ರಾಜ್ಯ ಸುದ್ದಿಗಳು
ಮಸ್ಕಿ
ತಾಲೂಕಿನ ಉಸ್ಕಿಹಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಗ್ರಾಮಸ್ತರು ಮತ್ತು ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಅನಿರ್ಧಿಷ್ಟಾವಧಿ ಧರಣಿ ನಡೆಸಿದರು. ಈ ಶಾಲೆಯು 73 ವಿದ್ಯಾರ್ಥಿಗಳನ್ನು ಹೊಂದಿದ್ದು, ಖಾಯಂ ಶಿಕ್ಷಕರ ಕೊರತೆ ಹಾಗೂ ಅಥಿತಿ ಶಿಕ್ಷಕರಂತೂ ಕೇಳಲೇ ಬೇಡಿ,ಇಲ್ಲಿ ಒಬ್ಬ ಶಿಕ್ಷಕರೇ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಭೋಧನೆ ಮಾಡುವರು. ಇಂದು ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮದ ಮುಖಂಡರ ಸಮ್ಮುಖದಲ್ಲೇ ಅನಿರ್ಧಿಷ್ಟ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಒಟ್ಟು ಮೂರು ಶಿಕ್ಷಕರ ಹುದ್ದೆ ಖಾಲಿ ಇದ್ದು, ಖಾಯಂ ಶಿಕ್ಷಕರ ನೇಮಕ ಆಗುವವರೆಗೆ ನಮ್ಮ ಹೋರಾಟ ನಿಲ್ಲದು ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಮಾರಲದಿನ್ನಿ ಸಿ ಆರ್ ಪಿ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಎಂದರರು ಆದರೂ ಪ್ರಯೋಜನವಾಗಿಲ್ಲ. ಇಷ್ಟಾದರೂ ಶಿಕ್ಷಣ ಇಲಾಖೆಯು ಎಚ್ಚೆತ್ತುಕೊಳ್ಳದೆ ಹೋದರೆ ಮುಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ತರು ಉಗ್ರ ಹೋರಾಟವನ್ನೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆಗೆ ಎಚ್ಚರಿಸಿದ್ದಾರೆ.
ಬಾಕ್ಸ ನಮ್ಮ ಉಸ್ಕಿಹಾಳ ಗ್ರಾಮದ ಶಾಲೆ ಶುರು ಆದಾಗಿನಿಂದಲೂ ಒಬ್ಬೇ ಒಬ್ಬರು ಖಾಯಂ ಶಿಕ್ಷಕರ ನೇಮಕ ಮಾಡಲಾಗಿಲ್ಲ, ಹಾಗೂ ಅತಿಥಿ ಶಿಕ್ಷಕರ ನೇಮಕವಂತು ಕೇಳಲೇಬೇಡಿ, ಈ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ತಾಲೂಕ ಶಿಕ್ಷಣ ಆಡಳಿತ ನಿರ್ಲಕ್ಷ್ಯ ವಹಿಸಿದೆ.ಮಾರುತಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಉಸ್ಕಿಹಾಳ,ಬಾಕ್ಸ್ಖಾಯಂ ಶಿಕ್ಷಕರ ನೇಮಕ ಮಾಡುವವರೆಗೆ ಒಬ್ಬ ಖಾಯಂ ಶಿಕ್ಷಕನಿಗೆ ನೀಡುವ ವೇತನದಲ್ಲಿಯಾದರು ಬಿಇಡಿ ಮತ್ತು ಡಿಇಡಿ ಮುಗಿಸಿದ ಪ್ರತಿಭಾವಂತ ಏಷ್ಟೋ ಯುವಕ ಯುವತಿಯರು ನಿರುದ್ಯೋಗಿಗಳಿದ್ದಾರೆ ಅಂತಹವರನ್ನು ಗುರುತಿಸಿ ಮೂರು ಜನ ಅತಿಥಿ ಶಿಕ್ಷಕರ ನೇಮಕ ಮಾಡಬಹುದಲ್ಲವೇ…? ಶಿಕ್ಷಣ ಇಲಾಖೆಯು ಹಣವನ್ನು ಉಳಿಸುವ ಜಾಣತನಕ್ಕಿಂತ ವಿದ್ಯಾರ್ಥಿಗಳ ಭವಿಷ್ಯವನ್ನು ಅರಿಯಬೇಕು. ರಮೇಶ ಗ್ರಾಮ ಪಂಚಾಯಿತಿ ಸದಸ್ಯರು ಉಸ್ಕಿಹಾಳ,
ಇದೇ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಮಾರುತಿ, ಎಸ್.ಡಿ.ಎಂ.ಸಿ ಸದಸ್ಯರುಗಳಾದ ಶೇಖರಪ್ಪ,ಮರಿಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಮೇಶ, ನಾಗಪ್ಪ, ಗ್ರಾಮದ ಮುಖಂಡರುಗಳಾದ ಕನಕರಾಯ ಪಾಟೀಲ್, ಮೌನೇಶ,ಮಹಾದೇವಪ್ಪ ಅಂಕುಶದೊಡ್ಡಿ, ಮಾನಪ್ಪ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ರಂಗನಗೌಡ ಪೊಲೀಸ್ ಪಾಟೀಲ್, ಈರಪ್ಪ ಅಡವಿಭಾವಿ, ಮಲ್ಲೇಶ್ ಮಾಲಿಪಾಟೀಲ್,ಹನುಮನಗೌಡ,ಭೀಮಸೇನ ಅಡವಿಭಾವಿ ಸೇರಿದಂತೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸರ್ವ ವಿದ್ಯಾರ್ಥಿಗಳು ಇದ್ದರು.
Be the first to comment