ವಾಲ್ಮೀಕಿ ವೃತ್ತದಲ್ಲಿ ಪುಣ್ಯಾನಂದಪುರಿಗಳ ಪುಣ್ಯಸ್ಮರಣೆ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಏ5 ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಗಳ ಪುಣ್ಯಸ್ಮರಣೆ ಹಾಗೂ 15ನೇ ವರ್ಷದ ಗುರು ಕಾರ್ಯಕ್ರಮವನ್ನು ಮಸ್ಕಿಯ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ಬೆಳಗ್ಗೆ 11:00 ಗಂಟೆಗೆ ನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಭೀಮಣ್ಣ ಕಾಚಾಪುರ ಪ್ರಾಸ್ತಾವಿಕವಾಗಿ ಮಾತನಾಡಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿಗಳು ಮೀಸಲಾತಿ ಹೆಚ್ಚಳಕ್ಕಾಗಿ ಕಳೆದ 54 ದಿನಗಳಿಂದ ಸತ್ಯಾಗ್ರಹ ಮಾಡುತ್ತಿದ್ದಾರೆ.ಎಲ್ಲಾ ಶಾಸಕರು ಸಚಿವರುಗಳು ಬಂದು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಸಮಂಜಸವಾದ ನಡೆಯಲ್ಲ, ಹೀಗೆ ಮುಂದುವರೆದರೆ ರಾಜ್ಯಾದ್ಯಂತ ಹಳ್ಳಿ ,ಹೋಬಳಿ, ತಾಲೂಕು ಜಿಲ್ಲೆಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

CHETAN KENDULI

ಈ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲೆಯ ಸ್ವಾಭಿಮಾನಿ ಸಂಘದ ಜಿಲ್ಲಾಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ್ ಕಾಟಗಲ್, ಬಸನಗೌಡ ಪೊಲೀಸ್ ಪಾಟೀಲ್, ಚೇತನ್ ಪಾಟೀಲ್, ವೆಂಕಟೇಶ್ ಗುಡಿಸಲಿ, ವೆಂಕಟೇಶ್ ನಾಯಕ್ ಕೋಳಬಾಳ, ಬಸಪ್ಪ ತುಗ್ಗಲ ದಿನ್ನಿ, ರವಿಕುಮಾರ್ ಬೆಳ್ಳಿಗನೂರು, ಹನುಮಂತಪ್ಪ ಶಿಕ್ಷಕರು, ರಾಕೇಶ್ ಪಾಟೀಲ್, ಬಸವರಾಜ ಉದ್ಬಾಳ, ಅಮರೇಶ್ ಮಸ್ಕಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*