆಸ್ಪತ್ರೆಯ ಸಿಬ್ಬಂದಿಗಳ ಜೊತೆಯಲ್ಲಿ ಇಲ್ಲಿನ ಆಟೋ ರಿಕ್ಷಾ ಚಾಲಕರು ಕೂಡ ನಮ್ಮಷ್ಟೇ ಸಂತೋಷ ಪಡುತ್ತಾರೆ.ಇದೆ ರೀತಿ ಆಸ್ಪತ್ರೆಯಲ್ಲಿ ಯಾವುದೇ ತರಹದ ಅಹಿತಕರ ಘಟನೆ ನಡೆದಲ್ಲಿ ನಮ್ಮ ಆಸ್ಪತ್ರೆಯ ಸಿಬ್ಬಂದಿಗಳು ನೋವು ಪಡುತ್ತಾರೋ ಅಷ್ಟೇ ನೋವು ಇಲ್ಲಿನ ಆಟೋ ಚಾಲಕರು ಕೂಡ ಅಷ್ಟೇ ನೋವು ಪಡುತ್ತಾರೆಂದ ಅವರು ನಮ್ಮ ಆಸ್ಪತ್ರೆಯ ಅಭಿವೃದ್ಧಿಯಲ್ಲಿ ನಮ್ಮ ಬೆಂಬಲಕ್ಕೆ ನಿಂತಿರುದಕ್ಕೆ ಆಟೋ ಚಾಲಕರಿಗೆ ಧನ್ಯವಾದ ತಿಳಿಸಿದರುಇದಕ್ಕೂ ಪೂರ್ವದಲ್ಲಿ ಶಾಸಕ ಸುನೀಲ ನಾಯ್ಕರನ್ನು ಶಂಸುದ್ದಿನ್ ಸರ್ಕಲ್ ನಿಂದ ಆಟೋ ಚಾಲಕರು ಆಟೋ ರ‍್ಯಾಲಿ ಮುಖಾಂತರ ಆಟೋ ನಿಲ್ದಾಣಕ್ಕೆ ಕರೆದುಕೊಂಡು ಬಂದರು ಈ ವೇಳೆ ಖುದ್ದು ತಾವೇ ರಿಕ್ಷಾ ಚಲಾಯಿಸಿ ಉಳಿದ ಎಲ್ಲಾ ಆಟೋ ಚಾಲಕರ ಗಮನ ಸೆಳೆದರು.
ನಂತರ ಆಟೋ ಚಾಲಕರ ಸಂಘದಿಂದ ಶಾಸಕ ಸುನೀಲ ನಾಯ್ಕ ,ತಾಲೂಕಾಸ್ಪತ್ರೇಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ, ಹಿರಿಯ ಸಮಾಜ ಸೇವೆಕ ಎಲ್.ಎಸ್ ನಾಯ್ಕಕೃಷ್ಣ ನಾಯ್ಕ ಆಸರಕೇರಿ, ಹಾಗೂ ತಾಲೂಕಾಸ್ಪತ್ರೆಯ ಸರ್ಜನ್ ಡಾ.ಅರುಣ್ ಕುಮಾರರರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಆಟೋ ರಿಕ್ಷಾ ಮಾಲಕ ಹಾಗೂ ಚಾಲಕ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಮುಂತಾದವರು ಉಪಸ್ಥಿತರಿದ್ದರು.
Be the first to comment